ನವದೆಹಲಿ: ಟೈಮ್ಸ್ ನೌ (Times Now) ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಹುದ್ದೆಗೆ ಪತ್ರಕರ್ತ ರಾಹುಲ್ ಶಿವಶಂಕರ್ (Rahul Shivshankar) ಅವರು ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವಾಹಿನಿಯ ಉದ್ಯೋಗಿಗಳಿಗೆ ಟೈಮ್ಸ್ ನೌ ಎಚ್ಆರ್ ವಿಭಾಗವು ಈ ವಿಷಯವನ್ನು ಇ ಮೇಲ್ ಮೂಲಕ ತಿಳಿಸಿದೆ ಎಂದು ಹೇಳಲಾಗುತ್ತಿದೆ.
ಟೈಮ್ಸ್ ನೌನ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್ ಅವರು ನೆಟ್‌ವರ್ಕ್‌ನಿಂದ ಹೊರ ಹೋಗಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ತಕ್ಷಣವೇ ಚಾನೆಲ್‌ನ ಕಾರ್ಯಚಟುವಟಿಕೆಗಳು ಸಮೂಹ ಸಂಪಾದಕರಾದ ನಾವಿಕಾ ಕುಮಾರ್ ಅವರ ಉಸ್ತುವಾರಿಯಲ್ಲಿರುತ್ತವೆ. ಟೈಮ್ಸ್ ನೌ ತಂಡದ ಎಲ್ಲಾ ಕಾರ್ಯಾಚರಣಾ ಮುಖ್ಯಸ್ಥರು ನಾವಿಕಾ ಕುಮಾರ್ ಅವರಿಗೆ ವರದಿ ಮಾಡಿಕೊಳ್ಳಬೇಕು ಎಂದು ಮೇಲ್‌ನಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Keerthy Suresh: ಮದ್ವೆ ಬಗ್ಗೆ ನಾನೇ ಅಪ್‌ಡೇಟ್ ಮಾಡ್ತಿನಿ, ಅಲ್ಲಿವರೆಗೆ ಸುಮ್ನಿರಿ; ಪತ್ರಕರ್ತರ ಬಾಯ್ಮುಚ್ಚಿಸಿದ ‘ಮಹಾನಟಿ’
ಟೈಮ್ಸ್ ನೌ ಸುದ್ದಿ ವಾಹಿನಿಯನ್ನು ಸೇರುವ ಮುಂಚೆ ರಾಹುಲ್ ಶಿವಶಂಕರ್ ಅವರು ನ್ಯೂಸ್‌ಎಕ್ಸ್ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರಾಗಿದ್ದರು. 2016ರಲ್ಲಿ ಟೈಮ್ಸ್ ನೌ ಸೇರಿದ್ದ ರಾಹುಲ್ ಅವರು, ಪ್ರತಿ ರಾತ್ರಿ ಎಂಟು ಗಂಟೆಗೆ ಪ್ರೈಮ್‌ಟೈಮ್ ಶೋ ಹಾಸ್ಟ್ ಮಾಡುತ್ತಿದ್ದರು. ಪತ್ರಿಕೋದ್ಯಮದಲ್ಲಿ ಸುಮಾರು 20 ವರ್ಷಗಳ ಅನುಭವವನ್ನು ಹೊಂದಿರುವ ಅವರು ಈ ಹಿಂದೆ ಹೆಡ್‌ಲೈನ್ಸ್ ಟುಡೇ ಮತ್ತು ಇಂಡಿಯಾ ಟುಡೇ ಜತೆಗೂ ಕೆಲಸ ಮಾಡಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.