ನವದೆಹಲಿ: ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಇತ್ತೀಚಿನ ಚಿತ್ರ ‘ಡಂಕಿ’ (Dunki Movie) ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರ ತಂಡವು ಹಂಚಿಕೊಂಡ ಹೇಳಿಕೆಯ ಪ್ರಕಾರ, ಭಾನುವಾರ ರಾಷ್ಟ್ರಪತಿ ಭವನದಲ್ಲಿ ‘ಡಂಕಿ’ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.
ರಾಜ್ ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ವಲಸೆ ಸಮಸ್ಯೆಯನ್ನು ಕೇಂದ್ರೀಕರಿಸುತ್ತದೆ. ಸಿನಿಮಾದ ಹೆಸರನ್ನು “ಕತ್ತೆ ಮೇಲಿನ ಪ್ರಯಾಣ” ಎಂಬ ಪದದಿಂದ ಆಯ್ಕೆಮಾಡಿಕೊಳ್ಳಲಾಗಿದೆ. ಇದು ಪ್ರಪಂಚದಾದ್ಯಂತದ ಜನರು ತಾವು ವಲಸೆ ಹೋಗಲು ಬಯಸುವ ಸ್ಥಳಗಳನ್ನು ತಲುಪಲು ತೆಗೆದುಕೊಳ್ಳುವ ದೀರ್ಘಕಾಲೀನ, ಅಪಾಯಕಾರಿ ಪಯಣದ ಸುತ್ತ ಸಾಗುತ್ತದೆ.
ವಿಕ್ಕಿ ಕೌಶಲ್, ತಾಪ್ಸಿ ಪನ್ನು, ಬೊಮನ್ ಇರಾನಿ, ಅನಿಲ್ ಗ್ರೋವರ್ ಮತ್ತು ವಿಕ್ರಮ್ ಕೊಚ್ಚರ್ ನಟಿಸಿರುವ ಈ ಚಿತ್ರವು ಡಿಸೆಂಬರ್ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಅಂದಿನಿಂದ ಇದು ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಆಗಿತ್ತು. ಈ ಚಿತ್ರವು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ದೇಶಿಯ ಬಾಕ್ಸ್ ಆಫೀಸ್‌ನಲ್ಲಿ ₹ 74.82 ಕೋಟಿ ಸಂಗ್ರಹಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : Dunki Box Office: ಮೊದಲ ದಿನವೇ ಅತ್ಯಂತ ಕಡಿಮೆ ಗಳಿಕೆ ಕಂಡ ಶಾರುಖ್ ಸಿನಿಮಾ ʻಡಂಕಿʼ!
ಈ ಚಿತ್ರವು ಪ್ರಸ್ತುತ ಪ್ರಭಾಸ್ ಅವರ ‘ಸಲಾರ್’ ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಸಂಘರ್ಷ ಎದುರಿಸುತ್ತಿದೆ. ‘ಸಲಾರ್’ ಎರಡು ದಿನಕ್ಕೆ 141 ಕೋಟಿ ಗಳಿಸಿದೆ. ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ಡಂಕಿ ₹ 103.4 ಕೋಟಿ ಗಳಿಸಿದೆ.
‘ಡಂಕಿ’ ಶಾರುಖ್ ಮತ್ತು ರಾಜ್ ಕುಮಾರ್ ಹಿರಾನಿ ಅವರ ಮೊದಲ ಚಿತ್ರವಾಗಿದೆ. ಬ್ಲಾಕ್ಬಸ್ಟರ್ ಪಠಾನ್ ಹಾಗೂ ಜವಾನ್ ಸಿನಿಮಾದ ಬಳಿಕ ಇದು ಶಾರುಖ್ ಪಾಲಿಗೆ ವರ್ಷದ ಮೂರನೇ ಚಿತ್ರವಾಗಿದೆ.
ಎರಡನೇ ದಿನ ಕಡಿಮೆ ಗಳಿಕೆ ಕಂಡ ‘ಡಂಕಿ’ ಸಿನಿಮಾ!
‘ಡಂಕಿ’ ಸಿನಿಮಾ (Dunki Box Office) ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಓಪನಿಂಗ್ ಕಂಡಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ಡಿಸೆಂಬರ್ 21ರಂದು ವಿಶ್ವಾದ್ಯಂತ ತೆರೆ ಕಂಡಿತು. ಶಾರುಖ್ ಅವರ ಈ ವರ್ಷದ ಮೂರನೇ ಸಿನಿಮಾ ಇದು. ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಜತೆ ಕ್ಲ್ಯಾಶ್ ಆಗಿದ್ದರೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಸಿನಿಮಾ ಎರಡನೇ ದಿನ 20 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇಲ್ಲಿಯವರೆಗೆ ಒಟ್ಟು 50 ಕೋಟಿ ರೂ. ಗಳಿಕೆ ಕಂಡಿದೆ.
ಮೊದಲ ದಿನ 30 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನದಲ್ಲಿ 20 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಒಟ್ಟು 50 ಕೋಟಿ ರೂ. ಗಳಿಕೆ ಕಂಡಿದೆ. ಮುಂಬೈನಲ್ಲಿ ಅತ್ಯಧಿಕ ಆಕ್ಯುಪೆನ್ಸಿ ಹೊಂದಿತ್ತು ಎಂದು ವರದಿಯಾಗಿದೆ. ಕ್ರಿಸ್‌ಮಸ್ ರಜಾ ಇರುವ ಕಾರಣ ಸಿನಿಮಾ ಇನ್ನಷ್ಟು ಒಳ್ಳೆಯ ಗಳಿಕೆ ಕಾಣಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
‘ಡಂಕಿ’ ಸಿನಿಮಾದಲ್ಲಿ ಶಾರುಖ್ ಅವರು ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಫೈಟ್ಸ್ ಇಲ್ಲ. ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
‘ಡಂಕಿ’ ಶಾರುಖ್ ಖಾನ್ ಅವರ ಹೃದಯಕ್ಕೆ ಹತ್ತಿರವಾದ ಸಿನಿಮಾವಾಗಿದ್ದು, ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸುವಂತೆ ಶಾರುಖ್ ಮನವಿ ಮಾಡಿದ್ದರು. 2023ರ ಶಾರುಖ್ ಅವರ ಮೊದಲ ಸಿನಿಮಾ ಪಠಾಣ್ ವಿಶ್ವಾದ್ಯಂತ ಮೊದಲ ದಿನ 106 ಕೋಟಿ ಗಳಿಸಿದರೆ, ‘ಜವಾನ್’ ಜಾಗತಿಕವಾಗಿ 129.6 ಕೋಟಿ ರೂ. ಗಳಿಸಿತ್ತು. ಆದರೆ, ‘ಡಂಕಿ’ ಒಂದೇ ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಸಾಧಾರಣ ಓಪನಿಂಗ್ ಕಂಡಿದೆ. ಆದರೆ, ವಾರಾಂತ್ಯದಲ್ಲಿ ಸಂಗ್ರಹಣೆಯಲ್ಲಿ ಏರಿಕೆ ಕಂಡುಬರಬಹುದು ಎಂದು ವರದಿ ಆಗಿವೆ.
ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್, ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.