Site icon Vistara News

Viral Video: ರೈಲ್ವೆ ಸಚಿವರ ಕ್ಲೀನಿಂಗ್ ವಿಡಿಯೋ ವೈರಲ್!, ಈಗ ವಂದೇ ಭಾರತ್ ಟ್ರೈನ್‌ಗಳಲ್ಲಿ ಸ್ವಚ್ಛತಾ ವ್ಯವಸ್ಥೆ ಬದಲು

Railway Minister's cleaning at Vande Bharat train video goes viral

ನವದೆಹಲಿ: ವಂದೇ ಭಾರತ್ ರೈಲುಗಳಲ್ಲಿ (Vande Bharat Train) ಪ್ರಯಾಣಿಕರು ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆಯ, ಸ್ವಚ್ಛತೆ ಕೈಗೊಳ್ಳುವ ವ್ಯವಸ್ಥೆಯನ್ನು ಬದಲಿಸಿದೆ. ವಿಮಾನಗಳಲ್ಲಿ ಕೈಗೊಳ್ಳಲಾಗುವ ಸ್ವಚ್ಛತೆಯ ರೀತಿಯಲ್ಲಿ ರೈಲುಗಳಲ್ಲಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಸೂಚಿಸಿದ್ದಾರೆ. ಇದೇ ವೇಳೆ, ಬದಲಾದ ಸ್ವಚ್ಛತಾ ವ್ಯವಸ್ಥೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ(Viral Video).

ಹೊಸ ವ್ಯವಸ್ಥೆಯಲ್ಲಿ ರೈಲು ಸ್ವಚ್ಛತಾ ಸಿಬ್ಬಂದಿ ಗಾರ್ಬೆಜ್ ಬ್ಯಾಗ್ ಹಿಡಿದುಕೊಂಡು ಪ್ರತಿ ಸೀಟ್‌ ಹತ್ತಿರ ಹೋಗಿ, ಕಸವನ್ನು ಪಡೆದುಕೊಳ್ಳುತ್ತಾರೆ. ಇಲ್ಲವೇ ಪ್ರಯಾಣಿಕರು ಬಿಟ್ಟು ಹೋಗಿರುವ ಕಸವನ್ನು ತೆಗೆದುಕೊಳ್ಳುತ್ತಾರೆ. ವಿಡಿಯೋದಲ್ಲಿ ತೋರಿಸಿರುವಂತೆ ಬಹುತೇಕ ಪ್ರಯಾಣಿಕರು ತಮ್ಮ ಬಳಿ ಇದ್ದ ಕಸವನ್ನು ನೀಡುತ್ತಾರೆ.

ಇದನ್ನು ಓದಿ: Vande Bharat Express: ದೇಶದ 7ನೇ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನ ಮೇಲೆ ಮತ್ತು ಕಲ್ಲು ತೂರಾಟ; ಪುಡಿಯಾಯ್ತು ಗಾಜು

ವಿಡಿಯೋದೊಂದಿಗೆ ವಂದೇ ಭಾರತ್ ರೈಲುಗಳಲ್ಲಿ ಕ್ಲೀನಿಂಗ್ ಸಿಸ್ಟಮ್ ಬದಲಿಸಲಾಗಿದೆ. ನಿಮ್ಮ ಸಹಕಾರ ಅತ್ಯಗತ್ಯ ಎಂಬ ಒಕ್ಕಣಿಕೆಯೊಂದಿಗೆ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಕೆಲವರು ವಂದೇ ಭಾರತ್ ಟ್ರೈನ್‌ಗಳಲ್ಲಿ ಪ್ರಯಾಣಿಕರು ಎಲ್ಲೆಂದರಲ್ಲಿ ವಾಟರ್ ಬಾಟಲಿ ಇತ್ಯಾದಿ ವಸ್ತುಗಳು ಎಸೆದಿರುವ ಫೋಟೋಗಳನ್ನು ಲಗತ್ತಿಸಿದ್ದಾರೆ.

Exit mobile version