Site icon Vistara News

Viral tweet | ʼಭೂಮಿ ಮೇಲಿನ ಸ್ವರ್ಗʼ ಎಂದು ಫೋಟೋ ಶೇರ್ ಮಾಡಿದ ರೈಲ್ವೇ ಸಚಿವ, ಎಲ್ಲಿಯದು?

indian railway

ನವ ದೆಹಲಿ: ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಬೆರಗು ಮೂಡಿಸುವಂಥ ಹಿಮಪೂರಿತ ರೈಲ್ವೇ ಹಾದಿಗಳ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಅದಕ್ಕೆ ಅವರು ನೀಡಿರುವ ಕ್ಯಾಪ್ಷನ್‌ ಇದೀಗ ಕುತೂಹಲ ಮೂಡಿಸಿದೆ.

ನಾಲ್ಕು ಫೋಟೋಗಳನ್ನು ಶೇರ್‌ ಮಾಡಿರುವ ವೈಷ್ಣವ್‌, ಅದು ಎಲ್ಲಿಯದು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ʼʼGuess the station !? Hint: Heaven on earth” ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಕೆಲವರು ಇದು ಜಮ್ಮು- ಕಾಶ್ಮೀರದ ಖಾಜಿಗುಂಡ ರೈಲ್ವೇ ಸ್ಟೇಶನ್‌ ಇರಬಹುದು ಎಂದಿದ್ದಾರೆ. ಕೆಲವರು ಬನಿಹಾಲ್‌ ನಿಲ್ದಾಣ ಇರಬಹುದು ಎಂದು ಅನುಮಾನಿಸಿದ್ದಾರೆ. ಇದಕ್ಕೂ ಕೆಲ ದಿನಗಳ ಮುನ್ನ ಅಶ್ವಿನಿ ವೈಷ್ಣವ್‌ ಅವರು ಶ್ರೀನಗರ ರೈಲ್ವೆ ನಿಲ್ದಾಣದ ಸುಂದರವಾದ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದರು.

ಸೋಶಿಯಲ್‌ ಮೀಡಿಯಾದಲ್ಲಿ ಈ ಸುಂದರ ಫೋಟಗಳ ಕುರಿತು ಚರ್ಚೆ ನಡೆದಿದೆ. ಇದು ಕಾಶ್ಮೀರದ್ದು ಎಂಬ ಕುರಿತು ಹೆಚ್ಚಿನವರಿಗೆ ತಕರಾರು ಇಲ್ಲ. ಒಬ್ಬರು ಕಾಶ್ಮೀರದ ಜನಪ್ರಿಯ ಕವಿ ಅಮೀರ್‌ ಖುಸ್ರೊ ಅವರ ಸಾಲುಗಳನ್ನು ಹಂಚಿಕೊಂಡಿದ್ದಾರೆ- ʼʼಈ ಭೂಮಿಯ ಮೇಲೆ ಸ್ವರ್ಗವೆಲ್ಲಾದರೂ ಇದ್ದರೆ, ಅದು ಇಲ್ಲಿಯೇ, ಇಲ್ಲಿಯೇ, ಇಲ್ಲಿಯೇʼʼ. ʼʼಇದು ಹೊಸ ಭಾರತ. ರೈಲ್ವೇಸ್‌ಗೆ ಹ್ಯಾಟ್ಸ್‌ ಆಫ್.‌ ಎಲ್ಲವೂ ಉತ್ತಮಗೊಳ್ಳುತ್ತಿದೆʼʼ ಎಂದೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ | Chenab Bridge | ಐಫೆಲ್‌ ಟವರ್‌ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಅಂತಿಮ ಹಂತಕ್ಕೆ

Exit mobile version