Site icon Vistara News

Rasna Founder Dies | ರಸ್ನಾ ಜ್ಯೂಸ್ ಕಂಪನಿ ಸಂಸ್ಥಾಪಕ ಅರೀಜ್‌ ಪಿರೋಜ್‌ಶಾ ನಿಧನ

Rasna Founder Dies

ಗಾಂಧಿನಗರ: ಐದು ರೂಪಾಯಿ ಮೌಲ್ಯದ ಪ್ಯಾಕೆಟ್‌ನಿಂದ 32 ಗ್ಲಾಸ್‌ ಜ್ಯೂಸ್‌ ತಯಾರಿಸಿ ಮನೆಮಂದಿಯೆಲ್ಲ ಕುಡಿದ ‘ರಸ್ನಾ’ ಜ್ಯೂಸ್‌ ಯಾರಿಗೆ ಗೊತ್ತಿಲ್ಲ ಹೇಳಿ. ಹೀಗೆ, ಪ್ರತಿ ಮನೆ ಮನ ತಲುಪಿರುವ ರಸ್ನಾ ಜ್ಯೂಸ್‌ ಕಂಪನಿ ಸಂಸ್ಥಾಪಕ ಅರೀಜ್‌ ಪಿರೋಜ್‌ಶಾ ಖಂಬಟ್ಟಾ (85) (Rasna Founder Dies) ಅವರು ನಿಧನರಾಗಿದ್ದಾರೆ.

“ಭಾರತದ ಉದ್ಯಮ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ, ಅದರಲ್ಲೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನಮನ ಸೆಳೆದಿದ್ದ ಅರೀಜ್‌ ಪಿರೋಜ್‌ಶಾ ಖಂಬಟ್ಟಾ ನಿಧನರಾಗಿದ್ದಾರೆ ಎಂಬುದಾಗಿ ತಿಳಿಸಲು ವಿಷಾದಿಸುತ್ತೇವೆ” ಎಂದು ರಸ್ನಾ ಗ್ರೂಪ್‌ ಸೋಮವಾರ ಪ್ರಕಟಣೆ ತಿಳಿಸಿದೆ.

ಅಹಮದಾಬಾದ್‌ ಮೂಲದ ಅರೀಜ್‌ ಪಿರೋಜ್‌ಶಾ ಅವರು 1970ರ ದಶಕದಲ್ಲಿ ರಸ್ನಾ ಜ್ಯೂಸ್‌ ಕಂಪನಿ ಆರಂಭಿಸಿದರು. ದುಬಾರಿ ಪಾನೀಯಗಳಿಗೆ ಸೆಡ್ಡು ಹೊಡೆಯಲೆಂದೇ ಸ್ಥಾಪಿಸಿದ ಕಂಪನಿಯು ಕೆಲವೇ ವರ್ಷಗಳಲ್ಲಿ ದೇಶದ ಮನೆಮಾತಾಯಿತು. ಸದ್ಯ, ದೇಶದ 18 ಲಕ್ಷ ಚಿಲ್ಲರೆ ಮಳಿಗೆಗಳಲ್ಲಿ, ಅಂಗಡಿಗಳಲ್ಲಿ ರಸ್ನಾ ಪ್ಯಾಕೆಟ್‌ ಸಿಗುತ್ತದೆ. ಹಾಗೆಯೇ, ಜಗತ್ತಿನ 60 ರಾಷ್ಟ್ರಗಳಲ್ಲಿ ದೇಶೀಯ ಪಾನೀಯ ಲಭ್ಯವಿದೆ. ಇದೆಲ್ಲದರ ಹಿಂದೆ ಖಂಬಟ್ಟಾ ಅವರ ಶ್ರಮ ನಿರ್ಣಾಯಕವಾಗಿದೆ.

ಇದನ್ನೂ ಓದಿ | Sad demise | ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಅವರ ಪತಿ ಜಾನ್‌ ಷಾ ನಿಧನ

Exit mobile version