Site icon Vistara News

Rakhi Sawant Mother Dies | ನಟಿ ರಾಖಿ ಸಾವಂತ್‌ ತಾಯಿ ಜಯಾ ಭೇದಾ ಇನ್ನಿಲ್ಲ

Rakhi Sawant Mother

#image_title

ಮುಂಬೈ: ಬಾಲಿವುಡ್‌ ನಟಿ ರಾಖಿ ಸಾವಂತ್‌ ಅವರ ತಾಯಿ ಜಯಾ ಭೇದಾ ಸಾವಂತ್‌ (Rakhi Sawant Mother Dies) ಅವರು ನಿಧನರಾಗಿದ್ದಾರೆ. ಸುದೀರ್ಘ ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಯಾ ಭೇದಾ, ಮುಂಬೈನ ಜುಹು ಪ್ರದೇಶದಲ್ಲಿರುವ ಸಿಟಿ ಕೇರ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಜಯಾ ಭೇದಾ ಅವರು ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ ಸುದೀರ್ಘವಾಗಿ ಚಿಕಿತ್ಸೆ ನೀಡಿದರೂ ಕ್ಯಾನ್ಸರ್‌ ದೇಹದ ಹಲವು ಭಾಗಗಳಿಗೆ ವಿಸ್ತರಿಸಿತ್ತು. ಹಾಗಾಗಿ, ಕೆಲ ದಿನಗಳಿಂದ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿತ್ತು.

ಇದನ್ನೂ ಓದಿ: Rakhi Sawant | ರಾಖಿ ಸಾವಂತ್‌ ಮನೆಗೆ ಹೋಗಲು ಅವಕಾಶ ನೀಡಿದ ಪೊಲೀಸರು: ವಿಚಾರಣೆ ಇನ್ನೂ ಮುಗಿದಿಲ್ಲ ಎಂದ ನಟಿ ಶೆರ್ಲಿನ್ ಚೋಪ್ರಾ

ರಾಖಿ ಸಾವಂತ್‌ ತಾಯಿಯ ನಿಧನಕ್ಕೆ ಬಾಲಿವುಡ್‌ನ ಹಲವರು ವಿಷಾದ ವ್ಯಕ್ತಪಡಿಸಿದ್ದಾರೆ. “ನನ್ನ ತಾಯಿ ಅಗಲಿದ್ದಾರೆ” ಎಂಬುದಾಗಿ ರಾಖಿ ಸಾವಂತ್‌ ದುಃಖ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ, ರಾಖಿ ಸಾವಂತ್‌ ಅವರು ತಾಯಿ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತ, ನೀವೂ ತಾಯಿ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.

Exit mobile version