ನವದೆಹಲಿ: ದ್ವೇಷದ ನೆಲದ ಮೇಲೆ(nafrat ki zameen) ಭಗವಾನ್ ಶ್ರೀರಾಮ ಮಂದಿರವನ್ನು (Ram Mandir) ನಿರ್ಮಾಣ ಮಾಡಲಾಗುತ್ತಿದೆ ಎಂದು ಬಿಹಾರ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)ದ ಅಧ್ಯಕ್ಷ ಜಗದಾನಂದ ಸಿಂಗ್ ಅವರು ಹೇಳಿದ್ದಾರೆ. ಈ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ತಿರುಗೇಟು ನೀಡಿದೆ.
”ರಾಮ ಮಂದಿರವನ್ನು ದ್ವೇಷದ ನೆಲದ ಮೇಲೆ ನಿರ್ಮಾಣ ಮಾಡಲಾಗುತ್ತಿದೆ. ನಾವು ಹೇ ರಾಮ್‌ನಲ್ಲಿ ನಂಬಿಕೆ ಇಟ್ಟವರೇ ಹೊರತು ಜೈ ಶ್ರೀರಾಮ್ ಘೋಷಣೆಯಲ್ಲಿ ಅಲ್ಲ. ರಾಮನನ್ನು ನೀವು ಭವ್ಯವಾದ ಪ್ರದೇಶದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಶ್ರೀರಾಮ ಅಯೋಧ್ಯೆಯಲ್ಲೂ ಇಲ್ಲ, ಲಂಕಾದಲ್ಲೂ ಇಲ್ಲ. ಆತ ಶಬರಿಯ ಗುಡಿಸಲಿನಲ್ಲಿದ್ದಾನೆ ಎಂದು ಜಗದಾನಂದ ಸಿಂಗ್ ಹೇಳಿದ್ದಾರೆ.
2024 ಜನವರಿ 1ಕ್ಕೆ ರಾಮ ಮಂದಿರ ಸಿದ್ಧವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘೋಷಣೆ ಮಾಡಿದ ಬೆನ್ನಲ್ಲೇ, ಬಿಹಾರ ಆರ್‌ಜೆಡಿ ನಾಯಕರು ಈ ಹೇಳಿಕೆಯನ್ನು ನೀಡಿದ್ದಾರೆ. ಜನರ ಹೃದಯದಿಂದ ದೂರಾಗಿ ರಾಮ ಇನ್ನು ಮಂದಿರದಲ್ಲೇ ಕುಳಿತುಕೊಳ್ಳುತ್ತಾನೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | Ram mandir | ಅಯೋಧ್ಯೆಯ ರಾಮ ಮಂದಿರದಲ್ಲಿ 2024 ಜನವರಿ 14ರ ಮಕರ ಸಂಕ್ರಾಂತಿಗೆ ಶ್ರೀರಾಮ ವಿರಾಜಮಾನ