Site icon Vistara News

Rajasthan Election Result: ರಾಜಸ್ಥಾನದಲ್ಲಿ ನೆಕ್ಸ್ಟ್ ಸಿಎಂ ‘ರಾಜಕುಮಾರಿ’; ಆದರೆ, ವಸುಂಧರಾ ರಾಜೆ ಅಲ್ಲ!

Rajasthan Election Result, Diya Kumari is next CM post favorite

ನವದೆಹಲಿ: ರಾಜಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿ (Bhartiya Janata Party) ಕಂ ಬ್ಯಾಕ್ ಮಾಡಿದ್ದು, ಕಾಂಗ್ರೆಸ್ ಪಕ್ಷವು (Congress Party) ಸೋಲೋಪ್ಪಿಕೊಂಡಿದೆ. ಆದರೆ, ಭಾರತೀಯ ಜನತಾ ಪಾರ್ಟಿಯಲ್ಲೀಗ, ಮುಂದಿನ ಮುಖ್ಯಮಂತ್ರಿ(Rajasthan Chief minister) ಯಾರು ಎಂಬ ಚರ್ಚೆಗಳು ಜೋರಾಗಿವೆ. ಚುನಾವಣೆ ಪೂರ್ವದಲ್ಲಿ ಬಿಜೆಪಿಯು ಯಾವ ನಾಯಕರನ್ನೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರಲಿಲ್ಲ. ಹಾಗಾಗಿ, ಸಿಎಂ ರೇಸ್‌ನಲ್ಲಿ ಹಲುವಾರು ನಾಯಕ, ನಾಯಕಿಯರ ಹೆಸರು ಕೇಳಿ ಬರುತ್ತಿವೆ. ಆ ಪೈಕಿ ದಿಯಾ ಕುಮಾರಿ (Princess Diya Kumari) ಹೆಸರು ತುಸು ಜೋರಾಗಿಯೇ ಓಡುತ್ತಿದೆ. ರಾಜಸ್ಥಾನದ 199ರ ಸ್ಥಾನಗಳ ಪೈಕಿ ಬಿಜೆಪಿ 112 ಕ್ಷೇತ್ರಗಳಲ್ಲಿ ಜಯ ಕಂಡಿದ್ದು, ಕಾಂಗ್ರೆಸ್ 70 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಅಧಿಕಾರವಂಚಿತವಾಗಿದೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಜೈಪುರ ರಾಜ ಕುಟುಂಬದ ರಾಜಕುಮಾರಿ ದಿಯಾ ಕುಮಾರಿ ಹಾಲಿ ಸಂಸದೆಯೂ ಹೌದು. ದಿಯಾ ಕುಮಾರಿ ಅವರು ಜೈಪುರದ ರಾಜವಂಶದ ಕೊನೆಯ ಆಡಳಿತದ ಮಹಾರಾಜ ಮಾನ್ ಸಿಂಗ್ II ಅವರ ಮೊಮ್ಮಗಳು. ಪ್ರಚಾರದ ವೇಳೆ ದಿಯಾ ಕುಮಾರಿಯನ್ನು ಜೈಪುರದ ಮಗಳು, ಬೀದಿಗಳಲ್ಲಿ ನಡೆಯುವ ರಾಜಕುಮಾರಿ ಎಂದೇ ಪ್ರಚಾರ ಮಾಡಲಾಯಿತು. ರಾಜಸ್ಥಾನದ ಪರಂಪರೆ ಮತ್ತು ಸರಳತೆಯ ಮಿಶ್ರಣವಾಗಿರುವ ದಿಯಾ ಕುಮಾರಿ ಅವರು ರಾಜಸ್ಥಾನದಲ್ಲಿ ಸದ್ಯ ಅತ್ಯಂತ ಜನಪ್ರಿಯ ನಾಯಕಿ. ಹಾಗಾಗಿ, ಅವರು ಈಗ ಮುಖ್ಯಮಂತ್ರಿಯೇ ದಾವೆದಾರ ಆಗುತ್ತಿದ್ದಾರೆ.

2013ರಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಯಾದ ದಿಯಾ ಕುಮಾರಿ ಅವರು ಈವರೆಗೆ ಎರಡು ಚುನಾವಣೆಗಳನ್ನು ಗೆದ್ದಿದ್ದಾರೆ. 2013ರಲ್ಲಿ ಅವರು ಸವಾಯಿ ಮಾಧೋಪುರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು. 2019ರಲ್ಲಿ ರಾಜಸಮಂದ್ ಕ್ಷೇತ್ರದಿಂದ ಸ್ಪರ್ಧಿಸಿ 5.51 ಲಕ್ಷ ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆಯಾದರು. ಪರಿಸರ, ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಸಬಲೀಕರಣ ವಿಷಯಗಳ ಮೂಲಕವೇ ಹೆಚ್ಚು ಪ್ರಸಿದ್ಧಿಗೆ ಬಂದಿರುವ 52 ವರ್ಷದ ದಿಯಾ ಕುಮಾರಿ ಅವರು, 2019 ರಲ್ಲಿ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಸದಸ್ಯರಾಗಿ ಸೇವೆ ಸಲ್ಲಿಸಲು ಆಯ್ಕೆಯಾದರು.

2023ರ ಚುನಾವಣೆಯಲ್ಲಿ ದಿಯಾ ಕುಮಾರಿ ಅವರು ಜೈಪುರದ ವಿದ್ಯಾನಗರದ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಮತ್ತೊಬ್ಬ ರಾಜಕುಮಾರಿ ವಸುಂದಾರಾಜೆ ಅರಸ್ ಅವರ ಜತೆಗೆ ದಿಯಾ ಅವರ ಕೂಡ ಸಿಎಂ ಹುದ್ದೆಗೆ ಕೇಳಿ ಬರುತ್ತಿರುವ ಪ್ರಮುಖ ಹೆಸರಾಗಿದೆ. ಸಾರ್ವಜನಿಕರು “ಭ್ರಷ್ಟ” ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುತ್ತಾರೆ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ ಎಂದು ಕುಮಾರಿ ಹಲವು ಬಾರಿ ಹೇಳಿದ್ದರು.

ಹಾಗಂತ ಮುಂದಿನ ಮುಖ್ಯಮಂತ್ರಿ ನೀವೇನಾ ಅಂತ ದಿಯಾ ಕುಮಾರಿ ಅವರಿ ಕೇಳಿದ್ರೆ ಅಷ್ಟೇ ನಯವಾಗಿ ನಿರಾಕರಿಸುತ್ತಾರೆ. ಇದು ಅರ್ಥವಿಲ್ಲದ ಪ್ರಶ್ನೆ. ಮುಂದಿನ ಸಿಎಂ ಯಾರಾಗಬೇಕು ಎಂಬುದನ್ನು ಭಾರತೀಯ ಜನತಾ ಪಾರ್ಟಿಯ ಹೈ ಕಮಾಂಡ್ ನಿರ್ಧರಿಸುತ್ತದೆ ಎನ್ನುತ್ತಾರೆ. ಆದರೆ, ರಾಜಸ್ಥಾನದಲ್ಲಿ ಬಿಜೆಪಿ ಬಹುಮತದ ಗೆರೆಯನ್ನು ದಾಟುತ್ತಿದ್ದಂತೆ ದಿಯಾ ಕುಮಾರಿ ಅವರೇ ಮುಂದಿನ ಸಿಎಂ ಎಂಬ ಸುದ್ದಿ ಬಲವಾಗಿ ಹರಡಿದೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Exit mobile version