Site icon Vistara News

Modi Birthday | ಮೋದಿ ಜನ್ಮದಿನದ ಹಿನ್ನೆಲೆ ಆಯೋಜಿಸಿದ್ದ ರಕ್ತದಾನ ಶಿಬಿರ ವಿಶ್ವದಾಖಲೆ!

Blood

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ (Modi Birthday) ದೇಶಾದ್ಯಂತ ಆಯೋಜಿಸಲಾಗಿದ್ದ ರಕ್ತದಾನದ ಅಭಿಯಾನಕ್ಕೆ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಅಭಿಯಾನವು ವಿಶ್ವದಾಖಲೆಯನ್ನೂ ಮಾಡಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ ಅವರೇ ಮಾಹಿತಿ ನೀಡಿದ್ದಾರೆ.

ಸಫ್ದರ್‌ಜಂಗ್‌ ಆಸ್ಪತ್ರೆಯಲ್ಲಿ ಖುದ್ದು ಮಂಡಾವಿಯ ಅವರೇ ರಕ್ತದಾನ ಮಾಡಿದ ಬಳಿಕ ಮಾಹಿತಿ ನೀಡಿದರು. “ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾವಿರಾರು ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ. ೧೫ ದಿನ ಅಭಿಯಾನ ನಡೆಯಲಿದ್ದು, ಒಂದು ಲಕ್ಷ ಯೂನಿಟ್‌ (ಒಂದು ಯೂನಿಟ್‌ ಎಂದರೆ ೩೫೦ ಎಂಎಲ್‌ ಬ್ಲಡ್)‌ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಮೊದಲ ದಿನವೇ ೮೭,೧೩೭ ಜನ ರಕ್ತದಾನ ಮಾಡಿದ್ದಾರೆ. ಇದು ವಿಶ್ವದಾಖಲೆಯಾಗಿದೆ” ಎಂದು ತಿಳಿಸಿದರು.

“ರಕ್ತದಾನ ಅಮೃತ ಮಹೋತ್ಸವ” (Raktdaan Amrit Mahotsav) ಹೆಸರಿನಲ್ಲಿ ಅಭಿಯಾನ ಆಯೋಜಿಸಲಾಗಿದೆ. ಆರೋಗ್ಯ ಸೇತು APP ಅಥವಾ ಇ-ರಕ್ತಕೋಶ ವೆಬ್‌ ಪೋರ್ಟಲ್‌ನಲ್ಲಿ ರಕ್ತದಾನ ಮಾಡುವವರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ೧.೯೫ ಲಕ್ಷ ಜನ ಸ್ವಯಂ ಪ್ರೇರಣೆಯಿಂದ ಇದುವರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅಕ್ಟೋಬರ್‌ ೧ರಂದು ಅಭಿಯಾನ ಮುಕ್ತಾಯವಾಗಲಿದೆ.

ಇದನ್ನೂ ಓದಿ | Logistics Policy | ಜನ್ಮದಿನದಂದೇ ಲಾಜಿಸ್ಟಿಕ್ಸ್‌ ನೀತಿಗೆ ಮೋದಿ ಚಾಲನೆ, ಏನಿದು ನೀತಿ? ಏನಿದೆ ಉಪಯೋಗ?

Exit mobile version