ಲಖನೌ: ಅಯೋಧ್ಯೆ (Ayodhya)ಯ ರಾಮಪಥ (Ram Path) ಹಾಗೂ ಭಕ್ತಿಪಥ (Bhakti Path)ದಲ್ಲಿದ್ದ 50 ಲಕ್ಷ ರೂ. ಮೌಲ್ಯದ ಬೀದಿ ದೀಪಗಳನ್ನು ಕಳವು ಮಾಡಲಾಗಿದ್ದು, ಗುತ್ತಿಗೆದಾರರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. 3,800ಕ್ಕೂ ಅಧಿಕ ಬೀದಿ ದೀಪಗಳು ಹಾಗೂ 36 ಪ್ರೊಜೆಕ್ಟರ್ ದೀಪಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ʼʼರಾಮಪಥದ ಮರಗಳಿಗೆ ಅಳವಡಿಸಿದ್ದ 3,800 ಬಾಂಬೂ ಲೈಟ್ ಮತ್ತು ಭಕ್ತಿಪಥದಲ್ಲಿದ್ದ 36 ಗೋಬೊ ಪ್ರೊಜೆಕ್ಟರ್ ಲೈಟ್‌ಗಳನ್ನು ಕಳವು ಮಾಡಲಾಗಿದೆ. ಇದರ ಒಟ್ಟು ಮೌಲು ಸುಮಾರು 50 ಲಕ್ಷ ರೂ.ʼʼ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ನೀಡಿದ ಗುತ್ತಿಗೆಯಡಿಯಲ್ಲಿ ದೀಪಗಳನ್ನು ಅಳವಡಿಸಿದ ಯಶ್ ಎಂಟರ್‌ಪ್ರೈಸಸ್ ಮತ್ತು ಕೃಷ್ಣ ಆಟೋಮೊಬೈಲ್ಸ್ ಸಂಸ್ಥೆಯ ಪ್ರತಿನಿಧಿಗಳು ದೂರು ದಾಖಲಿಸಿದ್ದಾರೆ. ರಾಮಪಥದಲ್ಲಿ 6,400 ಬಾಂಬೂ ಲೈಟ್ ಮತ್ತು ಭಕ್ತಿಪಥದಲ್ಲಿ 96 ಗೋಬೊ ಪ್ರೊಜೆಕ್ಟರ್ ಲೈಟ್‌ಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ಅರ್ಧದಷ್ಟನ್ನು ಕಳ್ಳರು ಎಗರಿಸಿದ್ದಾರೆ.
कनक रतनमय पालनो रच्यो मनहुॅं मारसुतहार।
— Shri Ram Janmbhoomi Teerth Kshetra (@ShriRamTeerth) August 12, 2024
बिबिध खेलौना किंकिनी लागे मंजुल मुकुताहार।।
रघुकुल मंडन राम लला।।
सुवर्ण और मणियों से जड़ा हुआ मनोहर पालना है जिसे मानो कामदेव रूपी बढ़ई ने बनाया हो, उसमें खिलौने, घुंघरू व मोती की मालाएं हैं। उसमें ही रघुकुल भूषण रामलला विराजमान हैं। pic.twitter.com/oqQfJne4Sh
ʼʼರಾಮಪಥದಲ್ಲಿ 6,400 ಬಿದಿರಿನ ದೀಪಗಳು ಮತ್ತು ಭಕ್ತಿ ಪಥದಲ್ಲಿ 96 ಪ್ರೊಜೆಕ್ಟರ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಮಾರ್ಚ್ 19ರವರೆಗೆ ಎಲ್ಲ ದೀಪಗಳು ಇದ್ದವು. ಆದರೆ ಮೇ 9ರಂದು ಪರಿಶೀಲಿಸಿದಾಗ ಈ ಪೈಕಿ ಕೆಲವು ದೀಪಗಳು ನಾಪತ್ತೆಯಾಗಿದ್ದವು. ಇದುವರೆಗೆ ಒಟ್ಟು 3,800 ಬಿದಿರಿನ ದೀಪಗಳು ಮತ್ತು 36 ಪ್ರೊಜೆಕ್ಟರ್ ದೀಪಗಳು ಕಾಣೆಯಾಗಿವೆʼʼ ಎಂದು ದೀಪ ಅವಳಡಿಸಿದ್ದ ಸಂಸ್ಥೆಯ ಪ್ರತಿನಿಧಿ ಶೇಖರ್ ಶರ್ಮಾ ಮಾಹಿತಿ ನೀಡಿದ್ದಾರೆ.
