Site icon Vistara News

ಇತಿಹಾಸದ ಪಠ್ಯದಲ್ಲಿ ರಾಮಾಯಣ, ಮಹಾಭಾರತ! ಶಾಲೆಗಳಲ್ಲಿ ಕಲಿಸಲು ಎನ್‌ಸಿಇಆರ್‌ಟಿಗೆ ಶಿಫಾರಸು

Ramayana, Mahabharata likely to be part of NCERT SS Textbook Says Committee

ನವದೆಹಲಿ: ರಾಮಾಯಣ (Ramayana) ಮತ್ತು ಮಹಾಭಾರತದಂತಹ (Mahabhart) ಮಹಾಕಾವ್ಯಗಳನ್ನು (Epics of India) ಭಾರತದ ‘ಶಾಸ್ತ್ರೀಯ ಅವಧಿ’ ಅಡಿಯಲ್ಲಿ ಇತಿಹಾಸದ ಪಠ್ಯಕ್ರಮದ ಭಾಗವಾಗಿ ಶಾಲೆಗಳಲ್ಲಿ ಕಲಿಸಬೇಕು ಎಂದು ಉನ್ನತ ಮಟ್ಟದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸಮಿತಿ ಶಿಫಾರಸು ಮಾಡಿದೆ. ಹಾಗೆಯೇ, ಸಂವಿಧಾನದ ಪೀಠಿಕೆಯನ್ನು (Preamble of the Constitution) ಎಲ್ಲಾ ತರಗತಿಗಳ ಗೋಡೆಗಳ ಮೇಲೆ ಸ್ಥಳೀಯ ಭಾಷೆಗಳಲ್ಲಿ ಬರೆಯುವಂತೆ ಸಮಿತಿಯು ಶಿಫಾರಸು ಮಾಡಿದೆ ಎಂದು ಸಮಿತಿಯ ಅಧ್ಯಕ್ಷ ಪ್ರೊ ಸಿ ಐ ಐಸಾಕ್ ತಿಳಿಸಿದ್ದಾರೆ.

ಶಾಲೆಗಳಿಗೆ ಸಮಾಜ ವಿಜ್ಞಾನ ಪಠ್ಯಕ್ರಮವನ್ನು ಪರಿಷ್ಕರಿಸಲು ಸ್ಥಾಪಿಸಲಾದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಸಮಾಜ ವಿಜ್ಞಾನ ಸಮಿತಿಯು ಪಠ್ಯಪುಸ್ತಕಗಳಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ, ವೇದಗಳು ಮತ್ತು ಆಯುರ್ವೇದವನ್ನು ಪರಿಚಯಿಸುವುದು ಸೇರಿದಂತೆ ಹಲವಾರು ಪ್ರಸ್ತಾಪಗಳನ್ನು ಮಾಡಿದೆ.

ಸಲಹೆಗಳು ಸಮಾಜ ವಿಜ್ಞಾನದ ಅಂತಿಮ ದಾಖಲೆಯ ಭಾಗವಾಗಿದೆ, ಇದು ವಿಷಯದ ಕುರಿತು ಹೊಸ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಅಭಿವೃದ್ಧಿಗೆ ಸಹಾಯ ಮಾಡುವ ಪ್ರಮುಖ ದೃಷ್ಟಿಕೋನ ದಾಖಲೆಯಾಗಿದೆ. ಈ ಪ್ರಸ್ತಾವನೆಗೆ ಎನ್‌ಸಿಇಆರ್‌ಟಿಯಿಂದ ಅಂತಿಮ ಒಪ್ಪಿಗೆ ಸಿಗಬೇಕಿದೆ.

ಇತಿಹಾಸವನ್ನು ನಾಲ್ಕು ಅವಧಿಗಳಾಗಿ ವರ್ಗೀಕರಿಸಲು ಸಮಿತಿಯು ಶಿಫಾರಸುಗಳನ್ನು ಮಾಡಿದೆ; ಶಾಸ್ತ್ರೀಯ ಅವಧಿ, ಮಧ್ಯಕಾಲೀನ ಅವಧಿ, ಬ್ರಿಟಿಷ್ ಯುಗ ಮತ್ತು ಆಧುನಿಕ ಭಾರತ. ಇಲ್ಲಿಯವರೆಗೆ, ಭಾರತೀಯ ಇತಿಹಾಸದಲ್ಲಿ ಕೇವಲ ಮೂರು ವರ್ಗೀಕರಣಗಳಿವೆ. ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಭಾರತ ಎಂದು ವರ್ಗೀಕರಿಸಲಾಗಿತ್ತು ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಐಸಾಕ್ ಹೇಳಿದ್ದಾರೆ.

