Site icon Vistara News

Rain News: ಮಳೆಗೆ ‘ಉತ್ತರ’ ನಿರುತ್ತರ, ಅಲರ್ಟ್‌ ಆದ ಮೋದಿ, ಕೇಜ್ರಿವಾಲ್‌; ಇದುವರೆಗೆ 28 ಸಾವು

Narendra Modi, Arvind Kejriwal On North India Rain

Rain News: Death Toll Rises To 28, Modi, Kejriwal On High Alert

ನವದೆಹಲಿ: ಕಳೆದ 40 ವರ್ಷದಲ್ಲಿಯೇ ಕಂಡು ಕೇಳರಿಯದ ಮಳೆಗೆ (Rain News) ಉತ್ತರ ಭಾರತ ತತ್ತರಿಸಿ ಹೋಗಿದೆ. ಅದರಲ್ಲೂ, ಹಿಮಾಚಲ ಪ್ರದೇಶ ಹಾಗೂ ದೆಹಲಿಯಲ್ಲಿ ವರುಣಾರ್ಭಟ ಜೋರಾಗಿದ್ದು, ಜನ ಅಪಾಯಕ್ಕೆ ಸಿಲುಕಿದ್ದಾರೆ. ಇನ್ನು, ಭೂಕುಸಿತ, ಮನೆ ಕುಸಿತ ಸೇರಿ ಮಳೆ ಸಂಬಂಧಿತ ಹಲವು ಅವಘಡಗಳಿಂದಾಗಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಅಲರ್ಟ್‌ ಆಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಅಧಿಕಾರಿಗಳ ಜತೆ ಮಾತನಾಡಿದ್ದು, ಹಿಮಾಚಲ ಪ್ರದೇಶ, ದೆಹಲಿ ಸೇರಿ ಹಲವೆಡೆ ವಿಪತ್ತು ನಿರ್ವಹಣಾ ಪಡೆಯ ನಿಯೋಜನೆ, ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ, ಅಗತ್ಯ ವಸ್ತುಗಳ ಪೂರೈಕೆ, ಮುಂದಿನ ದಿನಗಳಲ್ಲಿ ವರುಣನ ಆರ್ಭಟ ಸೇರಿ ಹಲವು ವಿಷಯಗಳ ಕುರಿತು ಮಾಹಿತಿ ಪಡೆದಿದ್ದಾರೆ. ಹಾಗೆಯೇ, ಜನರ ರಕ್ಷಣೆಗೆ ಬೇಕಾದ ಎಲ್ಲ ಕ್ರಮ, ರಾಜ್ಯಗಳಿಗೆ ನೆರವು ನೀಡಬೇಕು ಎಂಬುದಾಗಿ ಸೂಚಿಸಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನೆ

ದೆಹಲಿಯಲ್ಲಿ ಯಮುನಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಹಾಗೂ ರಾಜಧಾನಿಯು ಮಳೆಗೆ ತತ್ತರಿಸಿರುವ ಕಾರಣ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರು ಕೂಡ ಸಭೆ ನಡೆಸಿದ್ದಾರೆ. “ದೆಹಲಿಯಲ್ಲಿ ವರುಣಾರ್ಭಟ ಜೋರಾಗಿದ್ದು, 153 ಎಂಎಂ ಮಳೆ ಸುರಿದಿದೆ. ಜನರ ರಕ್ಷಣೆ ಸೇರಿ ಹಲವು ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಬೆಟ್ಟ ಕುಸಿತ

ಇದನ್ನೂ ಓದಿ: Weather Report : ರಾಜ್ಯದ ಈ 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಹಿಮಾಚಲ ಪ್ರದೇಶದಲ್ಲಂತೂ ಇದುವರೆಗೆ ವರುಣನ ಆರ್ಭಟದಿಂದಾಗಿ 20 ಭೂಕುಸಿತ, 17 ಪ್ರವಾಹ ಹಾಗೂ 30 ಮನೆಗಳು ಕುಸಿದಿವೆ. ವಾಹನಗಳು ಕೊಚ್ಚಿ ಹೋಗಿದ್ದು, ಜನ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ. ದೆಹಲಿ ಸಚಿವೆ ಆತಿಶಿ ಅವರು ಯಮುನಾ ನದಿಯ ನೀರಿನ ಪ್ರಮಾಣ ಪರಿಶೀಲಿಸಿದ್ದು, ಮಂಗಳವಾರದವರೆಗೆ ಅಪಾಯದ ಮಟ್ಟ ಮೀರಿ ಹರಿದರೆ ಅಪಾಯಕಾರಿ ಎನ್ನಲಾಗಿದೆ.

ಪ್ರವಾಹದಲ್ಲಿ ಸಿಲುಕಿದ ಬಸ್

ಪ್ರವಾಹದಲ್ಲಿ ಸಿಲುಕಿದ ಬಸ್;‌ 27 ಜನರ ರಕ್ಷಣೆ

ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಬಸ್‌ ಒಂದು ಪ್ರವಾಹದಲ್ಲಿ ಸಿಲುಕಿದ್ದು, ಬಸ್ಸಿನ ಕಿಟಕಿ, ಬಾಗಿಲುಗಳಿಂದ ಜನ ಓಡಿ ಬಂದಿದ್ದಾರೆ. ಗ್ರಾಮಸ್ಥರು ಸೇರಿ ಇದುವರೆಗೆ 27 ಜನರನ್ನು ರಕ್ಷಿಸಲಾಗಿದೆ.

Exit mobile version