ನವದೆಹಲಿ: ಪ್ರಯಾಣಿಕಸ್ನೇಹಿ ಸೇವೆಗಳನ್ನು ಒದಗಿಸಲು ಭಾರತೀಯ ರೈಲ್ವೆ ಯಾವಾಗಲೂ ಮುಂದಿರುತ್ತದೆ. ಪ್ರಯಾಣಿಕರಿಂದ ಎದುರಾದ ಬೇಡಿಕೆ, ಅವರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸುತ್ತದೆ. ಹೀಗಿದ್ಯೂ, ರೈಲುಗಳಲ್ಲಿ ಟಾಯ್ಲೆಟ್‌ಗಳ ಸ್ವಚ್ಛತೆ, ಅವುಗಳ ಬಳಕೆಗೆ ಸಂಬಂಧಿಸಿದಂತೆ ಯಾವಾಗಲೂ ತಕರಾರು ಇದ್ದೇ ಇರುತ್ತದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಹೊಸ ಟಾಯ್ಲೆಟ್ ಡಿಸೈನ್ ಕುರಿತಾದ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ((Viral Video)). ಸಾಕಷ್ಟು ಬಳಕೆದಾರರು ತಮ್ಮ ಮೆಚ್ಚುಗೆ ಸೂಚಿಸಿ, ಟ್ವಿಟರ್‌ನಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಸಚಿವ ಅಶ್ವಿನಿ ವೈಷ್ಣವ್ ಅವರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಹಂಚಿಕೊಂಡ ವೀಡಿಯೊದಲ್ಲಿ, ಅಶ್ವಿನಿ ವೈಷ್ಣವ್ ಅವರು ನವೀಕರಿಸಿದ ಶೌಚಾಲಯಗಳ ಸುಧಾರಿತ ಸೌಲಭ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ವಿಡಿಯೋದಲ್ಲಿ, ನವೀಕರಣದ ಮೊದಲು ಮತ್ತು ನಂತರದಲ್ಲಿ, ರೈಲಿನಲ್ಲಿ ಕನ್ನಡಿ, ವಾಶ್ ಬೇಸಿನ್ ಮತ್ತು ಶೌಚಾಲಯದ ಆಸನಗಳ ಹೇಗಿವೆ ಎಂಬುದನ್ನು ತೋರಿಸಲಾಗುತ್ತದೆ. ಅಧಿಕಾರಿಯೊಬ್ಬರು ಕಾಮಗಾರಿಯ ಬಗ್ಗೆ ಸಚಿವರಿಗೆ ಮಾಹಿತಿ ನೀಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ವೈರಲ್ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!
ರೈಲುಗಳಲ್ಲಿ ಹೊಸ ವಿನ್ಯಾಸದ ಈ ಟಾಯ್ಲೆಟ್ ಮತ್ತು ಇತರ ಸಾಧನಗಳ ಕುರಿತು ಟ್ವಿಟರ್‌ನಲ್ಲಿ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗಾಗಲೇ 3 ಲಕ್ಷ ವಿವ್ಸ್ ಕಂಡಿದೆ. ಈ ರೀತಿಯ ಸೌಲಭ್ಯ ಬಹಳ ದಿನಗಳಿಂದಲೇ ಬರಬೇಕಿತ್ತು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದೊಂದು ಒಳ್ಳೆಯ ಕೆಲಸ. ಆದರೆ, ಅದರ ನಿರ್ವಹಣೆಯೇ ಮುಖ್ಯವಾಗುತ್ತದೆ. ಭವಿಷ್ಯದಲ್ಲೂ ಇದೇ ಉತ್ತಮ ನಿರ್ವಹಣೆ ಮಾಡಬಹುದು ಎಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.