Site icon Vistara News

Ramcharitmanas: 138 ಗಂಟೆ, 41 ನಿಮಿಷ, 2 ಸೆಕೆಂಡ್;‌ ಗಿನ್ನಿಸ್‌ ದಾಖಲೆ ಬರೆದ ರಾಮಚರಿತಮಾನಸ

Ramcharitmanas enters in Guinness World Records as world's longest song

ರಾಮಚರಿತಮಾನಸ

ಲಖನೌ: ತುಳಸೀದಾಸರು ರಚಿಸಿದ ರಾಮಚರಿತಮಾನಸ (Ramcharitmanas) ಈಗ ಗಿನ್ನಿಸ್‌ ವಿಶ್ವದಾಖಲೆಗೆ ಭಾಜನವಾಗಿದೆ. ವಾರಾಣಸಿಯ ಡಾ.ಜಗದೀಶ್‌ ಪಿಳ್ಳೈ ಅವರು ರಾಮಚರಿತಮಾನಸವನ್ನು 138 ಗಂಟೆ, 41 ನಿಮಿಷ ಹಾಗೂ 2 ಸೆಕೆಂಡ್‌ವರೆಗೆ ರಾಮಚರಿತಮಾನಸವನ್ನು ಹಾಡಿದ್ದು, ಇದು ವಿಶ್ವದ ಸುದೀರ್ಘ ಹಾಡು ಎನಿಸಿದೆ.

ಸಾಮಾನ್ಯ ಜನರಿಗೂ ರಾಮಕಥೆಯನ್ನು ಹಾಡಲು ರಾಮಚರಿತಮಾನಸವು ಅನುವು ಮಾಡಿಕೊಟ್ಟಿದ್ದು, ಡಾ.ಜಗದೀಶ್‌ ಪಿಳ್ಳೈ ಅವರು ಸತತವಾಗಿ ಹಾಡುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಉತ್ತರ ಪ್ರದೇಶ ಸಚಿವ ದಯಾಶಂಕರ್‌ ಮಿಶ್ರಾ ಅವರು ಡಾ.ಜಗದೀಶ್‌ ಪಿಳ್ಳೈ ಅವರಿಗೆ ಗಿನ್ನಿಸ್‌ ವಿಶ್ವದಾಖಲೆಯ ಪ್ರಮಾಣಪತ್ರವನ್ನು ನೀಡಿದ್ದಾರೆ.

ಡಾ.ಜಗದೀಶ್‌ ಮಿಶ್ರಾ ಅವರು ಐದು ವರ್ಷದಲ್ಲಿ ಜಗತ್ತಿನಾದ್ಯಂತ ಇರುವ 100ಕ್ಕೂ ಅಧಿಕ ಆಡಿಯೊ ಚಾನೆಲ್‌ಗಳಲ್ಲಿ ರಾಮಚರಿತಮಾನಸವನ್ನು ಹಾಡಿದ್ದಾರೆ. ಈಗ ಅವರು ಸುದೀರ್ಘ ಅವಧಿಗೆ ಹಾಡುವ ಮೂಲಕ ದಾಖಲೆ ಬರೆದಿದ್ದಾರೆ. ಜಗದೀಶ್‌ ಪಿಳ್ಳೈ ಅವರಿಗಿಂತ 2021ರ ಡಿಸೆಂಬರ್‌ನಲ್ಲಿ 115 ತಾಸು, 45 ನಿಮಿಷ ಹಾಡಿದ್ದು ವಿಶ್ವದಾಖಲೆ ಆಗಿತ್ತು.

ಡಾ.ಜಗದೀಶ್‌ ಪಿಳ್ಳೈ ಅವರು ಹಾಡಿದ ರಾಮಚರಿತಮಾನಸದ ಹಾಡು ಸ್ಪೋಟಿಫೈ, ಅಮೆಜಾನ್‌ ಮ್ಯೂಸಿಕ್‌, ಆಪಲ್‌ ಮ್ಯೂಸಿಕ್‌ ಸೇರಿ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಬ್ರಾಡ್‌ಕಾಸ್ಟ್‌ ಆಗಿತ್ತು. ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್ಸ್‌ ಮಾರ್ಗಸೂಚಿಗಳ ಪ್ರಕಾರ ರಾಮಚರಿತಮಾನಸದ ವಿಡಿಯೊ ರೆಕಾರ್ಡಿಂಗ್‌ 2019ರ ಮೇ 20ರಂದು ಆರಂಭಿಸಲಾಗಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ರೆಕಾರ್ಡಿಂಗ್‌ ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: Ramcharitmanas Row | ಬಿಹಾರದಲ್ಲಿ ಆರ್​ಜೆಡಿ-ಜೆಡಿಯು ಮಧ್ಯೆ ಬಿರುಕು ಮೂಡಿಸಿದ ರಾಮಚರಿತಮಾನಸ ವಿವಾದ

ಕೊರೊನಾ ಬಿಕ್ಕಟ್ಟಿನ ನಂತರ ರೆಕಾರ್ಡಿಂಗ್‌ ಆರಂಭವಾಗಿ 2022ರ ನವೆಂಬರ್‌ನಲ್ಲಿ ಮುಗಿದಿತ್ತು. 138 ಗಂಟೆ, 41 ನಿಮಿಷ ಹಾಗೂ 2 ಸೆಕೆಂಡ್‌ ಹಾಡು ಹಾಡಲು, ರೆಕಾಂರ್ಡಿಂಗ್‌, ಎಡಿಟಿಂಗ್‌ ಹಾಗೂ ಮಿಕ್ಸಿಂಗ್‌ಗೆ 4 ವರ್ಷ, 63 ದಿನ ಹಾಗೂ 295 ದಿನ ತೆಗೆದುಕೊಳ್ಳಲಾಗಿದೆ.

Exit mobile version