Site icon Vistara News

ಯಂತ್ರಗಳಿಂದಾಗದ ಕೆಲಸವನ್ನು ರ‍್ಯಾಟ್‌ ಹೋಲ್ ಮೈನರ್ಸ್ ಮಾಡಿದ್ರು! ಕಾರ್ಮಿಕರನ್ನು ರಕ್ಷಿಸಿದ ಹೀರೋಗಳು

Rat hole miners are heroes in Uttarkashi tunnel rescue

ಉತ್ತರಕಾಶಿ: ಕುಸಿದ ಸುರಂಗದಲ್ಲಿ (Uttarkashi Tunnel Collapse) ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಣೆಯ ನಿಜವಾದ ಹೀರೋಗಳಾಗಿ ರ‍್ಯಾಟ್‌ ಹೋಲ್ ಮೈನರ್ಸ್ (Rat hole miners) ಹೊರ ಹೊಮ್ಮಿದ್ದಾರೆ! ತಮ್ಮ ಕೈಯಿಂದಲೇ ಕಾರ್ಮಿಕರು ಇರುವ ಜಾಗದ ತನಕ ಡ್ರಿಲ್ ಮಾಡಿದ ಅವರು, ಸಿಲುಕಿದರವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು(rescue operation). ಉಸಿರಾಟವೂ ಸವಾಲಾಗುವ ಇಕ್ಕಟ್ಟಾದ ಸುರಂಗದಲ್ಲಿ ತೋಡಿದ ರ‍್ಯಾಟ್‌ ಹೋಲ್ ಮೈನರ್ಸ್‌ಗಳ ಆಯಾಸವನ್ನೆಲ್ಲ ಕಾರ್ಮಿಕರ ಮುಖದಲ್ಲಿನ ನಗು ಮರೆಸಿತ್ತು(Uttarkashi Tunnel Rescue).

ನಮ್ಮನ್ನು ನೋಡಿ ಕಾರ್ಮಿಕರು ತುಂಬಾ ಸಂತೋಷಪಟ್ಟರು. ಅವರು ನಮ್ಮನ್ನು ತಬ್ಬಿಕೊಂಡು ಬಾದಾಮಿಯನ್ನು ನೀಡಿದರು ದೇವೇಂದ್ರ ಮಾಧ್ಯಮಗಳಿಗೆ ತಿಳಿಸದ್ದಾರೆ. ನಾವು 15 ಮೀಟರ್‌ಗಳನ್ನು ಡ್ರಿಲ್ ಮಾಡಿದೆವು. ನಾವು ಅಲ್ಲಿಗೆ ತಲುಪಿದಾಗ ಮತ್ತು ಅವರನ್ನು ಕಂಡಾಗ ನಮಗೆ ತುಂಬಾ ಸಂತೋಷವಾಯಿತು ಎಂದು ಹೇಳಿದ್ದಾರೆ.

ಕಾರ್ಯಾಚರಣೆಯ ಅಂತಿಮ ಹಂತದಲ್ಲಿ ಅತ್ಯಾಧುನಿಕ ಮತ್ತು ಆಮದು ಮಾಡಿಕೊಂಡ ಡ್ರಿಲ್ಲಿಂಗ್ ಯಂತ್ರವು ಕೆಟ್ಟುಹೋದ ನಂತರ ರಕ್ಷಣಾ ಕಾರ್ಯಾಚರಣೆಯ ನೇತೃತ್ವದ ವಹಿಸಿದ್ದ ಸಂಸ್ಥೆಗಳು ರ‍್ಯಾಟ್‌ ಹೋಲ್ ಮೈನರ್ಸ್ ಮೊರೆ ಹೋದರು. ಅಂತಿಮವಾಗಿ ರ‍್ಯಾಟ್‌ ಹೋಲ್ ಮೈನರ್ಸ್ ತಮ್ಮ ಕೊರೆಯುತ್ತಾ ಮುಂದೆ ಹೋದಂತೆ, ಕಾರ್ಮಿಕ ರಕ್ಷಣೆಯ ಆಸೆಗಳು ಹೆಚ್ಚುತ್ತಾ ಹೋದವು. ಅಂತಿಮವಾಗಿ ಎಲ್ಲರನ್ನೂ ರಕ್ಷಣೆ ಮಾಡಲಾಯಿತು.

ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡಿದರು. ಸಿಕ್ಕಿಬಿದ್ದ ಕಾರ್ಮಿಕರನ್ನು ನಾವು ರಕ್ಷಿಸಬೇಕು ಎಂದು ನಮಗೆ ಮನವರಿಕೆಯಾಯಿತು. ಇದು ನಮಗೆ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶವಾಗಿದೆ. ಕಾರ್ಮಿಕರನ್ನು ಅವರನ್ನು ಹೊರತರಲು 24 ಗಂಟೆಗಳ ಕಾಲ ನಿರಂತರ ಕೆಲಸ ಮಾಡಿದರು ಎಂದು ಅವರ ತಂಡದ ನಾಯಕ ಹೇಳಿದರು.

