ನವದೆಹಲಿ: ಕೇಂದ್ರ ಸರ್ಕಾರವು 2023ನೇ ಸಾಲಿನ ಪದ್ಮ ಪ್ರಶಸ್ತಿ ಘೋಷಿಸಿದ್ದು (Padma Awards 2023), ಆರು ಸಾಧಕರಿಗೆ ಪದ್ಮ ವಿಭೂಷಣ, ಒಂಬತ್ತು ಸಾಧಕರಿಗೆ ಪದ್ಮಭೂಷಣ ಹಾಗೂ 91 ಜನರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಅದರಲ್ಲೂ, ಕಳೆದ ಹಲವು ವರ್ಷಗಳಂತೆ ಈ ವರ್ಷವೂ ಗ್ರಾಮೀಣ ಭಾಗದ ಎಲೆಮರೆಯ ಸಾಧಕರಿಂದ ಹಿಡಿದು, ಖ್ಯಾತ ಸಾಧಕರವರೆಗೆ ಎಲ್ಲರನ್ನೂ ಒಳಗೊಂಡು ಪ್ರಶಸ್ತಿ ಘೋಷಣೆಯಾಗಿದೆ.
ಹಾವು ಹಿಡಿಯುವ ಮೂಲಕ ಅವರ ರಕ್ಷಣೆ ಮಾಡುವ ತಮಿಳುನಾಡಿನ ವಡಿವೇಲ್ ಗೋಪಾಲ್ ಹಾಗೂ ಮಾಸಿ ಸದಿಯಾನ್, ಕರ್ನಾಟಕದ ತಮಟೆ ವಾದಕ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಇನ್ನು ಲಕ್ಷಾಂತರ ಜನರ ಜೀವ ಉಳಿಸಿದ ಪಶ್ಚಿಮ ಬಂಗಾಳದ ಡಾ.ದಿಲೀಪ್ ಮಹಲ್ ನಬೀಸ್ ಸೇರಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ.
ಪದ್ಮ ವಿಭೂಷಣಕ್ಕೆ ಪಾತ್ರರಾದವರು
ಸಮಾಜವಾದಿ ಪಕ್ಷದ ವರಿಷ್ಠರಾಗಿದ್ದ ಮುಲಾಯಂ ಸಿಂಗ್ ಯಾದವ್, ದಿಲೀಪ್ ಮಹಾಲ ನಬೀಸ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಎಸ್.ಎಂ.ಕೃಷ್ಣ, ಸಂಗೀತಗಾರ ಜಾಕೀರ್ ಹುಸೇನ್, ಗಣಿತಜ್ಞ ಶ್ರೀನಿವಾಸ ವರದನ್ ಅವರೂ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪದ್ಮಭೂಷಣ ಪಡೆದವರು
ಇನ್ನು, ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ಸಾಹಿತಿ ಎಸ್.ಎಲ್.ಭೈರಪ್ಪ, ಆದಿತ್ಯ ಬಿರ್ಲಾ ಕಂಪನಿ ಚೇರ್ಮನ್ ಕುಮಾರ ಮಂಗಳಂ ಬಿರ್ಲಾ ಸೇರಿ ಹಲವು ಗಣ್ಯರಿಗೆ ಪದ್ಮಭೂಷಣ ನೀಡಲಾಗಿದೆ.
ಪದ್ಮಶ್ರೀ ಪಡೆದ ಪ್ರಮುಖರು
ಬಾಲಿವುಡ್ ನಟಿ ರವೀನಾ ಟಂಡನ್, ರಾಕೇಶ್ ಜುಂಜುನ್‌ವಾಲಾ (ಮರಣೋತ್ತರ), ಆರ್‌ಆರ್‌ಆರ್ ಚಿತ್ರದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಸೇರಿ ಹಲವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಇದನ್ನೂ ಓದಿ: Padma Awards 2023: ʼತಮಟೆಯ ತಂದೆʼ ಮುನಿವೆಂಕಟಪ್ಪಗೆ ಪದ್ಮಶ್ರೀ ಪ್ರಶಸ್ತಿ