Site icon Vistara News

Bus Accident: ನಿಂತಿದ್ದ ಬಸ್‌ಗೆ ಗುದ್ದಿದ ಯಮರೂಪಿ ಟ್ರಕ್‌; ಸ್ಥಳದಲ್ಲೇ 11 ಜನ ಸಾವು

Rajasthan Accident

Rajasthan Accident: 11 dead, 15 injured after truck rams passenger bus on Jaipur-Agra Highway

ಜೈಪುರ: ರಾಜಸ್ಥಾನದ ಭರತಪುರ ಜಿಲ್ಲೆಯಲ್ಲಿ ಬುಧವಾರ (ಸೆಪ್ಟೆಂಬರ್‌ 13) ಬೆಳಗ್ಗೆ ಭೀಕರ ಅಪಘಾತ (Bus Accident) ಸಂಭವಿಸಿದ್ದು, 13 ಜನ ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳಗ್ಗೆ 4.30ರ ಸುಮಾರಿಗೆ ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ (Jaipur Agra National Highway) ನಿಂತಿದ್ದ ಪ್ಯಾಸೆಂಜರ್‌ ಬಸ್‌ಗೆ ಹಿಂದಿನಿಂದ ಬಂದ ಯಮರೂಪಿ ಟ್ರಕ್‌ ಗುದ್ದಿದೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಸ್ಥಾನದಿಂದ ಉತ್ತರ ಪ್ರದೇಶದ ಮಥುರಾಗೆ ಸುಮಾರು 60 ಪ್ರಯಾಣಿಕರು ಬಸ್‌ನಲ್ಲಿ ತೆರಳುತ್ತಿದ್ದರು. ರಾಜಸ್ಥಾನದ ಲಖನ್‌ಪುರ ಪ್ರದೇಶದ ಹೆದ್ದಾರಿ ಬಳಿ ಬಸ್‌ ನಿಲ್ಲಿಸಲಾಗಿತ್ತು. ಇದೇ ವೇಳೆ ವೇಗವಾಗಿ ಬಂದ ಟ್ರಕ್‌ ಬಸ್‌ಗೆ ಹಿಂಬದಿಯಿಂದ ಗುದ್ದಿದೆ. ಟ್ರಕ್‌ ಗುದ್ದಿದ ತೀವ್ರತೆಗೆ ಬಸ್‌ನಲ್ಲಿದ್ದ ಐವರು ಪುರುಷರು ಹಾಗೂ ಆರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಸುಮಾರು 15 ಜನ ಮೃತಪಟ್ಟಿದ್ದು, ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಆರ್‌ಬಿಎಂ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಯಾಣಿಕರೆಲ್ಲರೂ ಗುಜರಾತ್‌ನ ಭಾವ್‌ನಗರದವರಾಗಿದ್ದಾರೆ. ಮೃತರು ಹಾಗೂ ಗಾಯಗೊಂಡವರ ಮಾಹಿತಿ ಪತ್ತೆಹಚ್ಚಲಾಗುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bike Accident: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಯುವಕ ಸಾವು

24 ಗಂಟೆಯಲ್ಲಿ 2ನೇ ಭೀಕರ ಅಪಘಾತ

ರಾಜಸ್ಥಾನದಲ್ಲಿ ಕಳೆದ 24 ಗಂಟೆಯಲ್ಲಿ ನಡೆದ ಎರಡನೇ ಭೀಕರ ಅಪಘಾತ ಇದಾಗಿದೆ. ರಾಜಸ್ಥಾನದ ಹನುಮಗಢ ಜಿಲ್ಲೆಯಲ್ಲಿ ಮಂಗಳವಾರ (ಸೆಪ್ಟೆಂಬರ್‌ 12) ಜೀಪ್‌ ಹಾಗೂ ಬಸ್‌ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದರು. ಲಖೋವಲಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಜೀಪ್‌ನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.

Exit mobile version