Site icon Vistara News

Reliance Retail: ರಿಲಯನ್ಸ್ ರಿಟೇಲ್‌ನ ‘ಟಿರಾ’ ಜತೆ ’82°E’ ಬ್ರ್ಯಾಂಡ್ ಪಾಲುದಾರಿಕೆ

82° E brand partnership with Reliance Retail Tira

ಮುಂಬೈ: ಬಾಲಿವುಡ್‌ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರ ಸೆಲ್ಫ್-ಕೇರ್ ಬ್ರ್ಯಾಂಡ್ ’82°ಇ’ (82°E), ರಿಲಯನ್ಸ್ ರೀಟೇಲ್‌ನ (Reliance Retail) ಸೌಂದರ್ಯವರ್ಧಕ ಉತ್ಪನ್ನಗಳ ವೇದಿಕೆ ಆಗಿರುವ ‘ಟಿರಾ’ ಜತೆ ಪಾಲುದಾರಿಕೆಯನ್ನು ಘೋಷಿಸಿದ್ದು, ಈ ಪಾಲಯದಾರಿಕೆಯಿಂದ ’82°ಇ’, ಬ್ರ್ಯಾಂಡ್‌ನ ಉತ್ಪನ್ನಗಳು ‘ಟಿರಾ’ ದ ಆನ್‌ಲೈನ್ ಮತ್ತು ಆಫ್‌ಲೈನ್ ಫ್ಲಾಟ್‌ಫಾರಂಗಳಲ್ಲಿ ದೊರೆಯಲಿವೆ.

82°ಇ’ ಬ್ರ್ಯಾಂಡ್‌, ಚರ್ಮದ ಆರೈಕೆ ಮತ್ತು ದೇಹದ ಆರೈಕೆ ಉತ್ಪನ್ನಗಳೊಂದಿಗೆ ಪುರುಷರಿಗೆ ವಿಶೇಷ ಶ್ರೇಣಿಯನ್ನು ತಂದಿದೆ. ಅಶ್ವಗಂಧ ಬೌನ್ಸ್, ಲೋಟಸ್ ಸ್ಪ್ಲಾಶ್ ಮತ್ತು ಅರಿಶಿನ ಶೀಲ್ಡ್‌ನಂತಹ ಹೆಚ್ಚು ಮಾರಾಟವಾಗುವ ಉತ್ಪನ್ನಗಳು ‘ಟಿರಾ’ದಲ್ಲಿ ಸಿಗುತ್ತವೆ. ಆರಂಭದಲ್ಲಿ, ’82°ಇ’ನ ಉತ್ಪನ್ನಗಳು ಮುಂಬೈ, ದೆಹಲಿ, ಬೆಂಗಳೂರು ಮತ್ತು ಪುಣೆಯ ‘ಟಿರಾ’ದ ಆಫ್‌ಲೈನ್ ಮಳಿಗೆಗಳಲ್ಲಿ ಲಭ್ಯವಿರುತ್ತವೆ. ನಂತರದಲ್ಲಿ ಇತರ ನಗರಗಳಲ್ಲಿಯೂ ಲಭ್ಯವಾಗಲಿವೆ.

ಇದನ್ನೂ ಓದಿ: Gold price: 2000ರಲ್ಲಿ 4,400 ರೂ, 2024ರಲ್ಲಿ 71,414 ರೂ! ಚಿನ್ನ ದರ ಏರಿಕೆ ಹಾದಿ ಹೇಗಿದೆ ನೋಡಿ!

ಈ ಕುರಿತು ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಎಂ. ಅಂಬಾನಿ ಮಾತನಾಡಿ, ಸ್ವ-ಆರೈಕೆಯ ಪ್ರಸಿದ್ಧ ಬ್ರಾಂಡ್ ’82°ಇ’ ನೊಂದಿಗೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ. ಈ ಸಹಭಾಗಿತ್ವವು ಟಿರಾ ದ ವಹಿವಾಟನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಗ್ರಾಹಕರಿಗೆ ಚರ್ಮದ ಆರೈಕೆಯ ಪ್ರೀಮಿಯಂ ಉತ್ಪನ್ನಗಳನ್ನು ತಲುಪಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಚಿತ್ರನಟಿ ಮತ್ತು ’82°ಇ’ ಸಹ-ಸಂಸ್ಥಾಪಕಿ ದೀಪಿಕಾ ಪಡುಕೋಣೆ ಈ ಕುರಿತು ಮಾತನಾಡಿ, ’82°ಇ’ ಉತ್ಪನ್ನಗಳು ಈಗ ಆನ್‌ಲೈನ್‌ನಲ್ಲಿ ಮತ್ತು ಟೀರಾ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಘೋಷಿಸಲು ನಾವು ಸಂತೋಷ ಪಡುತ್ತೇವೆ. ಚರ್ಮದ ಆರೈಕೆಯನ್ನು ಸರಳೀಕರಿಸುವುದು ಮತ್ತು ಸ್ವ- ಆರೈಕೆಯನ್ನು ನಮ್ಮ ದೈನಂದಿನ ಜೀವನದ ಒಂದು ಭಾಗವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಟಿರಾ ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್ ಫಾರ್ಮ್‌ಗಳಲ್ಲಿ ನಾವು ’82°ಇ’ ಸ್ಕಿನ್ ಕೇರ್, ’82°ಇ’ ಬಾಡಿ ಕೇರ್ ಮತ್ತು ’82°ಇ’ ಮ್ಯಾನ್‌ನಂತಹ ಅತ್ಯುತ್ತಮ ಮಾರಾಟದ ಉತ್ಪನ್ನಗಳನ್ನು ತರುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಟಿರಾ ಅಪ್ಲಿಕೇಶನ್, ವೆಬ್‌ಸೈಟ್ ಮತ್ತು ಟಿರಾದ ಆಯ್ದ ಸ್ಟೋರ್‌ಗಳಲ್ಲಿ 82°ಇ’ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ಇದನ್ನೂ ಓದಿ: Karnataka Weather : ಬಿರುಗಾಳಿ ಮಳೆಗೆ ಕಲಬುರಗಿ ತತ್ತರ; ನಾಳೆಯೂ ಹಲವೆಡೆ ವರುಣನ ಅಬ್ಬರ

ಉತ್ಪನ್ನಗಳು ಲಭ್ಯವಿರುವ ಮಳಿಗೆಗಳು

ಜಿಯೋ ವರ್ಲ್ಡ್‌ಡ್ರೈವ್, ಮುಂಬೈ, ವಿವಿಯಾನಾ ಮಾಲ್, ಠಾಣೆ, ಮುಂಬೈ, ಕೊಪಾ (KOPA), ಪುಣೆ, ಮಾಲ್ ಆಫ್ ಏಷ್ಯಾ, ಬೆಂಗಳೂರು, ಡಿಎಲ್ಎಫ್ ಸಾಕೇತ್, ನವದೆಹಲಿ.

Exit mobile version