ನವದೆಹಲಿ: ಇತ್ತೀಚೆಗೆ ತಮ್ಮ ಮೊನಚಿನ ಮಾತುಗಳ ಮೂಲಕ ಹೆಚ್ಚು ಸದ್ದು ಮಾಡುತ್ತಿರುವ ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು 2022ರಲ್ಲಿ ತೆರೆಕಂಡು ಯಶಸ್ವಿಯಾದ ಆರ್‌ಆರ್‌ಆರ್ ಚಿತ್ರವನ್ನು ಉಲ್ಲೇಖಿಸುವ ಮೂಲಕ ರೈಸಿನಾ ಸಂವಾದ 2023(Raisina dialogue 2023) ಚರ್ಚೆಯ ವೇಳೆ ನಗೆ ಉಕ್ಕಿಸಲು ಕಾರಣವಾದರು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸಂಕೀರ್ಣ ಸಂಬಂಧ ಕುರಿತು, ಇಂಗ್ಲೆಂಡ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರಿಗೆ, “… ನಾನು ಸೂಕ್ಷ್ಮವಾಗಿ ಹೇಳುವುದಾದರೆ, ನೀವು ಸಿನಿಮಾದಲ್ಲಿ ಉತ್ತಮ ವ್ಯಕ್ತಿಗಳಲ್ಲ” ಎಂದು ಹೇಳಿದರು. ಆಗ ಪ್ರೇಕ್ಷಕರು ನಕ್ಕರು.
ಟೋನಿ ಬ್ಲೇರ್ ಮತ್ತು ಇಂಗ್ಲೆಂಡ್‌ನ ಮಾಜಿ ಪುರುಷರ ಕ್ರಿಕೆಟ್ ತಂಡದ ನಾಯಕ ಕೆವಿನ್ ಪೀಟರ್ಸನ್ ಅವರೊಂದಿಗೆ ‘ಲೀಡರ್‌ಶಿಪ್ ಇನ್ ದಿ ಏಜ್ ಆಫ್ ಅನಿಶ್ಚಿತತೆ’ ಕುರಿತು ರೈಸಿನಾ ಸಂವಾದ 2023 ರಲ್ಲಿ ಪ್ಯಾನಲ್ ಚರ್ಚೆಯಲ್ಲಿ ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಅವರು ಮಾತನಾಡುತ್ತಿದ್ದರು.
ಬ್ರಿಟನ್‌ಗಿಂತಲೂ ಭಾರತವು ದೊಡ್ಡ ಆರ್ಥಿಕತೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿ, “… ನಾನು ಅದನ್ನು ಮರುಸಮತೋಲನ ಎಂದು ಕರೆಯುತ್ತೇನೆ. ಇದು ಇತಿಹಾಸದ ಬದಲಾವಣೆ. ಭಾರತವು ಅತ್ಯಂತ ಅಸಾಮಾನ್ಯ ಸ್ಥಾನದಲ್ಲಿದೆ. ಮತ್ತೊಮ್ಮೆ ನಿರ್ಣಾಯಕವಾಗಿ ಮೇಲ್ಮುಖವಾಗಿ ಚಲಿಸುತ್ತಿದೆ. ಈ ರೀತಿಯ ಸಾಧನೆಯನ್ನು ಬಹಳಷ್ಟು ಇತರ ನಾಗರಿಕ ರಾಷ್ಟ್ರಗಳು ಮಾಡುವ ಸ್ಥಿತಿಯಲ್ಲಿ ಇಲ್ಲ,” ಎಂದು ಅವರು ಹೇಳಿದರು.
ಇದನ್ನು ಓದಿ: Startup Bridge: ಭಾರತ, ಇಟಲಿ ಮಧ್ಯೆ ಸ್ಟಾರ್ಟಪ್ ಬ್ರಿಡ್ಜ್ ಘೋಷಿಸಿದ ಮೋದಿ, ಏನಿದು ಬ್ರಿಡ್ಜ್?
ಯಾವಾಗ ನೀವು ಸಂಕೀರ್ಣ ಇತಿಹಾಸವನ್ನು ಹೊಂದಿರುತ್ತೀರೋ ಆಗ, ಕೇಳಮುಖವಾಗಿ ಚಲನೆಯನ್ನು ಪಡೆದುಕೊಳ್ಳುತ್ತದೆ. ಅನುಮಾನುಗಳು ಹುಟ್ಟಿಕೊಳ್ಳುತ್ತವೆ ಮತ್ತು ಬಗೆಹರಿಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಅವರು ಹೇಳಿದರು. ಇದೇ ವೇಳೆ, ಆರ್‌ಆರ್‌ಆರ್ ಸಿನಿಮಾ ಉಲ್ಲೇಖ ಮಾತ್ರವಲ್ಲದೇ, ಭಾರತೀಯ ಸರ್ಕಾರ ನಿರ್ವಹಣೆಯನ್ನು ಕ್ರಿಕೆಟ್ ಆಟಕ್ಕೂ ಮೋದಿಯನ್ನು ಕ್ಯಾಪ್ಟನ್ ಅವರಿಗೆ ಹೋಲಿಸಿ ಅವರು ಮಾತನಾಡಿದರು.