Site icon Vistara News

Rajya Sabha: ಪಟ್ಟು ಸಡಿಲಿಸದ ಪ್ರತಿಪಕ್ಷಗಳು, ಬಗ್ಗದ ಸರ್ಕಾರ, ರಾಜ್ಯಸಭಾ ಕಲಾಪ ಮಾರ್ಚ್ 13ಕ್ಕೆ ಮುಂದೂಡಿಕೆ

Rajya Sabha

ನವದೆಹಲಿ: ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅಮಾನತು, ಅದಾನಿ ಗ್ರೂಪ್ ವಿರುದ್ಧ ಕೇಳಿ ಬಂದ ಆರೋಪಗಳ ಕುರಿತು ಜೆಪಿಸಿ(ಜಂಟಿ ಸಂಸದೀಯ ಸಮಿತಿ) ರಚಿಸುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ರಾಜ್ಯಸಭೆ (Rajya Sabha) ಕಲಾಪಕ್ಕೆ ಅಡ್ಡಿಪಡಿಸಿದವು. ಸೋಮವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಸಂಘರ್ಷ ಶುರುವಾಯಿತು. ಆಗ ರಾಜ್ಯಸಭೆ ಚೇರ್ಮನ್ನರಾದ ಜಗದೀಪ್ ಧನಕರ್ ಅವರು ರಾಜ್ಯಸಭೆಯನ್ನು ಮಾರ್ಚ್ 13ರವರೆಗೆ ಮುಂದೂಡಿದರು.

ಪಟ್ಟಿ ಮಾಡಲಾದ ಪತ್ರಗಳನ್ನು ಸದನದಲ್ಲಿ ಮಂಡಿಸಲು ಸರ್ಕಾರವು ಮುಂದಾಗುತ್ತಿದ್ದಂತೆ, ಪ್ರತಿಪಕ್ಷದ ಸಂಸದರು ಪ್ರತಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.

ಪ್ರತಿಪಕ್ಷಗಳ ಬೇಡಿಕೆಗೆ ಸಮ್ಮಿತಿಸಿದ ಚೇರ್ಮನ್ನರಾದ ಜಗದೀಪ್ ಧನಕರ್ ಅವರು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಿದರು. ಆದರೆ, ಖಜಾನೆ ಪೀಠದಿಂದ ಹಲವಾರು ಸದಸ್ಯರು ಘೋಷಣೆಗಳನ್ನು ಕೂಗಲಾರಂಭಿಸಿದರು. ಇದೇ ವೇಳೆ, ಮಲ್ಲಿಕಾರ್ಜುನ ಖರ್ಗೆ ಅವರು ಆಡಿರುವ ಮಾತುಗಳನ್ನು ಕಡಿತದಿಂದ ತೆಗೆದು ಹಾಕಲಾಯಿತು.

ಇದನ್ನೂ ಓದಿ: Viral Video: ರಾಜ್ಯಸಭೆಯಲ್ಲಿ ಜಯಾ ಬಚ್ಚನ್​ ಕ್ರೋಧದ ವರ್ತನೆ; ಅಧ್ಯಕ್ಷರತ್ತ ಕೈಬೆರಳು ತೋರಿಸಿ ನಡೆದ ಸಂಸದೆ!

ಆಗ ಪ್ರತಿಪಕ್ಷದ ಸದಸ್ಯರೂ ಘೋಷಣೆಗಳನ್ನು ಕೂಗಲು ಆರಂಭಿಸಿದರು ಮತ್ತು ಹಲವರು ಸಭಾಪತಿ ಪೀಠದೆದುರು ಬಂದ ಧರಣಿಗೆ ಮುಂದಾದರು. ಅಂತಿಮವಾಗಿ ಸಭಾಪತಿಗಳು ಕಲಾಪವನ್ನು ಮಾರ್ಚ್ 13ಕ್ಕೆ ಮುಂದೂಡಿದರು.
ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರು ಕಲಾಪವನ್ನು ಚಿತ್ರಿಕರಿಸುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಕಲಾಪದಿಂದ ಅಮಾನತು ಮಾಡಲಾಗಿತ್ತು.

Exit mobile version