ನವ ದೆಹಲಿ: ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದ ಬಳಿಕ ರಾಮ್‌ನಾಥ್ ಕೋವಿಂದ್ ಅವರು, ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಕೊನೆಯವರೆಗೂ ವಾಸಿಸುತ್ತಿದ್ದ ಬಂಗಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ರಾಮ್‌ನಾಥ್ ಕೋವಿಂದ್ ಅವರು ಮುಂದಿನ ತಿಂಗಳು ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ. ೧೨ ಜನಪಥ್‌ನಲ್ಲಿರುವ ಬಂಗಲೆ ನವೀಕರಣವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಮ್‌ನಾಥ್ ಕೋವಿಂದ್ ಅವರು ಜುಲೈ ೨೫ರಂದು ಹೊಸ ಬಂಗಲೆಗೆ ಸ್ಥಳಾಂತರವಾಗುವ ನಿರೀಕ್ಷೆ ಇದೆ. ಬಂಗಲೆಯ ನವೀಕರಣ ವೇಳೆ ಕೋವಿಂದ್ ಅವರ ಕುಟುಂಬ ಯಾವುದೇ ವಿಶೇಷ ಬೇಡಿಕೆ ಮುಂದಿಟ್ಟಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸವೂ ೧೦ ಜನ್‌ಪಥ್‌ನಲ್ಲಿದೆ.