ವಯನಾಡ್: ತಮ್ಮ ಲೋಕಸಭಾ ಕ್ಷೇತ್ರ ವಯನಾಡ್‌ಗೆ ಮೂರು ದಿನಗಳ ಕಾಲ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ, ಅಜ್ಜಿಯೊಬ್ಬರಿಂದ ವಾತ್ಸಲ್ಯದ ಅಪ್ಪುಗೆ ಲಭಿಸಿದೆ.
ರಾಹುಲ್ ಅವರನ್ನು ಅಪ್ಪಿಕೊಂಡು ಹರಸುತ್ತಿರುವ ವಿಡಿಯೊವನ್ನು ಕಾಂಗ್ರೆಸ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಭಾನುವಾರ ಪ್ರಕಟಿಸಲಾಗಿದೆ. ಅದರೆ, ಯಾವ ಸಂದರ್ಭದ ವಿಡಿಯೊ ಎಂಬುದನ್ನು ಹೇಳಿಲ್ಲ. ಆದರೆ, ಕಳೆದ ಶುಕ್ರವಾರದಿಂದ ವಯನಾಡ್‌ನಲ್ಲಿರುವ ರಾಹುಲ್ ಅವರನ್ನು ಭೇಟಿಯಾಗಲು ಬಂದಿರುವ ಅಭಿಮಾನಿ ಎಂಬುದಾಗಿ ಹೇಳಲಾಗುತ್ತಿದೆ.
“ಇದು ಯಾವುದೇ ಪೂರ್ವ ನಿಯೋಜಿತ ಪ್ರೀತಿ ಅಥವಾ ಪೂಜ್ಯ ಭಾವನೆಯಲ್ಲ. ತನ್ನ ದೇಶದ ಜನರಿಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡುವ ಮತ್ತು ಹೋರಾಟ ಮಾಡುವ ನಿಜವಾದ ನಾಯಕನಿಗೆ ದೊರೆಯುವಂಥದ್ದು,ʼʼ ಎಂದು ಟ್ವಿಟರ್‌ನಲ್ಲಿ ಬರೆಯಲಾಗಿದೆ.
ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರು ಜನರಿಂದ ತುಂಬಿದ ಹೋಟೆಲ್‌ನಲ್ಲಿ ಕುಳಿತಿದ್ದಾರೆ. ಜತೆಗೆ ಕೇರಳದ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಕೂಡ ಇದ್ದಾರೆ. ರಾಹುಲ್ ಅವರು ಪ್ಲೇಟ್‌ನಲ್ಲಿದ್ದ ಗೋಡಂಬಿ ಮೆಲ್ಲುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಜ್ಜಿ ರಾಹುಲ್ ಅವರ ಜತೆ ಪ್ರೀತಿಯಿಂದ ಮಾತನಾಡುತ್ತಾರೆ. ಈ ವೇಳೆ ವೇಣುಗೋಪಾಲ್ ಪ್ಲೇಟ್‌ನಲ್ಲಿದ್ದ ಗೋಡಂಬಿಯನ್ನು ಅಜ್ಜಿ ಕೈಗಿಡುತ್ತಾರೆ. ತಕ್ಷಣ ರಾಹುಲ್ ಕೂಡ ಗೋಡಂಬಿ ನೀಡುತ್ತಾರೆ. ಬಳಿಕ ಅಜ್ಜಿ ಪ್ರೀತಿಯಿಂದ ಅಪ್ಪಿಕೊಂಡು ಹರಸುತ್ತಾರೆ.
ವಿಡಿಯೊವನ್ನು ಸಾಕಷ್ಟು ಮಂದಿ ಮೆಚ್ಚಿ ಮಾತನಾಡಿದ್ದಾರೆ. ನಿಜವಾದ ನಾಯಕನ ಗುಣವಿದು ಎಂದು ಹೇಳಿದ್ದಾರೆ.
ಮೂರು ದಿನಗಳ ಭೇಟಿ
ಕಳೆದ ಶುಕ್ರವಾರ ರಾಹುಲ್ ಅವರು ವಯನಾಡ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿನ ತಮ್ಮ ಕಚೇರಿಯನ್ನು ಸಿಪಿಎಂ ಕಾರ್ಯಕರ್ತರು ಧ್ವಂಸ ಮಾಡಿದ ಹಿನ್ನೆಲೆಯಲ್ಲಿ ಅವರು ಭೇಟಿ ಗಮನ ಸೆಳೆದಿತ್ತು. ಭೇಟಿಯ ನಡುವೆ ಅವರು ಹಲವಾರು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಜತೆಗೆ ಸಾರ್ವಜನಿಕರನ್ನು ಭೇಟಿ ಮಾಡಿದ್ದರು.
ಇದನ್ನೂ ಓದಿ: Rajasthan Murder | ಧರ್ಮದ ಹೆಸರಲ್ಲಿ ಹಿಂಸೆ ಸಹಿಸಲಾಗದು ಎಂದ ರಾಹುಲ್ ಗಾಂಧಿ, ಓವೈಸಿ