Site icon Vistara News

Ram Mandir: ರಾಮಜನ್ಮಭೂಮಿ-ಬಾಬರಿ ಮಸೀದಿ ಕೇಸಿನ ದಾವೆದಾರ ಇಕ್ಬಾಲ್ ಅನ್ಸಾರಿಗೂ ಆಮಂತ್ರಣ

Ram Mandir inauguration invitation sent to Babri litigant Iqbal Ansari

ಅಯೋಧ್ಯಾ, ಉತ್ತರ ಪ್ರದೇಶ: ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ (Ramjanmabhoomi-Babri Masjid case) ದಾವೆದಾರ ಇಕ್ಬಾಲ್ ಅನ್ಸಾರಿ (litigant Iqbal Ansari) ಅವರಿಗೆ ರಾಮ ಮಂದಿರ (Ram Mandir) ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಆಮಂತ್ರಣ ನೀಡಲಾಗಿದೆ ಎಂದು ಅವರು ಪುತ್ರಿ ಹೇಳಿದ್ದಾರೆ. ರಾಮ್ ಪಥ್ ಬಳಿಯ ಕೋಟ್ಯಾ ಪಂಜಿತೋಲಾದಲ್ಲಿ ಇಕ್ಬಾಲ್ ಅನ್ಸಾರಿ ಅವರ ಮನೆಗೆ ತೆರಳಿ ಆಮಂತ್ರಿಸಲಾಗಿದೆ. “ನನ್ನ ತಂದೆಗೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಮಂತ್ರಣವನ್ನು ಮುಂಜಾನೆ ಹಸ್ತಾಂತರಿಸಲಾಯಿತು” (inauguration invitation) ಎಂದು ಅವರ ಮಗಳು ಶಾಮಾ ಪರ್ವೀನ್ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಉದ್ಘಾಟನೆಯು ಜನವರಿ 22ರಂದು ನಡೆಯಲಿದೆ. ಇದಕ್ಕಾಗಿ ಭರದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಆಹ್ವಾನಿತರ ಪಟ್ಟಿಯಲ್ಲಿ ಭಾರತ ಮತ್ತು ವಿದೇಶದಿಂದ ಸುಮಾರು 7,000 ಅತಿಥಿಗಳು ಇದ್ದಾರೆ. 50ರ ಹರೆಯದ ಅನ್ಸಾರಿ ಅವರು ಡಿಸೆಂಬರ್ 31 ರಂದು ತಮ್ಮ ನಿವಾಸದಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ರಾಮ ಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ 2019ರ ತೀರ್ಪನ್ನು ಮುಸ್ಲಿಂ ಸಮುದಾಯವು ಗೌರವಿಸುತ್ತದೆ ಎಂದು ಹೇಳಿದ್ದರು.

Ram Mandir: ರಾಮಮಂದಿರ ಉದ್ಘಾಟನೆಯ ಆಹ್ವಾನ ಪತ್ರಿಕೆ ಹೇಗಿದೆ?

ಸಿನಿಮಾ, ರಾಜಕೀಯ, ಸಾರ್ವಜನಿಕ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳ 6 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಈಗ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ (Invitation Card) ವಿಡಿಯೊ ವೈರಲ್‌ ಆಗಿದ್ದು, ಆಹ್ವಾನ ಪತ್ರಿಕೆಯ ವಿನ್ಯಾಸ, ಅದರಲ್ಲಿರುವ ಅಂಶಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರ ಹೆಸರಿವೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುಖ್ಯ ಅತಿಥಿಗಳು, ರಾಮಲಲ್ಲಾನ ಫೋಟೊ, ಜನವರಿ 22ರಂದು ನಡೆಯುವ ಕಾರ್ಯಕ್ರಮಗಳ ಪಟ್ಟಿ, ರಾಮಮಂದಿರದ ಇತಿಹಾಸ ಸಾರುವ ಅಂಶಗಳು ಆಹ್ವಾನ ಪತ್ರಿಕೆಯಲ್ಲಿವೆ. ದೂರದರ್ಶನ ನ್ಯಾಷನಲ್‌ ಚಾನೆಲ್‌ನ ಎಕ್ಸ್‌ ಖಾತೆಯಲ್ಲಿ ವಿಡಿಯೊ ಪೋಸ್ಟ್‌ ಮಾಡಲಾಗಿದ್ದು, ಇದು ಈಗ ವೈರಲ್‌ ಆಗಿದೆ.

ಈ ಸುದ್ದಿಯನ್ನೂ ಓದಿ: Ram Mandir: ಒಂಚೂರು ಕಬ್ಬಿಣ ಬಳಸದೆ, ನಾಗರ ಶೈಲಿಯಲ್ಲಿ ರಾಮ ಮಂದಿರ ನಿರ್ಮಾಣ!

Exit mobile version