Site icon Vistara News

Reliance Industries: ಟೈಮ್ ಮ್ಯಾಗಜೀನ್‌ನ ಜಗತ್ತಿನ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌

3 Indian companies have featured in Time magazines list of 100 most influential companies in the world

ನವದೆಹಲಿ: ಅಮೆರಿಕದ ಜನಪ್ರಿಯ ನಿಯತಕಾಲಿಕ ಟೈಮ್‌ (Time magazine) ಬಿಡುಗಡೆ ಮಾಡಿರುವ ಜಗತ್ತಿನ ಪ್ರಮುಖ 100 ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries) ಸೇರಿದಂತೆ ಭಾರತದ ಮೂರು ಕಂಪನಿಗಳು ಸ್ಥಾನ ಪಡೆದುಕೊಂಡಿವೆ.

ರಿಲಯನ್ಸ್‌ ಇಂಡಸ್ಟ್ರೀಸ್‌, ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮತ್ತು ಟಾಟಾ ಸಮೂಹವು ʼಟೈಮ್‌ʼ ಬಿಡುಗಡೆ ಮಾಡಿರುವ 100 ಕಂಪನಿಗಳಲ್ಲಿ ಸ್ಥಾನ ಪಡೆದುಕೊಂಡಿವೆ.

ಇದನ್ನೂ ಓದಿ: Modi Meditation: ಕನ್ಯಾಕುಮಾರಿಯಲ್ಲಿ 45 ಗಂಟೆಗಳ ಧ್ಯಾನ ಆರಂಭಿಸಿದ ಮೋದಿ; ಹಗಲು-ರಾತ್ರಿ ಪ್ರಧಾನಿ ಮೆಡಿಟೇಷನ್

ಈ ಪಟ್ಟಿಯನ್ನು 5 ವಿಭಾಗಗಳಾಗಿ ವರ್ಗೀಕರಿಸಲಾಗಿದ್ದು, ನಾಯಕ, ಆವಿಷ್ಕಾರ, ನಾವೀನ್ಯ, ಟೈಟಾನ್‌ (ಶಕ್ತಿಶಾಲಿ) ಮತ್ತು ಪ್ರವರ್ತಕ ಎಂದು ವರ್ಗೀಕರಿಸಲಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಟಾಟಾ ಸಮೂಹವು ಟೈಟಾನ್‌ (ಶಕ್ತಿಶಾಲಿ) ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿವೆ. ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಪ್ರವರ್ತಕರ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದೆ.

ಟೈಮ್‌ ನಿಯತಕಾಲಿಕವು ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ʼಭಾರತದ ಶಕ್ತಿʼ ಎನ್ನುವ ಉಪನಾಮವನ್ನು ನೀಡಿದೆ. ಜವಳಿ ಮತ್ತು ಪಾಲಿಸ್ಟರ್‌ ಉದ್ದಿಮೆಯಾಗಿ ಆರಂಭವಾದ ರಿಲಯನ್ಸ್‌ ಕಂಪನಿಯು ಇಂದು ಅತಿದೊಡ್ಡ ಮತ್ತು ಶಕ್ತಿಶಾಲಿ ಉದ್ಯಮ ಸಮೂಹವಾಗಿ ಹೊರಹೊಮ್ಮಿದೆ. ಮಾತ್ರವಲ್ಲ ದೇಶದ ಅತ್ಯಂತ ಮೌಲ್ಯಯುತ ಕಂಪನಿ ಕೂಡಾ ಆಗಿದೆ ಎಂದು ಟೈಮ್‌ ನಿಯತಕಾಲಿಕವು ರಿಲಯನ್ಸ್‌ ಇಂಡಸ್ಟ್ರೀಸ್‌ ಬಗ್ಗೆ ಬರೆದಿದೆ. ಮುಕೇಶ್‌ ಅಂಬಾನಿ ಅವರ ನಾಯಕತ್ವದಲ್ಲಿ ಕಂಪನಿಯು ಇಂಧನ, ರಿಟೇಲ್‌ ಮತ್ತು ದೂರಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿಕೊಂಡಿದೆ.

ಇದನ್ನೂ ಓದಿ: Fortis Hospital: ರಾಜ್ಯದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ

ಭಾರತದ ಅತಿದೊಡ್ಡ ಡಿಜಿಟಲ್‌ ಸೇವಾ ಪೂರೈಕೆದಾರ ಮತ್ತು ದೂರಸಂಪರ್ಕ ಕಂಪನಿ ಜಿಯೊ ಪ್ಲಾಟ್‌ಫಾರಂ 2021ರಲ್ಲಿ ಈ ಪಟ್ಟಿಗೆ ಸೇರಿಕೊಂಡಿತು. ರಿಲಯನ್ಸ್‌ ಮತ್ತು ಡಿಸ್ನಿ ನಡುವಿನ 8.5 ಬಿಲಿಯನ್‌ ಡಾಲರ್‌ ಒಪ್ಪಂದದ ಬಗ್ಗೆಯೂ ಟೈಮ್‌ ನಿಯತಕಾಲಿಕ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Exit mobile version