Site icon Vistara News

Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

NCERT Textbooks

NCERT revises Class 12 Political Science textbook, removes Ayodhya references

ಉತ್ತರಪ್ರದೇಶ:ಶ್ರೀರಾಮ ಮಂದಿರ(Ram Mandir)ಕ್ಕೆ ಭೇಟಿ ನೀಡುಲೆಂದು ಪಾಕಿಸ್ತಾನದ ಸಿಂಧಿ ಸಮುದಾಯದ 200 ಜನರ ನಿಯೋಗ ಇಂದು ಅಯೋಧ್ಯೆ(Ayodhya)ಗೆ ಬರಲಿದೆ. ಈ ಬಗ್ಗೆ ದೇಗುಲದ ಟ್ರಸ್ಟ್‌ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸಿಂಧಿ ಸಮುದಾಯ ಒಂದು ತಿಂಗಳು ಭಾರತದಲ್ಲಿ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದು, ರಸ್ತೆ ಮೂಲಕ ಪ್ರಯಾಗರಾಜ್‌ನಿಂದ ಅಯೋಧ್ಯೆಗೆ ಬರಲಿದೆ. ಇವರ ಜೊತೆಗೆ ಭಾರತ ಸಿಂಧಿ ಸಮುದಾಯದ 150ಕ್ಕೂ ಹೆಚ್ಚು ಜನ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಈ ಪವಾಸಿ ತಂಡವನ್ನು ಸ್ವಾಗತಿಸಲಿದ್ದಾರೆ. ರಾಮ್‌ ಕೀ ಪೈದಿಯಲ್ಲಿ ಇದಕ್ಕೆಂದೇ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಯಾಗ್‌ರಾಜ್‌ನಿಂ ಈ ಪ್ರವಾಸಿಗರ ತಂಡ ಬಸ್‌ ಮೂಲಕ ಅಯೋಧ್ಯೆ ತಲುಪಲಿದೆ. ಭರತ್‌ ಕುಂಡ, ಗುಪ್ತಾರ್‌ ಘಾಟ್‌, ರೂಪನ್‌ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ಕೊಡಲಾಗುತ್ತದೆ ಎಂದು ರಾಷ್ಟ್ರೀಯ ಸಿಂಧಿ ವಿಕಾಸ್‌ ಪರಿಷತ್‌ನ ಸದಸ್ಯ ವಿಶ್ವ ಪ್ರಕಾಶ್‌ ರೂಪನ್‌ ಹೇಳಿದ್ದಾರೆ.

ಸಿಂಧಿ ಯಾತ್ರಿಕರಿಗೆ ವಿಶೇಷ ವ್ಯವಸ್ಥೆ

ಅಯೋಧ್ಯೆಗೆ ಆಗಮಿಸುತ್ತಿರುವ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿರುವ ಸಿಂಧಿ ಸಮುದಾಯದ ಯಾತ್ರಿಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಯಾತ್ರಿಕರಿಗೆಂದೇ ಅಯೋಧ್ಯೆಯ ಉದಾಸಿನ್‌ ರಿಷಿ ಆಶ್ರಮ ಮತ್ತು ಶಬರಿ ರಸೋಯಿ ಆಶ್ರಮಗಳಲ್ಲಿ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ ರಾಮ್‌ ಕೀ ಪೈದಿಯಲ್ಲಿ ನಡೆಯಲಿರುವ ಸರಯೂ ಆರತಿಯಲ್ಲಿ ಎಲ್ಲಾ ಯಾತ್ರಿಕರು ಭಾಗಿಯಾಗಲಿದ್ದಾರೆ. ಆ ಸಂದರ್ಭದಲ್ಲಿ ಚಂಪತ್‌ ರೈ ಸಿಂಧಿ ಯಾತ್ರಿಕರನ್ನು ಸ್ವಾಗತಿಸಲಿದ್ದಾರೆ.

ಅಲ್ಲದೇ ಅಯೋಧ್ಯೆಯ ಸಿಂಧಿ ಧಾಮ್‌ ಆಶ್ರಮದಲ್ಲಿ ಪಾಕ್‌ ಸಿಂಧಿ ಯಾತ್ರಿಕರಿಗೆಂದೇ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಲಿರುವ ಸಿಂಧಿ ಸಮುದಾಯದ ಯಾತ್ರಿಕರೂ ಭಾಗಿಯಾಗಿ ಪಾಕ್‌ ಯಾತ್ರಿಕರನ್ನು ಬರಮಾಡಿಕೊಳ್ಳಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಸಂತ ಸದಾ ರಾಮ ದರ್ಬಾರ್‌ ಮಠದ ಪೀಠಾಧಿಪತಿ ಯುಧಿಷ್ಠಿರ ಲಾಲ್‌ ಕೂಡ ಸಾಥ್‌ ನೀಡಲಿದ್ದಾರೆ. ಇಂದು ರಾತ್ರಿ ಸಿಂಧಿ ಪ್ರವಾಸಿಗರು ಲಕ್ನೋಗೆ ತೆರಳಿ ಅಲ್ಲಿಂದ ರಾಯ್‌ಪುರಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Lalu Prasad Yadav: ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ v/s ಲಾಲೂ ಪುತ್ರಿ

 ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಬಾಲಕ ರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ನೆರವೇರಿದೆ. ಜನವರಿ 22ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಸಮಾರಂಭ ಜನವರಿ 22ರಂದು ನಡೆಯಿತು. ಅದಾದ ಬಳಿಕ ಜನವರಿ 23ರಿಂದ ಈ ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿ ಬಾಲಕ ರಾಮನ ದರ್ಶನ ಮಾಡುತ್ತಿದ್ದಾರೆ. ಸದ್ಯ ರಾಮ ಮಂದಿರದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಭಕ್ತರಿಗೆ ದೇವರ ದರ್ಶನ ಭಾಗ್ಯ ಲಭಿಸಲಿದೆ. ಆರಂಭದಲ್ಲಿ ದೇಗುಲದ ಬಾಗಿಲನ್ನು ಬೆಳಗ್ಗೆ 7 ಗಂಟೆಗೆ ತೆರೆಯಲಾಗುತ್ತಿತ್ತು. ಬಳಿಕ ಪ್ರವಾಸಿಗರ ನೂಕು ನುಗ್ಗಲು ಗಮನಿಸಿ ದರ್ಶನದ ಸಮಯವನ್ನು ಹೆಚ್ಚಿಸಲಾಗಿತ್ತು. ಈ ಮಧ್ಯೆ ಮಧ್ಯಾಹ್ನ 12:30ರಿಂದ 1:30ರ ವರೆಗೆ ಬಾಲಕ ರಾಮನಿಗೆ ವಿಶ್ರಾಂತಿ ಸಮಯವಾಗಿರುವುದರಿಂದ ಈ ವೇಳೆ ಭಕ್ತರಿಗೆ ದರ್ಶನ ಲಭಿಸುವುದಿಲ್ಲ.

Exit mobile version