Site icon Vistara News

Gujarat Election Results | ರವಿಂದ್ರ ಜಡೇಜಾ ಪತ್ನಿ ರಿವಾಬಾಗೆ ಭರ್ಜರಿ ಜಯ

ಜಾಮ್‌ನಗರ : ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ, ಜಾಮ್‌ ನಗರ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿರುವ ಅವರು ಒಟ್ಟು ೪೯೬೧೪ ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಆಪ್‌ನ ಕುರ್ಮುರ್‌ ವಿರುದ್ಧ (೨೨೩೬೪ ಮತಗಳು) ವಿರುದ್ಧ ಜಯ ಸಾಧಿಸಿದ್ದಾರೆ.

ಇದೇ ಮೊದಲ ಬಾರಿ ಚುನಾವಣಾ ಕಣಕ್ಕೆ ಪ್ರವೇಶಿಸಿದ್ದ ರಿವಾಬಾ ಜಡೇಜ ಅವರು ಶೇಕಡಾ ೫೪.೯೪ರಷ್ಟು ಮತಗಳನ್ನು ಪಡೆಯುವ ಮೂಲಕ ದಾಖಲೆ ಮಾಡಿದ್ದಾರೆ. ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ಅವರು ಪತ್ನಿಯ ಪರವಾಗಿ ರೋಡ್‌ ಶೋಗಳನ್ನು ನಡೆಸಿ ಪ್ರಚಾರ ಮಾಡಿದ್ದರು.

ಗೆಲುವಿನ ಕುರಿತು ಪ್ರತಿಕ್ರಿಯೆ ಕೊಟ್ಟಿರುವ ರಿವಾಬಾ “ನನ್ನನ್ನು ಸಂತೋಷದಿಂದ ಸ್ವೀಕರಿಸಿದ ಎಲ್ಲರಿಗೂ ಧನ್ಯವಾದಗಳು. ಇದು ನನ್ನೊಬ್ಬಳ ಗೆಲುವು ಅಲ್ಲ. ಬಿಜೆಪಿ ನಾಯಕರ ಗೆಲುವು. ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವು,” ಎಂದು ಹೇಳಿದ್ದಾರೆ.

ಇದನ್ನೂ ಓದಿ | Gujarat Election Result | ಇಂದು ಗುಜರಾತ್‌ ಚುನಾವಣೆ ಫಲಿತಾಂಶ, ಯಾರಿಗೆ ಗೆಲುವಿನ ಸಂತೋಷ?

Exit mobile version