Site icon Vistara News

Tapasvi vs Pujari | ಇದು ತಪಸ್ವಿಗಳ ದೇಶ, ಅರ್ಚಕರ ದೇಶವಲ್ಲ ಎಂದ ರಾಹುಲ್‌ ಗಾಂಧಿ, ಬಿಜೆಪಿ, ಅರ್ಚಕರಿಂದ ಭಾರಿ ಆಕ್ರೋಶ

Rahul Gandhi On Pujaris

ಚಂಡೀಗಢ: ಭಾರತ್‌ ಜೋಡೋ ಯಾತ್ರೆಯ ಮೂಲಕ ದೇಶದ ಲಕ್ಷಾಂತರ ಜನರ ಮನ ಗೆಲ್ಲುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ವಿವಾದಾತ್ಮಕ ಹೇಳಿಕೆಗಳ ಮೂಲಕವೂ ಜನಾಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಸೇನೆ ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ರಾಹುಲ್‌ ಈಗ ಅರ್ಚಕರ (Tapasvi vs Pujari) ಕುರಿತು ಹೇಳಿಕೆ ನೀಡಿದ್ದು, ಇದು ಕೂಡ ಆಕ್ರೋಶಕ್ಕೆ ಗುರಿಯಾಗಿದೆ.

ಹರಿಯಾಣದಲ್ಲಿ ಕೈಗೊಳ್ಳುತ್ತಿರುವ ಭಾರತ್‌ ಜೋಡೋ ಯಾತ್ರೆ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ, ಅರ್ಚಕರ ವಿಷಯ ಪ್ರಸ್ತಾಪಿಸಿದ್ದಾರೆ. “ಪೂಜೆ ಮಾಡಬೇಕು ಎಂಬುದಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಒತ್ತಾಯ ಮಾಡುತ್ತಿದೆ. ಹಣ ಬಳಸಿಕೊಂಡು, ಸಂಸ್ಥೆಗಳನ್ನು ಅಕ್ರಮಿಸಿಕೊಂಡು ಒತ್ತಡ ಹಾಕುತ್ತಿದೆ. ಅಷ್ಟಕ್ಕೂ ಈ ದೇಶ ತಪಸ್ವಿಗಳದ್ದೇ ಹೊರತು, ಅರ್ಚಕರದ್ದಲ್ಲ” ಎಂದಿದ್ದಾರೆ.

ಅರ್ಚಕರು, ಬಿಜೆಪಿಯಿಂದ ಭಾರಿ ವಿರೋಧ
ರಾಹುಲ್‌ ಗಾಂಧಿ ಹೇಳಿಕೆಗೆ ಅರ್ಚಕರ ಸಮುದಾಯ ಹಾಗೂ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸಿದೆ. ಇದು ಅರ್ಚಕರಿಗೆ ಮಾಡಿದ ಅವಮಾನ ಎಂದು ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ತಪಸ್ವಿ ಅಥವಾ ಅರ್ಚಕರು ಹಿಂದು ಧರ್ಮಕ್ಕೆ ಪ್ರಮುಖರು. ಆದರೆ, ದೇಶದಲ್ಲಿ ತಪಸ್ವಿಗಳಿಗೆ ಗೌರವ ಇಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಇದು ರಾಹುಲ್‌ ಗಾಂಧಿ ಅವರ ನಿಜವಾದ ಮನಸ್ಥಿತಿ ತೋರಿಸುತ್ತದೆ. ದೇಶವನ್ನು ವಿಭಜಿಸುವ ರೂಢಿಯನ್ನು ತೋರಿಸುತ್ತದೆ” ಎಂದು ಕುಟುಕಿದ್ದಾರೆ.

ಇದನ್ನೂ ಓದಿ | Rahul Gandhi | “ನಾನಾರೆಂಬುದು ನಾನಲ್ಲ”, ನನ್ನೊಳಗಿನ ರಾಹುಲ್‌ ಗಾಂಧಿಯನ್ನು ಕೊಂದಿದ್ದೇನೆ ಎಂದ ರಾಹುಲ್, ವಿಡಿಯೊ ವೈರಲ್

Exit mobile version