Site icon Vistara News

Rajasthan Election: ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ರಿಲೀಸ್;‌ ರಾಜೆ, ಗೆಹ್ಲೋಟ್‌ಗೆ ಯಾವ ಕ್ಷೇತ್ರ?

Vasundhara Raje

Rajasthan Election: BJP fields Vasundhara Raje from Jhalrapatan, Congress Also Releases List

ಜೈಪುರ: ರಾಜಸ್ಥಾನದಲ್ಲಿ ನವೆಂಬರ್‌ 25ರಂದು ವಿಧಾನಸಭೆ ಚುನಾವಣೆ (Rajasthan Election) ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ (Congress) ಹಾಗೂ ಬಿಜೆಪಿ (BJP) ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿವೆ. ಬಿಜೆಪಿಯು 83 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್‌ 33 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಚುನಾವಣೆಯಲ್ಲಿ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆದಿದ್ದು, ಅಳೆದು-ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.

ಕಾಂಗ್ರೆಸ್‌ ಪ್ರಮುಖ ಅಭ್ಯರ್ಥಿಗಳು ಯಾರು?

ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಸದರ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರೆ, ಸಚಿನ್‌ ಪೈಲಟ್‌ ಅವರು ಟೋಂಕ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇನ್ನು ನಾಥ್‌ದ್ವಾರದಿಂದ ಸಿ.ಪಿ. ಜೋಶಿ, ಒಸಿಯಾನ್‌ನಿಂದ ದಿವ್ಯಾ ಮಾಡರ್ನಾ, ಸದಲ್‌ಪುರದಿಂದ ಕೃಷ್ಣ ಪೂನಿಯಾ ಅವರು ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿಗಳು

ರಾಜಸ್ಥಾನದಲ್ಲಿ ಬಿಜೆಪಿ ಆಂತರಿಕ ಕಚ್ಚಾಟ ಇರುವ ಕಾರಣ ಅಮಿತ್‌ ಶಾ ಸೇರಿ ಹಲವರು ಸಭೆ ನಡೆಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ಝಲರ್‌ಪಟಾನ್‌ ಹಾಗೂ ಸತೀಶ್‌ ಪೂನಿಯಾ ಅವರನ್ನು ಅಂಬರ್‌ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ರಾಜೇಂದ್ರ ರಾಥೋಡ್‌ ಅವರು ತಾರಾ ನಗರ್‌, ಜ್ಯೋತಿ ಮಿರ್ಧಾ ಅವರು ನಾಗೌರ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: Chhattisgarh election: ಛತ್ತೀಸ್‌ಗಢ ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್, ಹಾಲಿ ಶಾಸಕರಿಗೆ ಟಿಕೆಟ್

ರಾಜಸ್ಥಾನದ ಬಲಾಬಲ ಹೇಗಿದೆ?

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಆಡಳಿತವಿದ್ದು, ಅಶೋಕ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅಶೋಕ್‌ ಗೆಹ್ಲೋಟ್‌ ಹಾಗೂ ಅವರದ್ದೇ ಪಕ್ಷದ ಸಚಿನ್‌ ಪೈಲಟ್‌ ಮಧ್ಯೆ ಆಗಾಗ ಭಿನ್ನಮತ ಸ್ಫೋಟವಾಗುತ್ತದೆ. ಇದರ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದ್ದು, ಈಗಾಗಲೇ ಹಲವು ಬಾರಿ ಬಂಡಾಯವೆಬ್ಬಿಸಿ, ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಯತ್ನಿಸಿ ವಿಫಲವಾಗಿದೆ. ಉಚಿತ ಯೋಜನೆಗಳ ಘೋಷಣೆ ಮೂಲಕ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದರೆ, ಬಿಜೆಪಿಗೆ ಮೋದಿ ನಾಮದ ಬಲವೊಂದೇ ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಆಂತರಿಕ ಕಚ್ಚಾಟವೇ ಮುಳುವಾಗುವ ಸಾಧ್ಯತೆ ಇದೆ.

ಒಟ್ಟು ಕ್ಷೇತ್ರ: 200
ಮ್ಯಾಜಿಕ್‌ ನಂಬರ್‌: 101

Exit mobile version