ಶಾಸ್ತ್ರೀಯ ಅವಧಿಯಲ್ಲಿ ನಾವು ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ಕಲಿಸಲು ಶಿಫಾರಸು ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ರಾಮ ಹಾಗೂ ಆತನ ಉದ್ದೇಶದ ಬಗ್ಗೆ ಸಂಪೂರ್ಣ ತಿಳಿವಳಿಕೆ ಇರಬೇಕು. ಹಾಗೆಯೇ, ಪಠ್ಯ ಪುಸ್ತಕಗಳಲ್ಲಿ ಎಲ್ಲ ರಾಜಮನೆತನಗಳ ಬಗ್ಗೆ ಕಲಿಸಬೇಕು. ಕೇವಲ ಒಂದೆರಡು ರಾಜಮನೆತನಗಳ ಬಗ್ಗೆ ಮಾತ್ರ ಸಲ್ಲದು ಎಂದು ಸಮಿತಿಯು ಹೇಳಿದೆ.

ಇಂಡಿಯಾ ಬದಲಿಗೆ ಭಾರತ ಬಳಕೆ

ಕೆಲವು ದಿನಗಳ ಹಿಂದೆ ಇದೇ ಸಮಿತಿ ಪಠ್ಯ ಪುಸ್ತಗಳಲ್ಲಿ ಇಂಡಿಯಾ ಪದದ ಬದಲಿಗೆ ಭಾರತ್ ಪದ ಬಳಕೆಯ ಬಗ್ಗೆ ಶಿಫಾರಸು ಮಾಡಿತ್ತು. ಶಾಲಾ ಪಠ್ಯಗಳಲ್ಲಿ (School Textbooks) ಇಂಡಿಯಾ (India) ಪದ ಬದಲಿಗೆ ಭಾರತ (Bharat) ಪದ ಬಳಸಲು ಉನ್ನತಾಧಿಕಾರದ ಎನ್‌ಸಿಇಆರ್‌ಟಿ ಸಮಿತಿ ಶಿಫಾರಸು ಮಾಡಿದೆ(NCERT panel recommends). ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ರಚಿಸಿರುವ ಸಾಮಾಜಿಕ ವಿಜ್ಞಾನಗಳ ಉನ್ನತ ಮಟ್ಟದ ಸಮಿತಿಯು, ಪ್ರಾಚೀನ ಇತಿಹಾಸದ ಬದಲಿಗೆ ‘ಶಾಸ್ತ್ರೀಯ ಇತಿಹಾಸ’ ಎಂದು ಪರಿಚಯಿಸಲು ಶಿಫಾರಸು ಮಾಡಿದೆ.

ಹೊಸ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಅಭಿವೃದ್ಧಿಗೆ ಅಡಿಪಾಯ ಹಾಕುವ ಪ್ರಮುಖ ದಾಖಲೆಯಾಗಿರುವ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆಗೆ ಏಳು ಸದಸ್ಯರ ಸಮಿತಿಯು ಸರ್ವಾನುಮತ ಶಿಫಾರಸಗಳನ್ನು ನೀಡಿದೆ. ಸಂವಿಧಾನದ ಆರ್ಟಿಕಲ್ 1ರಲ್ಲಿ ಇಂಡಿಯಾ ಎಂದು ಹೇಳಲಾಗುವ ಭಾರತವು ಒಕ್ಕೂಟಗಳ ರಾಷ್ಟ್ರವಾಗಿದೆ ಎಂದು ತಿಳಿಸಲಾಗಿದೆ. ಭಾರತವು ಪ್ರಾಚೀನ ಹೆಸರಾಗಿದ್ದು, 7000 ವರ್ಷಗಳ ಪ್ರಾಚೀನ ವಿಷ್ಣು ಪುರಾಣ ಸೇರಿದಂತೆ ಅನೇಕ ಪುರಾಣ, ಗ್ರಂಥಗಳಲ್ಲಿ ಭಾರತ ಎಂಬ ಹೆಸರು ಉಲ್ಲೇಖಿಸಲಾಗಿದೆ.

1757ರ ಪ್ಲಾಸಿ ಕದನದ ಬಳಿಕ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಇಂಡಿಯಾ ಎಂದು ಬಳಸಲು ಆರಂಭಿಸಲಾಯಿತು. ಹಾಗಾಗಿ, ಸಮಿತಿಯು ಅವಿರೋಧವಾಗಿ ಇಂಡಿಯಾ ಪದ ಬದಲಿಗೆ ಭಾರತ ಎಂಬ ಪದವನ್ನು ಎಲ್ಲ ವರ್ಗದ ಸಾಮಾಜಿಕ ವಿಜ್ಞಾನ ಪಠ್ಯಗಳಲ್ಲಿ ಬಳಸಲು ಶಿಫಾರಸು ಮಾಡಿದೆ ಎಂದು ಐಸಾಕ್ ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ: NCERT Textbooks: ಆಪರೇಷನ್‌ ಪಠ್ಯಪುಸ್ತಕ; ಖಲಿಸ್ತಾನ, ಅಸಮಾನತೆ, ಪ್ರಜಾಪ್ರಭುತ್ವ ಚಾಪ್ಟರ್‌ ಕೈಬಿಟ್ಟ ಎನ್‌ಸಿಇಆರ್‌ಟಿ

Exit mobile version