Site icon Vistara News

Congress plenary Session: ಸಾಮಾಜಿಕ ನ್ಯಾಯ ಭದ್ರತೆಗೆ ಜಾತಿಗಣತಿಗೆ ಕಾಂಗ್ರೆಸ್ ಒಲವು; ರಾಯಪುರ ಘೋಷಣೆ

Raipur Declaration at Congress plenary Session

ರಾಯಪುರ, ಛತ್ತೀಸ್‌ಗಢ: ಭಾನುವಾರ ಮುಕ್ತಾಯವಾದ 85ನೇ ಮಹಾಧಿವೇಶನದಲ್ಲಿಐದು ಅಂಶಗಳ ರಾಯಪುರ ಘೋಷಣೆಯನ್ನು ಮಾಡಲಾಗಿದೆ. ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಎಲ್ಲ ನಾಯಕರು ಒಂದಾಗಿ ಕೆಲಸ ಮಾಡಬೇಕು ಮತ್ತು ಮುಂಬರುವ 2024ರ ಚುನಾವಣೆಗೆ ದಿಕ್ಕನ್ನು ನಿರ್ಧರಿಸಬೇಕು. ಸಮಾನ ಮನಸ್ಕ ಪಕ್ಷಗಳೊಂದಿಗೆ ಒಕ್ಕೂಟ ರಚಿಸುವ ಅವಕಾಶವನ್ನು ಮುಕ್ತವಾಗಿರಿಸಿದೆ(Congress plenary Session).

ಛತ್ತೀಸ್‌ಗಢದ ರಾಜಧಾನಿ ರಾಯಪುರದಲ್ಲಿ ಮೂರು ದಿನಗಳ ಕಾಂಗ್ರೆಸ್‌ನ 85ನೇ ಮಹಾಧಿವೇಶನ ನಡೆಯಿತು. ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಮತ್ತು ಸಂವಿಧಾನ ರಕ್ಷಣೆ ಸಂಬಂಧ ಸಾಮಾನ್ಯ ರಚನಾತ್ಮಕ ಕಾರ್ಯಕ್ರಮದ ಅನುಸಾರ ಕೆಲಸ ಮಾಡಲು ಸಮಾನ ಮನಸ್ಕ ಪಕ್ಷಗಳ ಜತೆಗೆ ಕೆಲಸ ಮಾಡಲು ಸಿದ್ಧ ಎಂದು ಕಾಂಗ್ರೆಸ್ ಘೋಷಿಸಿತು.

ಮುಂದಿನ ದಿನಗಳಲ್ಲಿ ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಮ್, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಶಿಸ್ತು, ಒಗ್ಗಟ್ಟು ಮತ್ತು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಶಿಸ್ತು, ಒಂದುಗೂಡಿ ಮತ್ತು ಸಂಪೂರ್ಣ ಒಗ್ಗಟ್ಟಿನಿಂದ ನಮ್ಮ ಗೆಲುವಿಗೆ ಶ್ರಮಿಸಬೇಕು. ಈ ಚುನಾವಣೆಗಳ ಫಲಿತಾಂಶಗಳು 2024 ರ ಲೋಕಸಭೆ ಚುನಾವಣೆ ದಿಕ್ಸೂಚಿಯನ್ನು ಸೃಷ್ಟಿಸಲಿವೆ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.

ಜಾತಿಗಣತಿಗೆ ಕಾಂಗ್ರೆಸ್ ನಿರ್ಣಯ

ಸಾಮಾಜಿಕ ನ್ಯಾಯಕ್ಕೆ ಭದ್ರ ಬುನಾದಿ ಹಾಕಲು ತಕ್ಷಣವೇ ಜಾತಿ ಗಣತಿ ನಡೆಸುವುದು ಅತ್ಯಗತ್ಯವಾಗಿದೆ ಎಂದು ರಾಯಪುರ ಘೋಷಣೆಯಲ್ಲಿ ತಿಳಿಸಲಾಗಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಸಾಂವಿಧಾನಿಕ ಮೌಲ್ಯಗಳು ಸರ್ವೋಚ್ಚವಾಗಿರುವ ಭಾರತದ ‘ಅಂತರ್ಗತ ಮತ್ತು ಪ್ರಗತಿಪರ’ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ದಿದೆ ಎಂದು ಪಕ್ಷವು ಘೋಷಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:Congress plenary Session: ಅರುಣಾಚಲ ಪ್ರದೇಶದಿಂದ ಗುಜರಾತ್‌ವರೆಗೆ ಕಾಂಗ್ರೆಸ್‌ನಿಂದ ಮತ್ತೊಂದು ಪಾದಯಾತ್ರೆ

ಮಾದರಿ ಸರ್ಕಾರಗಳು

ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಮಾದರಿ ಸರ್ಕಾರಗಳನ್ನು ಹೊಂದಿದೆ. ರಾಜಸ್ಥಾನ ಮಾದರಿ ಸರ್ಕಾರವು ದೇಶದ ಇತರ ಎಲ್ಲ ಕಡೆಯೂ ಅನುಕರಣೀಯವಾಗಿದೆ. ರಾಜಸ್ಥಾನದ ಮುಖ್ಯಮಂತ್ರಿ ಚಿರಂಜೀವಿ ಸ್ವಾಸ್ಥ್ಯ ಬಿಮಾ ಯೋಜನೆ ಮತ್ತು ಛತ್ತೀಸ್‌ಗಢ ರಾಜ್ಯದ ರಾಜೀವ್ ಗಾಂಧಿ ಕಿಸಾನ್ ನ್ಯಾಯ ಯೋಜನೆಗಳು ಇತರ ರಾಜ್ಯಗಳಿಗೂ ಅನುಕರಣೀಯವಾಗಿವೆ ಎಂದು ತಿಳಿಸಲಾಗಿದೆ.

Exit mobile version