Site icon Vistara News

Rajnath Singh: ಭಾರತದ ರಕ್ಷಣಾ ಸಾಮಗ್ರಿಗಳ ರಫ್ತಿನಲ್ಲಿ ಅಭೂತಪೂರ್ವ ಸಾಧನೆ!

Rajnath Singh

ನವದೆಹಲಿ: ದೇಶದ ರಕ್ಷಣಾ ರಫ್ತು ಇದೇ ಮೊದಲ ಬಾರಿಗೆ ರೂ.21,000 ಕೋಟಿ ಗಡಿ ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ತಿಳಿಸಿದ್ದಾರೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 32.5% ರಷ್ಟು ಹೆಚ್ಚಿಗೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.

2023-24 ರ ಹಣಕಾಸು ವರ್ಷದಲ್ಲಿ (ಎಫ್‌ ವೈ) ರಕ್ಷಣಾ ರಫ್ತು ದಾಖಲೆಯ ರೂ.21,083 ಕೋಟಿಗಳನ್ನು (ಸರಿಸುಮಾರು. US$ 2.63 ಶತಕೋಟಿ) ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಅಂಕಿ ಅಂಶವು ರೂ.15,920 ಕೋಟಿ ಇದ್ದಾಗ 32.5% ರಷ್ಟು ಬೆಳವಣಿಗೆಯಾಗಿದೆ. FY 2013-14 ಕ್ಕೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ರಕ್ಷಣಾ ರಫ್ತು 31 ಪಟ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ಅಂಕಿಅಂಶಗಳು ಸೂಚಿಸುತ್ತವೆ ”ಎಂದು ಸಚಿವಾಲಯ ಮಾಹಿತಿ ನೀಡಿದೆ.

ಖಾಸಗಿ ವಲಯ ಮತ್ತು ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು (ಡಿಪಿಎಸ್‌ಯು) ಸೇರಿದಂತೆ ರಕ್ಷಣಾ ಉದ್ಯಮದ ಕೊಡುಗೆ ಈ ಸಾಧನೆ ಕಾರಣವೆಂದು ರಕ್ಷಣಾ ಸಚಿವಾಲಯ ತಿಳಿಸಿದೆ.ಇನ್ನು ಖಾಸಗಿ ವಲಯ ಹಾಗೂ ಡಿಪಿಎಸ್ ಯುಗಳು ಕ್ರಮವಾಗಿ ಶೇಕಡಾ 60 ಹಾಗೂ ಶೇಕಡಾ 40 ರಷ್ಟು ಕೊಡುಗೆ ನೀಡಿವೆ ಎಂದು ತಿಳಿಸಿದೆ.  FY 2022-23 ರಲ್ಲಿ 1,414 ರಿಂದ FY 2023-24 ರಲ್ಲಿ 1,507 ಕ್ಕೆ ಏರಿದೆ ಎಂದು ಸಚಿವಾಲಯ ತಿಳಿಸಿದೆ.

ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ “ಭಾರತೀಯ ರಕ್ಷಣಾ ರಫ್ತುಗಳು ಅಭೂತಪೂರ್ವ ಎತ್ತರಕ್ಕೆ ಏರಿದೆ ಮತ್ತು ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ರೂ. 21,000 ಕೋಟಿ ಗಡಿ ದಾಟಿದೆ ಎಂದು ಎಲ್ಲರಿಗೂ ತಿಳಿಸಲು ಬಹಳ ಸಂತಸವಾಗುತ್ತಿದೆ. ಇದು ಕಳೆದ ಹಣಕಾಸು ವರ್ಷಕ್ಕಿಂತ 32.5% ರಷ್ಟು ಅದ್ಭುತ ಬೆಳವಣಿಗೆಯಾಗಿದೆ” ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ:Narendra Modi: ಅಡ್ವಾಣಿ ಅವರೊಂದಿಗೆ ಕೆಲಸ ಮಾಡಿದ್ದೇ ಹೆಮ್ಮೆ; ಮೋದಿ ಭಾವುಕ ನುಡಿ

ಭಾರತವು 2024-25ರ ವೇಳೆಗೆ ರೂ.35,000 ಕೋಟಿ ರಕ್ಷಣಾ ರಫ್ತು ಗುರಿಯನ್ನು ಹೊಂದಿದೆ. ದೇಶವು ಪ್ರಸ್ತುತ 85 ದೇಶಗಳಿಗೆ ಮಿಲಿಟರಿ ಸಾಮಗ್ರಿಗಳು ರಫ್ತು ಮಾಡುತ್ತಿದೆ. ಸರಿ ಸುಮಾರು 100 ಸಂಸ್ಥೆಗಳು ರಫ್ತುಗಳಲ್ಲಿ ತೊಡಗಿಸಿಕೊಂಡಿವೆ. ಇದು ಕ್ಷಿಪಣಿಗಳು, ಫಿರಂಗಿ ಬಂದೂಕುಗಳು, ರಾಕೆಟ್‌ ಗಳು, ಶಸ್ತ್ರಸಜ್ಜಿತ ವಾಹನಗಳು, ವೈಯಕ್ತಿಕ ರಕ್ಷಣಾ ಸಾಧನಗಳು, ವಿವಿಧ ರಾಡಾರ್‌ ಗಳು, ಕಣ್ಗಾವಲು ವ್ಯವಸ್ಥೆಗಳು ಮತ್ತು ಯುದ್ಧಸಾಮಗ್ರಿಗಳನ್ನು ಒಳಗೊಂಡಿದೆ.

ಹಾಗೇ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಹಾಗೂ ಅವರ ನಾಯಕತ್ವದ ಕುರಿತು ಹೊಗಳಿದ್ದಾರೆ.”ಪ್ರಧಾನಿ ಮೋದಿಯವರು ತೆಗೆದುಕೊಂಡ ಹಲವು ಉಪಕ್ರಮಗಳೇ ಈ ಬೆಳವಣಿಗೆಗೆ ಕಾರಣ. ಖಾಸಗಿ ಹಾಗೂ ಡಿಪಿಎಸ್ ಯುಗಳು ಸೇರಿದಂತೆ ನಮ್ಮ ರಕ್ಷಣಾ ಸಾಮಗ್ರಿ ಉತ್ಪಾದನಾ ಸಂಸ್ಥೆಗಳು ವರ್ಷಗಳಲ್ಲಿ ಅದ್ಭುತವಾದ ಪ್ರಗತಿಯನ್ನು ಸಾಧಿಸಿವೆ,. ಇದು  ರಕ್ಷಣಾ ರಫ್ತಿನಲ್ಲಿ ಹೊಸ ಮೈಲಿಗಲ್ಲನ್ನು ತಲುಪಲು ನೆರವಾಗಿವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

Exit mobile version