ಮುಂಬೈ: ಶಿವಸೇನೆಯ ಹೆಸರು ಹಾಗೂ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಏಕನಾಥ್ ಶಿಂಧೆ (Eknath Shinde) ಅವರಿಗೆ ನೀಡಿದ ತೀರ್ಮಾನ ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಹಾಗೆಯೇ, ಪಕ್ಷ ಒಡೆದು, ಮುಖ್ಯಮಂತ್ರಿ ಗಾದಿಗೇರಿದ ಏಕನಾಥ್ ಶಿಂಧೆ ವಿರುದ್ಧ ಠಾಕ್ರೆ ವಾಗ್ದಾಳಿ ಮುಂದುವರಿಸಿದ್ದಾರೆ. “ರಾಮನ ಧನಸ್ಸು ರಾವಣನ ಕೈಯಲ್ಲಿದ್ದರೆ ಅದು ಭೂಷಣ ಅಲ್ಲ” ಎಂದು ಕುಟುಕಿದ್ದಾರೆ.
“ಏಕನಾಥ್ ಶಿಂಧೆ ಅವರು ಪಕ್ಷದ ಚಿಹ್ನೆ ಹಾಗೂ ಹೆಸರನ್ನು ಕಳ್ಳತನ ಮಾಡಿದ್ದಾರೆ. ಆದರೆ, ಅವರು ಏನು ಮಾಡಿದರು ಠಾಕ್ರೆ ಎಂಬ ಹೆಸರನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ. ಅವರು ಎಂದಿಗೂ ಬಾಳಾಸಾಹೇಬ್ ಠಾಕ್ರೆ ಪುತ್ರ ಎನಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಭಾಗ್ಯ ಅವರದ್ದಲ್ಲ. ಅಷ್ಟಕ್ಕೂ, ರಾಮನ ಧನಸ್ಸು ರಾವಣನ ಕೈಯಲ್ಲಿದ್ದರೆ, ಅದು ಭೂಷಣವಲ್ಲ” ಎಂದು ಹೇಳಿದರು.
ಸುಪ್ರೀಂಗೆ ಉದ್ಧವ್ ಅರ್ಜಿ, ಮಂಗಳವಾರ ವಿಚಾರಣೆ
“ಚುನಾವಣೆ ಆಯೋಗದ ತೀರ್ಮಾನ ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಫೆಬ್ರವರಿ ೨೧ರಂದು ವಿಚಾರಣೆ ನಡೆಯಲಿದೆ. ತೀರ್ಪು ನಮ್ಮ ಪರವಾಗಿಯೇ ಬರುವ ವಿಶ್ವಾಸವಿದೆ” ಎಂದರು. ಏಕನಾಥ್ ಶಿಂಧೆ ಬಣಕ್ಕೆ ಬೆಂಬಲವಿರುವ ಶಾಸಕರು ಹಾಗೂ ಸಂಸದರ ಆಧಾರದ ಮೇಲೆ ಚುನಾವಣೆ ಆಯೋಗವು ಶಿಂಧೆ ಬಣವನ್ನೇ ನಿಜವಾದ ಶಿವಸೇನೆ ಎಂದು ಹೇಳಿದೆ. ಹಾಗೆಯೇ, ಚಿಹ್ನೆಯನ್ನೂ ನೀಡಿದೆ.
ಇದನ್ನೂ ಓದಿ: Amit Shah: ಸಿಎಂ ಗಾದಿಗಾಗಿ ಪವಾರ್ ಕಾಲಿಗೆ ಬಿದ್ದ ಉದ್ಧವ್ ಠಾಕ್ರೆ, ಅಮಿತ್ ಶಾ ವಾಗ್ದಾಳಿ