ಬದುಕುಳಿದ ಬಂದ ಕಾರ್ಮಿಕರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ ಉತ್ತರಾಖಂಡ ಸಿಎಂ

ಕಾರ್ಮಿಕರನ್ನು ರಕ್ಷಣೆ ಮಾಡಿ, ಅವರನ್ನು ಅವರ ಮನೆಗೆ ತಲುಪಿಸುವ ಟಾಸ್ಕ್ ಅನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ನನಗೆ ನೀಡಿದ್ದರು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ (Uttarakhand CM Pushkar Singh Dhami) ಅವರು ಹೇಳಿದ್ದಾರೆ. ಕುಸಿದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಯಶಸ್ವಿ ರಕ್ಷಣಾ ಕಾರ್ಯಾಚರಣೆಯ (Uttarkashi Tunnel Rescue) ಬಳಿಕ ಸುದ್ದಿಗೋಷ್ಠಿ ಮಾತನಾಡಿದ ಸಿಎಂ ಧಾಮಿ ಅವರು, ರಕ್ಷಿಸಲಾಗಿರುವ ಎಲ್ಲ ಕಾರ್ಮಿಕರನ್ನು 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ನಿಗಾವಹಿಸಲಾಗುವುದು ಎಂದು ತಿಳಿಸಿದ್ದಾರೆ(Rescue Operation).

ರಕ್ಷಣಾ ಕಾರ್ಯಾಚರಣೆಯ ಕುರಿತಂತೆ ಕೇಂದ್ರ ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ, ಸಚಿವರಾದ ವಿ ಕೆ ಸಿಂಗ್ ಸೇರಿದಂತೆ ಪ್ರಧಾನಿ ಕಾರ್ಯಾಲಯವು ನಿರಂತರವಾಗಿ ನಿಗಾ ವಹಿಸಿತ್ತು. ಕಾರ್ಯಾಚರಣೆಗಾಗಿ ಇಂದೋರ್‌, ಹೈದ್ರಾಬಾದ್‌ಗಳಿಂದ ಯಂತ್ರಗಳನ್ನು ತರಸಲಾಗಿತ್ತು. ದೆಹಲಿ ಸೇರಿದಂತೆ ಬೇರೆಕಡೆಯಿಂದ ಬಂದ ಎಲ್ಲಾ ಕಾರ್ಮಿಕರಿಗೆ ಧನ್ಯವಾದ ಎಂದು ಹೇಳಿ ಪುಷ್ಕರ ಸಿಂಗ್ ಧಾಮಿ ಹೇಳಿದರು.

ಕಾರ್ಯಾಚರಣೆಯ ಆರಂಭದಲ್ಲಿ ಆರಂಭಿಕ ಹಂತದಲ್ಲಿ ನಮಗೆ ತುಂಬಾ ಭಯವಾಗಿತ್ತು. ಯಾವಾಗ ಕಾರ್ಮಿಕರ ಜೊತೆ ಮಾತುಕತೆ ಮಾಡಿದ್ವೋ ಆಗ ನಮಗೆ ಭರವಸೆ ಬಂತು, ಮೊದಲು ಚಿಕ್ಕವರನ್ನ ಕರೆತರಲು ನಿರ್ಧಾರ ಮಾಡಿದ್ವಿ ನಂತರ ದೊಡ್ಡವರು ಟೀಂ ಲೀಡ್ ಮಾಡೊ ಐದು ಜನ ಬರಲು ನಿರ್ಧಾರ ಮಾಡಿದ್ರು. ಮೊದಲು ನನಗೆ ರಕ್ಷಣಾ ಕಾರ್ಯಾಚರಣೆ ನಿಂತಾಗ ಕರೆ ಬಂದಾಗ ಭಯವಾಗಿತ್ತು. ಸದ್ಯ ಈ ಎಲ್ಲರನ್ನ 24 ಗಂಟೆ ನಿಗಾದಲ್ಲಿ ಇಡಲಾಗುವುದು ಎಂದು ಸಿಎಂ ಧಾಮಿ ತಿಳಿಸಿದರು.

ರಾಜ್ಯ ಸರ್ಕಾರದಿಂದ ಎಲ್ಲಾ ಕಾರ್ಮಿಕರಿಗೆ ತಲಾ ಒಂದು ಲಕ್ಷ ಘೋಷಣೆ. ನಾಳೆ ಚೆಕ್ ಮೂಲಕ ಪರಿಹಾರ ನೀಡಲಾಗುವುದು. ಎಲ್ಲರಿಗೂ 15 ದಿನ ಅಥವಾ ಒಂದು ತಿಂಗಳು ಮನೆಗೆ ಹೋಗಲು ಅವಕಾಶ ನೀಡಲಾಗುವುದು. ರಕ್ಷಣಾ ಕಾರ್ಯಾಚರಣೆಯ ವೆಚ್ಚ ಎಷ್ಟೆ ಆದ್ರು ನಾವು ನೀಡಲು ತೀರ್ಮಾನಿಸಿದ್ವಿ. ಪ್ರಧಾನಿ ಮೋದಿ ಈ ಬಗ್ಗೆ ಸೂಚನೆ ನೀಡಿದ್ದರು. ನಮಗೆ ಕಾರ್ಮಿಕರ ಜೀವ ಮುಖ್ಯವಾಗಿತ್ತು ಎಂದು ಧಾಮಿ ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ: ಹೊರ ಬಂದರು ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಕಾರ್ಮಿಕರು! ಫಲಿಸಿತು ಭಾರತೀಯರ ಪ್ರಾರ್ಥನೆ

Exit mobile version