ದೀಪಗಳು ಕಾಣೆಯಾಗುವ ಬಗ್ಗೆ ಕಂಪೆನಿಗೆ ಮೇ ತಿಂಗಳಿನಲ್ಲಿಯೇ ಗೊತ್ತಾಗಿದ್ದರೂ ಆಗಸ್ಟ್ 9ರಂದು ದೂರು ದಾಖಲಿಸಿದೆ. ಸದ್ಯ ಈ ಬಗ್ಗೆ ರಾಮಜನ್ಮಭೂಮಿ ಠಾಣೆಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಯಾವುದೇ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಭಕ್ತಿಪಥವು ರಾಮ ಮಂದಿರಕ್ಕೆ ಹೋಗುವ ರಸ್ತೆಯಾಗಿದ್ದು, ಶೃಂಗಾರ್ ಘಾಟ್ ಅನ್ನು ಹನುಮಾನ್ ಗರ್ಹಿ ಮತ್ತು ರಾಮಮಂದಿರಕ್ಕೆ ಸಂಪರ್ಕಿಸುತ್ತದೆ. 742 ಮೀಟರ್ ರಸ್ತೆಯ ಇಕ್ಕೆಲೆಗಳಲ್ಲಿ ಕೇಸರಿ ಬಣ್ಣ ಬಳಿಯಲಾದ ಅಂಗಡಿಗಳು ಮತ್ತು ನಿವಾಸಗಳಿದ್ದು, ಪ್ರವಾಸಿಗರ ಗಮನ ಸೆಳೆಯುತ್ತದೆ. ಕನಕ ಭವನ ಮತ್ತು ದಶರಥ ಮಹಲ್‌ನಂತಹ ಪ್ರಮುಖ ಕಟ್ಟಡಗಳು ಇದೇ ಮಾರ್ಗದಲ್ಲಿದೆ.
ಸಾದತ್ಗಂಜ್ ಮತ್ತು ನಯಾ ಘಾಟ್ ಅನ್ನು ಸಂಪರ್ಕಿಸುವ 13 ಕಿ.ಮೀ ಉದ್ದದ, ನಾಲ್ಕು ಪಥದ ಹೆದ್ದಾರಿಯನ್ನು ರಾಮಪಥ ಎಂದು ಕರೆಯಲಾಗುತ್ತದೆ. ಈ ವರ್ಷದ ಜನವರಿ 22ರಂದು ರಾಮ ಮಂದಿರಲ್ಲಿ ಬಾಲಕ ರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ಸಮಾರಂಭ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಸಹಿತ ದೇಶದ ವಿವಿಧ ರಂಗಗಳ ಗಣ್ಯರು ಈ ಐತಿಹಾಸಿಕ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಕೆಲವು ದಿನಗಳ ಹಿಂದೆ ಮಳೆಗಾಲ ಆರಂಭವಾದಾಗ ರಾಮ ಮಂದಿರದ ಒಳಗೆ ನೀರು ಸೋರಿಕೆಯಾಗುತ್ತದೆ ಎನ್ನುವ ವಿಚಾರ ಸಾಕಷ್ಟು ಸುದ್ದಿ ಮಾಡಿತ್ತು. ʼʼಮಂದಿರ ನಿರ್ಮಾಣದ ವೇಳೆ ಅನೇಕ ಎಂಜಿನಿಯರ್‌ಗಳು ಮೇಲ್ವಿಚಾರಣೆ ನಡೆಸಿದ್ದರು. ಅದರ ಹೊರತಾಗಿಯೂ, ಛಾವಣಿಯಿಂದ ನೀರು ಸೋರುತ್ತಿದೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲʼʼ ಎಂದು ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅಚ್ಚರಿ ವ್ಯಕ್ತಪಡಿಸಿದ್ದರು.