ನವದೆಹಲಿ: ಸಾಮಾನ್ಯ ಜನರಿಗೆ ರೈಲು ಪ್ರಯಾಣವನ್ನು(Train Travel) ಹೆಚ್ಚು ಆರಾಮದಾಯಕ ಮತ್ತು ವೇಗವಾಗಿ ಒದಗಿಸುವುದಕ್ಕಾಗಿ ಕೇಂದ್ರ ಸರ್ಕಾರವು (Central Government) ಅಮೃತ್ ಭಾರತ್ ಎಕ್ಸ್‌ಪ್ರೆಸ್ (Amrit Bharat Express) ರೈಲು ಸೇವೆಯನ್ನು ಆರಂಭಿಸಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಡಿಸೆಂಬರ್ 30ರಂದು ಚಾಲನೆ ನೀಡಲಿದ್ದಾರೆ. ಪುಶ್-ಪುಲ್ ರೈಲಾಗಿರುವ ಈ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಪ್ರತಿ ಗಂಟೆಗೆ 130 ಕಿ.ಮೀ ವೇಗವಾಗಿ ಚಲಿಸಲಿದೆ. ಈ ರೈಲು ವಿಶೇಷವಾಗಿ ವಲಸೆ ಕಾರ್ಮಿಕರಿಗೆ ಹೆಚ್ಚಿನ ನೆರವು ಒದಗಿಸಲಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರ ರೈಲ್ವೆ ಸಚಿವರಾಗಿರು ಅಶ್ವಿನಿ ವೈಷ್ಣವ್ ಅವರು ಈ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಕುರಿತಾದ ವಿಡಿಯೋವೊಂದನ್ನು ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿದ್ದಾರೆ. ಅಮೃತ್ ಕಾಲ್ ಕಾ ಅಮೃತ್ ಭಾರತ್ ಎಕ್ಸ್ ಪ್ರೆಸ್ ಎಂದು ಕ್ಯಾಪ್ಷನ್ ನೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ.
ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಈ ಮೊದಲು ವಂದೇ ಸಾಧಾರಣ್ ಎಂದು ಹೆಸರಿಡಲಾಗಿತ್ತು. ಈ ರೈಲು, ವಂದೇ ಭಾರತ್ ಶೈಲಿಯಲ್ಲೇ ವಿನ್ಯಾಸಗೊಳಿಸಲಾದ ಲೋಕೋಮೋಟಿವ್‌ಗಳನ್ನು ಹೊಂದಿದೆ. ಆದಾಗ್ಯೂ, ವಂದೇ ಭಾರತ್ ರೈಲುಗಳಿಗಿಂತ ಭಿನ್ನವಾಗಿ, ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಇರಲಿದೆ.
ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ವಿಡಿಯೋ ಇಲ್ಲಿದೆ
अमृत काल की अमृत भारत ट्रेन! pic.twitter.com/yegGEydJU5
— Ashwini Vaishnaw (@AshwiniVaishnaw) December 26, 2023
ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಕಿತ್ತಳೆ ಮತ್ತು ಬೂದು ಬಣ್ಣಗಳಲ್ಲಿ ಕಣ್ಮನ ಸೆಳೆಯುತ್ತಿದೆ. ಇದು ರೈಲಿನ “ಪುಶ್-ಪುಲ್” ಕಾರ್ಯಾಚರಣೆಯನ್ನು ಅನುಮತಿಸಲು ರೈಲಿನ ಪ್ರತಿ ತುದಿಯಲ್ಲಿ 6,000 ಎಚ್‌ಪಿಯೊಂದಿಗೆ WAP5 ಲೋಕೋಮೋಟಿವ್ ಎಂಜಿನ್ ಹೊಂದಿದೆ. ಪುಶ್-ಪುಲ್ ರೈಲಿನ ದೊಡ್ಡ ಪ್ರಯೋಜನವೆಂದರೆ ವೇಗವಾಗುತ್ತದೆ ಮತ್ತು ಪ್ರಯಾಣದ ಅವಧಿಯನ್ನು ಇದು ಕಿರಿದುಗೊಳಿಸುತ್ತದೆ.
ಈ ಸುದ್ದಿಯನ್ನೂ ಓದಿ: Vande Bharat Express: ಶೀಘ್ರ ಬೆಂಗಳೂರು-ಕೊಯಮತ್ತೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು