ಕೋಲ್ಕೊತಾ, ಪಶ್ಚಿಮ ಬಂಗಾಳ: ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಪಕ್ಷದ ಪ್ರಚಂಡ ಗೆಲುವು ರಾಷ್ಟ್ರ ಮಟ್ಟದಲ್ಲೂ ಪರಿಣಾಮ ಬೀರುತ್ತಿರುವಂತೆ ಕಾಣುತ್ತಿದೆ. ಇಷ್ಟು ದಿನ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎನ್ನುತ್ತಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಈಗ ತಮ್ಮ ವರಸೆಯನ್ನು ಬದಲಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಸಿದ್ಧ. ಆದರೆ, ಆ ಪಕ್ಷವು ಒಂದಿಷ್ಟು ಷರತ್ತುಗಳನ್ನು ಪಾಲಿಸಬೇಕು ಎಂದಿದ್ದಾರೆ. ಕಾಂಗ್ರೆಸ್ ಪಕ್ಷವು ಕೊಡು-ತೆಗೆದುಕೊಳ್ಳುವಿಕೆ ನೀತಿಯನ್ನು ಅನುಸರಿಸಿದರೆ ರಾಷ್ಟ್ರಮಟ್ಟದಲ್ಲಿ ಆ ಪಕ್ಷಕ್ಕೆ ಬೆಂಬಲಿಸಲು ಸಿದ್ಧ ಎಂದು ಹೇಳಿದ್ದಾರೆ.
ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಬಲಿಶಾಯಾಗಿದೆಯೋ ಅಲ್ಲಿ ಪ್ರಾದೇಶಿಕ ಪಕ್ಷಗಳು ಬೆಂಬಲಿಸಲಿ ಮತ್ತು ಎಲ್ಲಿ ಪ್ರಾದೇಶಿಕ ಪಕ್ಷಗಳು ಬಲಶಾಲಿಯಾಗಿವೆಯೋ ಅಲ್ಲಿ ಕಾಂಗ್ರೆಸ್ ಬೆಂಬಲಿಸುವ ನೀತಿಯನ್ನು ಅನುಸರಿಸಬೇಕು ಎಂಬುದು ಮಮತಾ ಬ್ಯಾನರ್ಜಿ ಅವರು ನೀತಿಯಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 200 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿಸಲು ಸಿದ್ದ ಎನ್ನುವ ರೀತಿಯಲ್ಲಿ ಹೇಳಿದ್ದಾರೆ.
ಅವರು ಹೋರಾಡಲಿ, ನಾವು ಅವರಿಗೆ ಬೆಂಬಲ ನೀಡುತ್ತಿವೆ ಎಂದಿರುವ ಮಮತಾ ಬ್ಯಾನರ್ಜಿ ಅವರು, ಎಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಭಾವ ಹೊಂದಿವೆಯೋ ಅಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದಿದ್ದಾರೆ. ನಾನು ನಿಮಗೆ ಕರ್ನಾಟಕದಲ್ಲಿ ಬೆಂಬಲ ನೀಡುತ್ತಿದ್ದೇನೆ. ಆದರೆ, ನೀವು ಬಂಗಾಳದಲ್ಲಿ ನನ್ನ ವಿರೋಧವೇ ಹೋರಾಡುತ್ತೀರಿ. ಈ ರೀತಿಯ ನೀತಿ ಸರಿಯಲ್ಲ. ಒಂದು ವೇಳೆ ನೀವು ಏನಾದರೂ ಒಳ್ಳೆಯದನ್ನು ಪಡೆದುಕೊಳ್ಳಬೇಕಿದ್ದರೆ ಒಂದಿಷ್ಟು ಬೇರೆಯದ್ದನ್ನು ತ್ಯಾಗ ಮಾಡಬೇಕಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದರು.
ನಾವು ಬಂಗಾಳದಲ್ಲಿ ಹೋರಾಡ ಮಾಡಬೇಕು. ದಿಲ್ಲಿಯಲ್ಲಿ ಆಪ್, ಬಿಹಾರದಲ್ಲಿ ನೀತಿಶ್, ತೇಜಸ್ವಿ ಮತ್ತು ಕಾಂಗ್ರೆಸ್ ಶಕ್ತಿಯುತವಾಗಿವೆ. ಹಾಗಾಗಿ, ಅವರು(ಕಾಂಗ್ರೆಸ್) ತಮ್ಮ ನೀತಿಯನ್ನು ನಿರ್ಧರಿಸಬೇಕು. ಅದನ್ನು ನಾನು ನಿರ್ಧರಿಸಲಾಗುವುದಿಲ್ಲ. ಆಯ್ಕೆ ಅವರಿಗೆ ಬಿಟ್ಟದ್ದು. ಆದರೆ, ಎಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿವೆಯೋ ಅಲ್ಲಿ ಕಾಂಗ್ರೆಸ್ ಬೆಂಬಲ ನೀಡಬೇಕು. ಅಂದರೆ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಜಾರ್ಖಂಡ್, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಪರವಾಗಿ ಕಾಂಗ್ರೆಸ್ ನಿಲ್ಲಬೇಕು. ಆದರೆ, ಭವಿಷ್ಯದಲ್ಲಿ ಏನೆಲ್ಲ ಬೆಳವಣಿಗೆಗಳು ಸಂಭವಿಸಲಿವೆ ಎಂದು ಈಗಲೇ ಹೇಳಲು ನನ್ನಿಂದ ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: The Kashmir Files: ಮಮತಾ ಬ್ಯಾನರ್ಜಿಗೆ ಲೀಗಲ್ ನೋಟಿಸ್ ಕಳಿಸಿದ ದಿ ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ಹಾಗಂತ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಸ್ಪರ್ಧಿಸಬಾರದು ಎಂದಲ್ಲ. ಆದಲೆ, ಅಲ್ಲಿ ಅಖಿಲೇಶ್ ಯಾದವ್ ಅವರ ಪಕ್ಷಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಈ ರೀತಿಯಾಗಿ ಎಲ್ಲ ಸಂಗತಿಗಳ ಬಗ್ಗೆ ಚರ್ಚಿಸಬೇಕಾಗುತ್ತದೆ. ಇದೇನು ಅಂತಿಮವಲ್ಲ, ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಬೇಕು. ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ. ಜನರು ಹತಾಶರಾಗಿದ್ದಾರೆ. ಇದಕ್ಕೆ ಕರ್ನಾಟಕ ಚುನಾವಣೆಯ ಫಳಿತಾಂಶವೇ ಉದಾಹರಣೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದರು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.