Site icon Vistara News

Viral Video | ತಾಯಿಯ ಕೆನ್ನೆ ಹಿಡಿದು ಕೀಟಲೆ ಮಾಡಿದ ರಾಹುಲ್‌ ಗಾಂಧಿ, ಮಗನ ಚೇಷ್ಟೆಗೆ ನಕ್ಕ ಸೋನಿಯಾ, ಕ್ಯೂಟ್ ವಿಡಿಯೊ ನೋಡಿ

Rahul Gandhi And Sonia Gandhi

ನವದೆಹಲಿ: ‘ಊರಿಗೆ ಅರಸನಾದರೂ ತಾಯಿಗೆ ಮಗ’ ಎಂಬ ಮಾತಿದೆ. ಈ ಮಾತಿಗೆ ತಾಜಾ ನಿದರ್ಶನ ಎಂಬಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಅವರ ಕೆನ್ನೆ ಹಿಡಿದು ಕೀಟಲೆ ಮಾಡಿದ್ದಾರೆ. ಮಗನ ಚೇಷ್ಟೆ ಕಂಡ ಸೋನಿಯಾ ಗಾಂಧಿ ನಕ್ಕಿದ್ದಾರೆ. ಈ ವಿಡಿಯೊ ಈಗ (Viral Video) ಆಗಿದೆ.

ಕಾಂಗ್ರೆಸ್‌ನ 138ನೇ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ರಾಹುಲ್‌ ಗಾಂಧಿ ಅವರು ತಾಯಿಯ ಕೆನ್ನೆ ಹಿಂಡಿದ್ದಾರೆ. ವಿಡಿಯೊ ವೈರಲ್‌ ಆಗುತ್ತಲೇ ಜನ ಪ್ರತಿಕ್ರಿಯಿಸಿದ್ದಾರೆ. ‘ಇದು ಕ್ಯೂಟ್‌ ವಿಡಿಯೊ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, ‘ತಾಯಿ ಮಗನ ಬಾಂಧವ್ಯಕ್ಕೆ ಇದು ಸಾಕ್ಷಿ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ನೂರಾರು ಜನ ರಾಹುಲ್‌ ಗಾಂಧಿ ತುಂಟಾಟವನ್ನು ಮೆಚ್ಚಿದ್ದಾರೆ.

ಭಾರತ್‌ ಜೋಡೋ ಯಾತ್ರೆಯು ದೆಹಲಿಗೆ ಪ್ರವೇಶಿಸುತ್ತಲೇ ರಾಹುಲ್‌ ಗಾಂಧಿ ಅವರು ತಾಯಿಯನ್ನು ಅಪ್ಪಿಕೊಂಡಿದ್ದರು. ಈ ಫೋಟೊಗಳು ಕೂಡ ವೈರಲ್‌ ಆಗಿದ್ದವು. ಭಾರತ್‌ ಜೋಡೋ ಯಾತ್ರೆಯ ವೇಳೆಯೇ ರಾಹುಲ್‌ ಗಾಂಧಿ ಅವರು ಸೋನಿಯಾ ಗಾಂಧಿ ಶೂ ಧರಿಸಲು ನೆರವಾಗಿದ್ದರು.

ಇದನ್ನೂ ಓದಿ | ಮೂಕಗೊಂಬೆಯೇ ಮುಂದೆ ಭಾರತದ ಉಕ್ಕಿನ ಮಹಿಳೆಯಾದಳು, ನೆನಪಿರಲಿ; ಪಪ್ಪು ಎನ್ನುವವರಿಗೆ ರಾಹುಲ್​ ಗಾಂಧಿ ತಿರುಗೇಟು

Exit mobile version