Site icon Vistara News

Agnipath | ಅಗ್ನಿಪಥ್‌ ಮೂಲಕ ಮೊದಲ ಬಾರಿಗೆ ನೌಕಾಪಡೆಗೆ ಮಹಿಳಾ ನಾವಿಕರ ನೇಮಕ

indian navey

ನವ ದೆಹಲಿ: ಮೊಟ್ಟ ಮೊದಲ ಬಾರಿಗೆ ನೌಕಾಪಡೆಗೆ ಅಗ್ನಿಪಥ್‌ ಯೋಜನೆಯ ಮೂಲಕ ಮಹಿಳಾ ನಾವಿಕರ ನೇಮಕಾತಿ ನಡೆಯಲಿದೆ.

ಇದರೊಂದಿಗೆ ಯುದ್ಧ ನೌಕೆಯಲ್ಲಿ ಭವಿಷ್ಯದ ದಿನಗಳಲ್ಲಿ ಮಹಿಳಾ ನಾವಿಕರೂ ಸಕ್ರಿಯ ಸೇವೆ ಸಲ್ಲಿಸಲಿದ್ದಾರೆ.

ಸುಮಾರು 3,000 ನಾವಿಕರನ್ನು ಅಗ್ನಿಪಥ್‌ ಯೋಜನೆಯ ಮೂಲಕ ಈ ವರ್ಷ ನೌಕಾಪಡೆಗೆ ಸೇರಿಸಿಕೊಳ್ಳಲಾಗುತ್ತಿದೆ. ಇದರಲ್ಲಿ 20% ಮಂದಿ ಮಹಿಳೆಯರಿಗೆ ಉದ್ಯೋಗಾವಕಾಶ ನೀಡಲಾಗುವುದು.

ಭೂಸೇನೆ, ವಾಯುಸೇನೆ ಮತ್ತು ನೌಕಾ ಸೇನೆಯಲ್ಲಿ ಮಹಿಳಾ ಅಧಿಕಾರಿಗಳು ಇದ್ದಾರೆ. ಮೊದಲ ಬಾರಿಗೆ ಅಧಿಕಾರಿಗಳಿಗಿಂತ ಕೆಳ ಹಂತದ ಹುದ್ದೆಗೆ ಮಹಿಳೆಯರ ನೇಮಕಾತಿ ನಡೆಯಲಿದೆ.

Exit mobile version