Site icon Vistara News

Self Harming: ಕ್ಲಾಸ್‌ಮೇಟ್‌ಗಳಿಂದಲೇ ಲೈಂಗಿಕ ದೌರ್ಜನ್ಯ, ಅಕ್ಕ-ತಂಗಿ ಆತ್ಮಹತ್ಯೆ; ಇದೆಂಥ ಅನ್ಯಾಯ!

Physical Abuse

Father of rape victim found hanging from tree days after she died by Suicide In Uttar Pradesh

ಜೈಪುರ: ಸಹಪಾಠಿಗಳಾದವರು ಹೇಗಿರಬೇಕು? ಶಾಲೆ ಅಥವಾ ತರಗತಿಯಲ್ಲಿ ಯಾವುದೇ ಸಮಸ್ಯೆ ಎದುರಾದರೆ ಅದನ್ನು ಬಗೆಹರಿಸಬೇಕು. ಖುಷಿಯ ಕ್ಷಣಗಳಲ್ಲಿ ನಕ್ಕು, ದುಃಖದ ಸಂದರ್ಭದಲ್ಲಿ ಸಂತೈಸಿ ಜತೆಗಿರಬೇಕು. ಇಂತಹ ಸಹಪಾಠಿಗಳು ಶಿಕ್ಕಾಗಲೇ ಶಾಲೆ, ಕಾಲೇಜಿನ ನೆನಪುಗಳು ಮಧುರವಾಗಿರುತ್ತವೆ. ಭವಿಷ್ಯವೂ ಉಜ್ವಲವಾಗಿರುತ್ತದೆ. ಆದರೆ, ರಾಜಸ್ಥಾನದ (Rajasthan) ಶಾಲೆಯೊಂದರಲ್ಲಿ ಸಹಪಾಠಿಗಳಾದ ಬಾಲಕರು ಇಬ್ಬರು ಬಾಲಕಿಯರ (ಅಕ್ಕ-ತಂಗಿ) ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಕ್ಲಾಸ್‌ಮೇಟ್ಸ್‌ ಪದಕ್ಕೇ ಕಳಂಕ ತಂದಿದ್ದಾರೆ. ಇದರಿಂದ ನೊಂದ ಅಕ್ಕ-ತಂಗಿಯು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.

ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯ ಪಿಪಲ್‌ಖುಂಟ್‌ ಗ್ರಾಮದ ಶಾಲೆಯಲ್ಲಿ 12ನೇ ತರಗತಿ ಓದುತ್ತಿರುವ ನಾಲ್ವರು ಬಾಲಕರು ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದಾದ ಬಳಿಕ ಬಾಲಕಿಯರ ತಂದೆಯು ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ದೂರು ದಾಖಲಿಸಿದ ಸಹೋದರಿಯರ ತಂದೆ ಮೇಲೆಯೇ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾಗಿದ್ದಾರೆ. ಇದಾದ ಬಳಿಕ ಶನಿವಾರ ಬೆಳಗ್ಗೆ (ಅಕ್ಟೋಬರ್‌ 7) ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

“ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಲಕರನ್ನು ಬಂಧಿಸಲಾಗಿದೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ. ಪ್ರಾಥಮಿಕ ವರದಿ ಪ್ರಕಾರ, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢವಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ” ಎಂದು ಪ್ರತಾಪ್‌ಗಢ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಬುಡಾನಿಯಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Harassment Case : ಸಾಲದ ಕಂತು ಕಟ್ಟಿಲ್ಲ ಎಂದು ಫೈನಾನ್ಸ್‌ನಲ್ಲೇ ದಿಗ್ಬಂಧನ; ನೊಂದ ಮಹಿಳೆ ಆತ್ಮಹತ್ಯೆ

ಅಷ್ಟಕ್ಕೂ ಆಗಿದ್ದೇನು?

12ನೇ ತರಗತಿ ಓದುತ್ತಿರುವ ಬಾಲಕಿಯರು ಗ್ರಾಮದಲ್ಲಿ ಬಾಡಿಗೆ ಕೋಣೆಯೊಂದರಲ್ಲಿದ್ದಾರೆ. ಬಾಡಿಗೆ ಕೋಣೆಯಲ್ಲಿದ್ದೇ ಅವರು ಅಧ್ಯಯನ ಮಾಡುತ್ತಿದ್ದಾರೆ. ಇವರ ಸಹಪಾಠಿಗಳಾದ ನಾಲ್ವರು ಬಾಲಕರು ಬಾಲಕಿಯರ ಬಾಡಿಗೆ ಕೋಣೆಗೆ ಭೇಟಿ ನೀಡಿದ್ದಾರೆ. ಆಗ ಅವರ ಮಧ್ಯೆ ವಾಗ್ವಾದ ನಡೆದಿದೆ. ಸಮಸ್ಯೆ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಬಾಲಕಿಯರು ತಂದೆಯನ್ನು ಕರೆದುಕೊಂಡು ಶಾಲೆಗೆ ತೆರಳಿದ್ದಾರೆ. ಆಗ ಬಾಲಕಿಯರು, ಅವರ ತಂದೆಯ ಮೇಲೆ ನಾಲ್ವರು ಬಾಲಕರು ಹಲ್ಲೆ ನಡೆಸಿದ್ದಾರೆ. ಇದೇ ಸೇಡು ಇಟ್ಟುಕೊಂಡು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Exit mobile version