Site icon Vistara News

Ram Mandir: ಡಿಸ್ಕವರಿ ಚಾನೆಲ್‌ನಲ್ಲಿ ರಾಮಾಯಣ ಸಿರೀಸ್‌ ಪ್ರಸಾರ; ಟೈಮಿಂಗ್‌ ಹೀಗಿದೆ

Legends Of the Ramayana with Amish

Ram Mandir: Discovery Channel to air ‘Legends of The Ramayana with Amish’

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ (Ram Mandir) ಜನವರಿ 22ರಂದು ನಡೆಯುವ ಪ್ರಾಣಪ್ರತಿಷ್ಠಾಪನೆಗಾಗಿ ದೇಶಕ್ಕೆ ದೇಶವೇ ಕಾತುರದಿಂದ ಕಾಯುತ್ತಿದೆ. ಸುಮಾರು 500 ವರ್ಷಗಳ ಕನಸು ಈಗ ನನಸಾಗುತ್ತಿರುವ ಕಾರಣ ರಾಮನ ಭಕ್ತರು ರಾಮಜಪದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೇ, ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಡಿಸ್ಕವರಿ ಚಾನೆಲ್‌ನಲ್ಲಿ (Discovery Channel) ಲೆಜೆಂಡ್ಸ್‌ ಆಫ್‌ ದಿ ರಾಮಾಯಣ ವಿತ್‌ ಆಮಿಷ್‌ (Legends Of the Ramayana with Amish) ಎಂಬ ಡಾಕುಮೆಂಟ್‌ ಸಿರೀಸ್‌ (Docu-Series) ಪ್ರಸಾರವಾಗಲಿದೆ.

ಖ್ಯಾತ ಕಾದಂಬರಿಕಾರ ಆಮಿಷ್‌ ತ್ರಿಪಾಠಿ ಅವರು ಲೆಜೆಂಡ್ಸ್‌ ಆಫ್‌ ದಿ ರಾಮಾಯಣ ವಿತ್‌ ಆಮಿಷ್‌ ಡಾಕ್ಯು-ಸಿರೀಸ್‌ ನಿರ್ಮಿಸಿದ್ದಾರೆ. ಇದು ಸುಮಾರು 5 ಸಾವಿರ ಕಿಲೋಮೀಟರ್‌ ವ್ಯಾಪ್ತಿಯಲ್ಲಿ ರಾಮ ಸಂಚರಿಸಿದ್ದು, ಪ್ರಮುಖ ಘಟನೆಗಳು, ರಾಮನ ಆದರ್ಶ, ಜನರ ಮೇಲೆ ರಾಮ ಬೀರಿದ ಪರಿಣಾಮ, ಭಾರತದಾದ್ಯಂತ ಜನರ ಜೀವನ ಶೈಲಿ, ತತ್ವಜ್ಞಾನ, ನಂಬಿಕೆ ಸೇರಿ ನೂರಾರು ಅಂಶಗಳನ್ನು ಒಳಗೊಂಡಿದೆ. ಮೂರು ಪಾರ್ಟ್‌ಗಳಲ್ಲಿ ಸಿರೀಸ್‌ ನಿರ್ಮಿಸಲಾಗಿದ್ದು, ಮೂರೂ ಭಾಗಗಳು ಪ್ರಸಾರವಾಗಲಿವೆ. ಅದ್ಭುತ ವಿಡಿಯೊಗಳನ್ನು ಕೂಡ ಸಿರೀಸ್‌ ಒಳಗೊಂಡಿದೆ.

ಪ್ರಸಾರದ ಸಮಯ, ದಿನಾಂಕ

ಜನವರಿ 20ರಿಂದ ಜನವರಿ 23ರವರೆಗೆ ಲೆಜೆಂಡ್ಸ್‌ ಆಫ್‌ ದಿ ರಾಮಾಯಣ ವಿತ್‌ ಆಮಿಷ್‌ ಡಾಕ್ಯು-ಸಿರೀಸ್‌ ಪ್ರಸಾರವಾಗಲಿದೆ. ಡಿತಮಿಳ್‌ (DTamil) ಹಾಗೂ ಡಿಸ್ಕವರಿ ಪ್ಲಸ್‌ (Discovery+) ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ಡಿಸ್ಕವರಿ ಪ್ಲಸ್‌ನಲ್ಲಿ ಜನವರಿ 20ರಿಂದ ಜನವರಿ 22ರವರೆಗೆ ನಿತ್ಯ ಸಂಜೆ 7 ಗಂಟೆಗೆ ಹಾಗೂ ಜನವರಿ 23ರಂದು ಸಂಜೆ 4 ಗಂಟೆಗೆ ಪ್ರಸಾರವಾಗಲಿದೆ. ಡಿತಮಿಳ್ ಚಾನೆಲ್‌ನಲ್ಲಿ ಜನವರಿ 22ರಿಂದ ಜನವರಿ 24ರವರೆಗೆ ನಿತ್ಯ ಸಂಜೆ 7 ಗಂಟೆಗೆ ಹಾಗೂ ಜನವರಿ 23ರಂದು ಮಧ್ಯಾಹ್ನ 3ಗಂಟೆಗೆ ಪ್ರಸಾರವಾಗಲಿದೆ ಎಂದು ಡಿಸ್ಕವರಿ ಚಾನೆಲ್‌ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Ram Mandir: ರಾಮಮಂದಿರ ಪ್ರತಿಷ್ಠಾಪನೆ; ರಾಜ್ಯದಲ್ಲಿ ಬಿಗಿ ಭದ್ರತೆಗೆ ಸಿಎಂ ಸೂಚನೆ

ಲೋಕಾರ್ಪಣೆ ಕಾರ್ಯಕ್ರಮದ ಲೈವ್

‌ಕರ್ನಾಟಕದಲ್ಲಿ ರಾಮ ಮಂದಿರ ಲೋಕಾರ್ಪಣೆಯ ದಿನ ಕೆಲವು ಖಾಸಗಿ ಶಾಲೆಗಳು ರಜೆಯನ್ನೇ ಘೋಷಿಸಿವೆ. ಆದರೆ, ಕೆಲವು ಘೋಷಿಸಿಲ್ಲ. ರಜೆ ಘೋಷಿಸದ ಶಾಲೆಗಳಲ್ಲಿ ಲೋಕಾರ್ಪಣೆ ಕಾರ್ಯಕ್ರಮ, ರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯುವ‌ ಹೊತ್ತಿನಲ್ಲಿ ಲೈವ್‌ ಆಗಿ ನೋಡಲು ವ್ಯವಸ್ಥೆ ಮಾಡಲಾಗುವುದು ಎಂದು ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್‌ನ ಅಧ್ಯಕ್ಷ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ. ಜನವರಿ 22ರಂದು ಶಾಲೆಗಳಿಗೆ ರಜೆ ನೀಡುವ ಬದಲು ಶಾಲೆಯಲ್ಲೇ ಲೈವ್ ಟೆಲಿಕಾಸ್ಟ್ ಮಾಡುವ ಪ್ಲಾನ್ ಇದೆ. ಆಯಾ ಶಾಲೆಯ ತರಗತಿಗಳಲ್ಲೇ ಒಂದು ಗಂಟೆ ರಾಮನ ಪ್ರತಿಷ್ಠಾಪನೆ ಬಗ್ಗೆ ಲೈವ್ ನಡೆಸಿ ಮಕ್ಕಳಿಗೆ ಅದರ ಮಾಹಿತಿ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಅವರು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version