Site icon Vistara News

UPI Payment : ವಿದೇಶಿ ಪ್ರಯಾಣಿಕರಿಗೂ ಯುಪಿಐ ಸೌಲಭ್ಯ, ಆರ್​ಬಿಐನಿಂದ ಹೊಸ ಯೋಜನೆ

UPI

ನವ ದೆಹಲಿ: ಭಾರತಕ್ಕೆ ಪ್ರವಾಸ ಬರುವ ವಿದೇಶಿಗರು ಇನ್ನು ಮುಂದೆ ಯುಪಿಐ ಪಾವತಿ (UPI Payment) ಮಾಡಲು ಸಾಧ್ಯವಾಗುವಂಥ ಹೊಸ ಸೌಲಭ್ಯವನ್ನು ಭಾರತೀಯ ರಿಸರ್ವ್​ ಬ್ಯಾಂಕ್​ ಫೆಬ್ರವರಿ 21ರಂದು ಜಾರಿಗೆ ತಂದಿದೆ. ಅಲ್ಲಿಂದ ಬರುವ ಪ್ರಯಾಣಿಕರು ಮೊಬೈಲ್​ ವ್ಯಾಲೆಟ್​ ಮೂಲಕ ನೇರವಾಗಿ ಇಲ್ಲಿನ ಔಟ್​ಲೆಟ್​ಗಳಲ್ಲಿ ಪಾವತಿ ಮಾಡಲು ಸಾಧ್ಯವಿದೆ. ಈ ಸೌಲಭ್ಯ ಸದ್ಯಕ್ಕೆ ದೆಹಲಿ, ಮುಂಬಯಿ ಹಾಗೂ ಬೆಂಗಳೂರಿನ ಏರ್​ಪೋರ್ಟ್​​​ಗಳಲ್ಲಿ ಲಭ್ಯವಿದೆ ಎಂದು ಆರ್​ಬಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸೌಲಭ್ಯ ಜಿ20 ದೇಶಗಳ ಪ್ರಜೆಗಳಿಗೆ ಸದ್ಯಕ್ಕೆ ಲಭ್ಯವಿದೆ. ಅರ್ಜೆಂಟೀನಾ, ಆಸ್ಟ್ರೇಲಿಯಾ. ಬ್ರೆಜಿಲ್​, ಕೆನಡಾ, ಚೀನಾ. ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ. ಇಟಲಿ, ಜಪಾನ್​, ಕೊರಿಯಾ. ಮೆಕ್ಸಿಕೊ, ರಷ್ಯಾ. ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ. ಟರ್ಕಿ, ಯುಕೆ, ಯುಎಸ್​ ಮತ್ತು ಯುರೋಪಿಯನ್​ ಒಕ್ಕೂಟದ ರಾಷ್ಟ್ರಗಳ ನಾಗರಿಕರು ಆರ್​ಬಿಐನ ಹೊಸ ಸೌಲಭ್ಯ ಪಡೆಯಲು ಸಾಧ್ಯವಿದೆ.

ಈ ದೇಶಗಳಿಂದ ಬರುವ ಪ್ರಯಾಣಿಕರಿಗೆ ಪ್ರೀಪೇಯ್ಡ್​ ಪೇಮೆಂಟ್​ ಇನ್​ಸ್ಟ್ರುಮೆಂಟ್ (ಪಿಪಿಐ) ವಿತರಣೆ ಮಾಡಲಾಗುತ್ತದೆ. ಐಸಿಸಿಐ ಬ್ಯಾಂಕ್​, ಐಡಿಬಿಐ ಬ್ಯಾಂಕ್​ ಹಾಗೂ ಇನ್ನೂ ಎರಡು ಸಂಸ್ಥೆಗಳು ಪಿಪಿಐ ವಿತರಣೆ ಮಾಡಲಿವೆ. ಅದರ ಮೂಲಕ ಜಿ20 ಸಭೆ ನಡೆಯುವ ಪ್ರದೇಶದಲ್ಲೂ ಯುಪಿಐ ಪೇಮೆಂಟ್​ ಆಯ್ಕೆಯನ್ನು ಬಳಸಬಹುದಾಗಿದೆ ಎಂದು ಆರ್​ಬಿಐ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Exit mobile version