ನವದೆಹಲಿ: ಭಾರತದ ಪ್ರಖ್ಯಾತ ಉದ್ಯಮಿ ಹಾಗೂ ಟಾಟಾ ಸನ್ಸ್‌ನ (Tata Sons) ಮಾಜಿ ಚೇರ್ಮನ್ ರತನ್ ಟಾಟಾ (Ratan Tata) ಅವರು ತಮ್ಮ ಸರಳತೆ ಹಾಗೂ ಧರ್ಮದರ್ಶಿ ಕೆಲಸಗಳಿಂದಾಗಿ ಮನ್ನಣೆ ಗಳಿಸಿದ್ದಾರೆ. ರತನ್ ಟಾಟಾ ಅವರು ಅವಿವಾಹಿತವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ, ಅವರು ಆಲ್ಮೋಸ್ಟ್ ಮದುವೆಯಾಗಿರುವ ಕತೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಹ್ಯೂಮನ್ಸ್ ಆಫ್ ಬಾಂಬೆಗೆ (Humans of Bombay) ನೀಡಿದ ಸಂದರ್ಶನದಲ್ಲಿ ತಮ್ಮ ಆಲ್ಮೋಸ್ಟ್ ಮದುವೆ (Marriage) ಹಾಗೂ ಪ್ರೀತಿಯ (Love) ಕತೆಯನ್ನು ರತನ್ ಟಾಟಾ ಬಿಚ್ಚಿಟ್ಟಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿ ನಾನು ಆಲ್ಮೋಸ್ಟ್ ಮದುವೆಯಾಗಿದ್ದೆ! ಆದರೆ ನನ್ನ ಅಜ್ಜಿಯೊಂದಿಗೆ ನಾನು ತಕ್ಷಣಕ್ಕೆ ಭಾರತಕ್ಕೆ ಹಿಂತಿರುಗಿದ್ದರಿಂದ ಆ ಮದುವೆಯು ಮುಂದುವರಿಯುವುದನ್ನು ಸಾಧ್ಯವಾಗಲಿಲ್ಲ. ನಾನು ಮದುವೆಯಾಗಲು ಇಚ್ಛಿಸಿದ ವ್ಯಕ್ತಿ ಸ್ವಲ್ಪ ಸಮಯದ ನಂತರ ನನ್ನೊಂದಿಗೆ ಭಾರತಕ್ಕೆ ಬರಬೇಕಾಗಿತ್ತು ಎಂದು ಅವರು ಸಂದರ್ಶನದಲ್ಲಿ ಹೇಳಿದರು.
1962ರಲ್ಲಿ ಭಾರತ-ಚೀನಾ ಯುದ್ಧವು ಪ್ರಾರಂಭವಾದ ನಂತರ ಅವರ ಸಂಗಾತಿಯು ಭಾರತಕ್ಕೆ ಭೇಟಿ ನೀಡಲು ಆಕೆಯ ಪೋಷಕರು ಅನುಮತಿಸದ ಕಾರಣ ಸಂಬಂಧವು ಮುರಿದುಬಿತ್ತು ಎಂದು ರತನ್ ಟಾಟ್ ಹೇಳಿದ್ದಾರೆ. ಹಾಗಾಗಿ, ನಮ್ಮೊಂದಿಗೆ ಆಲ್ಮೋಸ್ಟ್ ಮದುವೆ ಎಂಬುದಷ್ಟು ಉಳಿಯಿತು ಎಂದು ಹೇಳಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Order of Australia: ರತನ್ ಟಾಟಾಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಆಸ್ಟ್ರೇಲಿಯಾ’ ಪ್ರದಾನ
ಆ ಸಂಬಂಧ ಬಳಿಕ ನಾನು, ನನ್ನ ಹೆಂಡತಿ ಎಂದು ಕರೆಯುವಂಥ ಯಾವುದೇ ವ್ಯಕ್ತಿ ನನಗೆ ದೊರೆಯಲಿಲ್ಲ. ಆ ಬಳಿಕ ನನ್ನ ಜೀವನವೇ ಒಂದು ಸಂಘರ್ಷಕ್ಕೆ ಸಿಲುಕಿಕೊಂಡಿತು. ನಾನು ನಿರಂತರವಾಗಿ ಕೆಲಸ ಮಾಡುತ್ತಿದ್ದ, ಪ್ರಯಾಣ ಮಾಡುತ್ತಿದ್ದೆ. ಹಾಗಾಗಿ, ನನಗಾಗಿ ಅಂತ ಸಮಯ ತುಂಬಾ ಕಡಿಮೆ ಉಳಿಯುತ್ತಿತ್ತು. ಇಂದು, ನಾನು ನನ್ನ ಕಳೆದ ಹೋದ ದಿನಗಳ ಬಗ್ಗೆ ಯೋಚಿಸಿದರೆ, ನನಗೇನೂ ಆ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಒಂದು ಕ್ಷಣಕ್ಕೆ ಆ ರೀತಿ ನನಗೆ ಅನ್ನಿಸುವುದಿಲ್ಲ ಎಂದು ರತನ್ ಟಾಟಾ ಹೇಳಿದ್ದಾರೆ.