Site icon Vistara News

Rakhi Sawant Arrested | ಮದುವೆ ವಿಚಾರಕ್ಕೆ ಸುದ್ದಿಯಾದ ಬೆನ್ನಲ್ಲೇ ರಾಖಿ ಸಾವಂತ್‌ ಬಂಧನ, ಏನಿದು ಪ್ರಕರಣ?

Rakhi Sawant Arrested

ಮುಂಬೈ: ಮದುವೆ ಹಾಗೂ ಮತಾಂತರ ವಿಚಾರಕ್ಕಾಗಿ ಸುದ್ದಿಯಾಗಿದ್ದ ಬಾಲಿವುಡ್‌ ನಟಿ ರಾಖಿ ಸಾವಂತ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿ ಶೆರ್ಲಿನ್‌ ಚೋಪ್ರಾ ಅವರು ದೂರು ನೀಡಿದ ಕಾರಣ ಮಹಾರಾಷ್ಟ್ರದ ಅಂಬೋಲಿ ಪೊಲೀಸರು ರಾಖಿ ಸಾವಂತ್‌ ಅವರನ್ನು (Rakhi Sawant Arrested) ಬಂಧಿಸಿದ್ದಾರೆ.

ಈ ಕುರಿತು ಶೆರ್ಲಿನ್‌ ಚೋಪ್ರಾ ಅವರೇ ರಾಖಿ ಸಾವಂತ್‌ ಬಂಧನದ ಕುರಿತು ಮಾಹಿತಿ ನೀಡಿದ್ದಾರೆ. ರಾಖಿ ಸಾವಂತ್‌ ಅವರನ್ನು ಅಂಬೋಲಿ ಪೊಲೀಸರು ಬಂಧಿಸಿದ್ದಾರೆ ಎಂದು ಶೆರ್ಲಿನ್‌ ಚೋಪ್ರಾ ಟ್ವೀಟ್‌ ಮಾಡಿದ್ದಾರೆ. ಮಿ ಟೂ ಪ್ರಕರಣದಲ್ಲಿ ರಾಖಿ ಸಾವಂತ್‌ ಅವರು ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಶೆರ್ಲಿನ್‌ ಚೋಪ್ರಾ ದೂರು ದಾಖಲಿಸಿದ್ದರು. ಹಾಗಾಗಿ, ಪೊಲೀಸರು ಬಂಧಿಸಿದ್ದಾರೆ ಎಂದಷ್ಟೇ ತಿಳಿದುಬಂದಿದೆ.

ಆದಿಲ್‌ ಖಾನ್‌ ಎಂಬುವರನ್ನು ರಾಖಿ ಸಾವಂತ್‌ ಅವರು ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಅವರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನಲಾಗಿದೆ. ಸದ್ಯ, ರಾಖಿ ಸಾವಂತ್‌ ಫಾತಿಮಾ ಎಂಬುದು ಅವರ ಹೆಸರಾಗಿದೆ ಎಂದು ತಿಳಿದುಬಂದಿದೆ. ರಾಖಿ ಸಾವಂತ್‌ ಅವರು ತಮ್ಮ ಡಾನ್ಸ್‌ ಅಕಾಡೆಮಿಗೆ ಚಾಲನೆ ನೀಡುವ (ಜನವರಿ 19) ದಿನದಂದೇ ಬಂಧಿಸಲಾಗಿದೆ.

ಇದನ್ನೂ ಓದಿ | Rakhi Sawant | ಮೈಸೂರಿನ ಜನ ನನ್ನೊಂದಿಗೆ ನಿಲ್ಲಬೇಕು: ಆದಿಲ್‌ ವಿಚಾರಕ್ಕೆ ಗಳಗಳನೆ ಅತ್ತ ರಾಖಿ ಸಾವಂತ್‌!

Exit mobile version