Site icon Vistara News

RAW Chief: ಭಾರತೀಯ ಗುಪ್ತಚರ ಸಂಸ್ಥೆ ‘ರಾ’ಗೆ ಐಪಿಎಸ್ ಅಧಿಕಾರಿ ರವಿ ಸಿನ್ಹಾ ಹೊಸ ಮುಖ್ಯಸ್ಥ

RAW Logo and Ravi Sinha

ನವದೆಹಲಿ: ಭಾರತೀಯ ಗುಪ್ತಚರ ‘ರಾ’ (RAW – Research and Analysis Wing) ಸಂಸ್ಥೆಗೆ ಛತ್ತೀಸ್‌ಗಢ್ ಕೆಡರ್‌ನ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ (IPS officer Ravi Sinha) ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಂತ್ ಗೋಯೆಲ್ (Samant Goel) ಅವರ ಅಧಿಕಾರವಧಿ ಜೂನ್ 30ಕ್ಕೆ ಮುಕ್ತಾಯವಾಗುವುದರಿಂದ ಹೊಸ ಮುಖ್ಯಸ್ಥರನ್ನು ಭಾರತ ಸರ್ಕಾರವು ಸೋಮವಾರ ನೇಮಕ ಮಾಡಿದೆ. ಸಮಂತ್ ಗೋಯೆಲ್ ಅವರು ಎರಡು ಅವಧಿಗೆ ರಾ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ(RAW Chief).

ರವಿ ಸಿನ್ಹಾ ಅವರು 1988ನೇ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ರವಿ ಸಿನ್ಹಾ ಅವರು ಕ್ಯಾಬಿನೆಟ್ ಸೆಕ್ರೆಟರಿಯಟ್‌ನ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ವರ್ಷಗಳ ಅವಧಿಗೆ ರಾ ಕಾರ್ಯದರ್ಶಿಯಾಗಿ ಸಿನ್ಹಾ ಅವರನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Kiren Rijiju: ಗುಪ್ತಚರ ಇಲಾಖೆಗಳ ಸೂಕ್ಷ್ಮ ಮಾಹಿತಿ ಸುಪ್ರೀಂ ಕೋರ್ಟ್‌ನಿಂದ ಬಹಿರಂಗ, ಸಚಿವ ರಿಜಿಜು ಅಸಮಾಧಾನ

ಹಾಲಿ ಇರುವ ರಾ ಮುಖ್ಯಸ್ಥರ ಸೇವಾವಧಿಯು ಜೂನ್ 30ಕ್ಕೆ ಮುಕ್ತಾಯವಾಗಲಿರುವುದರಿಂದ ಹೊಸದಾಗಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗುತ್ತಿದೆ. ರಾ ಕಾರ್ಯದರ್ಶಿಯಾಗಿರುವ ಸಮಂತ್ ಗೋಯೆಲ್ ಅವರ ಜಾಗಕ್ಕೆ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಉಪಾಧ್ಯಕ್ಷ ರವಿ ಸಿನ್ಹಾ ಅವರನ್ನು ನೇಮಕ ಮಾಡಲು ಕ್ಯಾಬಿನೆಟ್ ನೇಮಕಾತಿ ಸಮಿತಿ ಅನಮೋದನೆ ನೀಡಿದೆ. ಹುದ್ದೆಯನ್ನು ವಹಿಸಿಕೊಂಡ ದಿನಾಂಕದಿಂದ ಎರಡು ವರ್ಷಗಳು ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರಿಗೆ ನೇಮಕ ಸಿಂಧುವಾಗಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version