Site icon Vistara News

Reliance Jio Down: ದೇಶಾದ್ಯಂತ ಜಿಯೋ ನೆಟ್‌ವರ್ಕ್‌ ಡೌನ್;‌ ಇಂಟರ್‌ನೆಟ್‌ ಇಲ್ಲದೆ ಅಲ್ಲೋಲಕಲ್ಲೋಲ!

Reliance Jio Down

Reliance Jio down: Thousands of users unable to access mobile internet, complain on social media

ನವದೆಹಲಿ: ಕರ್ನಾಟಕ ಸೇರಿ ದೇಶಾದ್ಯಂತ ರಿಲಯನ್ಸ್‌ ಜಿಯೋ ನೆಟ್‌ವರ್ಕ್‌ ಡೌನ್‌ (Reliance Jio Down) ಆಗಿದ್ದು, ನೆಟ್‌ವರ್ಕ್‌ ಇಲ್ಲದೆ, ಇಂಟರ್‌ನೆಟ್‌ ಇಲ್ಲದೆ ಜನರ ಪರದಾಡುತ್ತಿದ್ದಾರೆ. ಮೊಬೈಲ್‌ ಇಂಟರ್‌ನೆಟ್‌ (Mobile Internet), ಜಿಯೋ ಫೈಬರ್‌, ಮೊಬೈಲ್‌ ನೆಟ್‌ವರ್ಕ್‌ (Mobile Network) ಸೇರಿ ಗ್ರಾಹಕರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ಎಕ್ಸ್‌ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾವಿರಾರು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಇಂಟರ್‌ನೆಟ್‌, ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ಇದುವರೆಗೆ ರಿಲಯನ್ಸ್‌ ಜಿಯೋ (Reliance Jio) ಪ್ರತಿಕ್ರಿಯೆ ನೀಡಿಲ್ಲ.

ಸರ್ವರ್‌ಗಳ ಮೇಲೆ ನಿಗಾ ಇಡುವ ಡೌನ್‌ಡಿಟೆಕ್ಟರ್‌ ಸಂಸ್ಥೆ ವರದಿ ಪ್ರಕಾರ ಶೇ.54ರಷ್ಟು ಗ್ರಾಹಕರು ಮೊಬೈಲ್‌ ಇಂಟರ್‌ನೆಟ್‌ ಸಮಸ್ಯೆ ಬಗ್ಗೆ ದೂರಿದರೆ, ಶೇ.38ರಷ್ಟು ಜಿಯೋ ಬಳಕೆದಾರರು ಜಿಯೋ ಫೈಬರ್‌ ಹಾಗೂ ಶೇ.7ರಷ್ಟು ಗ್ರಾಹಕರು ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ದೂರಿದ್ದಾರೆ ಎಂದು ತಿಳಿಸಿದೆ. ಬೆಂಗಳೂರು, ಹೈದರಾಬಾದ್‌, ಚೆನ್ನೈ ಸೇರಿ ದೇಶದ ಮೂಲೆ ಮೂಲೆಗಳ ಗ್ರಾಹಕರು ಎಕ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ಇಂಟರ್‌ನೆಟ್‌, ನೆಟ್‌ವರ್ಕ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಜಿಯೋ ಸಮಸ್ಯೆಯಾಗಿದೆ. ಇನ್ನೂ ಕೆಲವರು, ಇಂಟರ್‌ನೆಟ್‌ ಕನೆಕ್ಷನ್‌ ಇದೆ. ಆದರೆ, ದಿನ ನಿತ್ಯ ಬಳಸುವ ಫೇಸ್‌ಬುಕ್‌, ವಾಟ್ಸ್ಯಾಪ್‌, ಜಿಯೋ ಟಿವಿ ಸೇರಿ ಹಲವು ಅಪ್ಲಿಕೇಶನ್‌ಗಳನ್ನು ಓಪನ್‌ ಮಾಡಲು ಆಗುತ್ತಿಲ್ಲ ಎಂಬುದಾಗಿ ತಿಳಿದುಬಂದಿದೆ. ದೇಶಾದ್ಯಂತ ಕೋಟ್ಯಂತರ ಜನ ಜಿಯೋ ಸಿಮ್‌, ಜಿಯೋ ಫೈಬರ್‌ಅನ್ನು ಬಳಸುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಜನ ದೂರಿದ್ದಾರೆ.

ಕೆಲ ತಿಂಗಲ ಹಿಂದೆ ಎಕ್ಸ್‌ ಸಾಮಾಜಿಕ ಜಾಲತಾಣದ ಸರ್ವರ್‌ ಡೌನ್‌ ಆಗಿತ್ತು, ಶೇ.53ರಷ್ಟು ಜನ ವೆಬ್‌ನಲ್ಲಿ ಸಮಸ್ಯೆ ಎದುರಿಸಿದರೆ, ಶೇ.29ರಷ್ಟು ಮಂದಿಗೆ ಸರ್ವರ್‌ನಲ್ಲಿ ಸಮಸ್ಯೆ ಎದುರಾಗಿದೆ ಹಾಗೂ ಶೇ.18ರಷ್ಟು ಬಳಕೆದಾರರು ಅಪ್ಲಿಕೇಶನ್‌ನಲ್ಲಿ (App) ಸಮಸ್ಯೆ ಎದುರಿಸಿದ್ದಾರೆ. ಒಂದಷ್ಟು ಜನರಿಗೆ ಪೋಸ್ಟ್‌ಗಳು, ಅಪ್‌ಡೇಟ್‌ಗಳು ಕಾಣಿಸಿಲ್ಲ. ಇನ್ನೂ ಒಂದಷ್ಟು ಜನರ ಖಾತೆಗಳು ಲಾಗೌಟ್‌ ಆಗಿವೆ. ಕೆಲವೊಂದಿಷ್ಟು ಮಂದಿಗೆ ತಮ್ಮ ಪೋಸ್ಟ್‌ಗಳು ಅಪ್‌ಲೋಡ್‌ ಆಗಿಲ್ಲ ಎಂಬುದಾಗಿ ಡೌನ್‌ಡಿಟೆಕ್ಟರ್‌ ಮಾಹಿತಿ ನೀಡಿತ್ತು.

ಇದನ್ನೂ ಓದಿ: Facebook, Instagram Down: ಫೇಸ್‌ಬುಕ್‌, ಇನ್​ಸ್ಟಾಗ್ರಾಮ್​ ಸರ್ವರ್​ ಡೌನ್​; ಬಳಕೆದಾರರ ಪರದಾಟ

Exit mobile version