ನವದೆಹಲಿ: ಇಂಡಿಯಾವನ್ನು (India) ಭಾರತ (Bharat) ಎಂದು ಮರುನಾಮಕರಣ ಮಾಡುವ ಕುರಿತು ಈಗ ದೇಶದಲ್ಲಿ ಚರ್ಚೆ ಶುರುವಾಗಿದೆ. ಇದೇ ತಿಂಗಳು ನಡೆಯಲಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ (Parliament Special Session) ಸಂವಿಧಾನದಲ್ಲಿ ಬಳಸಲಾಗಿರುವ ಇಂಡಿಯಾ ಪದ ಬದಲಿಗೆ ಭಾರತ (India rename Bharat) ಎಂದು ಸೇರಿಸುವ ಬಗ್ಗೆ ವಿಧೇಯಕವನ್ನು ಕೇಂದ್ರ ಸರ್ಕಾರವು (Central Government) ಮಂಡಿಸಲಿದೆ ಎನ್ನಲಾಗುತ್ತಿದೆ. ಈಗ ಈ ಚರ್ಚೆಗೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ (Subramanian Swamy) ಎಂಟ್ರಿ ಕೊಟ್ಟಿದ್ದು, ಅವರು ಹೊಸ ಬೇಡಿಕೆಯನ್ನು ಪ್ರಧಾನಿ ಮೋದಿ (PM Narendra Modi) ಮುಂದೆ ಇಟ್ಟಿದ್ದಾರೆ. ಹೇಗಿದ್ದರೂ ಮೋದಿ ಅವರು ಮರುನಾಮಕರಣ ಮಾಡುವ ಹುನ್ನಾರದಲ್ಲಿದ್ದಾರೆ. ಹಾಗಾಗಿ, ನೆಹರು (Pandit Jawaharlal Nehru) ಬದಲಿಗೆ ಸುಭಾಶ್ ಚಂದ್ರ ಬೋಸ್ (subhash chandra bose) ಅವರನ್ನು ಭಾರತದ ಮೊದಲ ಪ್ರಧಾನಿ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಕ್ಸ್ ವೇದಿಕೆ(ಈ ಮೊದಲ ಟ್ವಿಟರ್)ಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿಯ ಹಿರಿಯ ನಾಯಕು ಹಾಗೂ ಇತ್ತೀಚಿಗೆ ಮೋದಿ ವಿರೋಧಿ ನಾಯಕನಾಗಿ ಬದಲಾಗಿರುವ ಸುಬ್ರಮಣಿಯನ್ ಸ್ವಾಮಿ ಅವರು, ಮೋದಿಯವರು ಮರುನಾಮಕರಣ ಮಾಡುವ ಹುನ್ನಾರದಲ್ಲಿರುವುದರಿಂದ ಅವರು ಸುಭಾಷ್ ಚಂದ್ರ ಬೋಸ್ ಅವರನ್ನು 1943 ರ ಭಾರತದ ಮೊದಲ ಪ್ರಧಾನಿ ಎಂದು ಘೋಷಿಸಬೇಕು. ಸುಭಾಶ್ ಚಂದ್ರ ಬೋಸ್ ಅವರು ಅಂದು ಹೋರಾಡಿದ್ದು ಕಠಿಣವಾಗಿತ್ತು. ಬ್ರಿಟಿಷ್ ಸಹಭಾಗಿತ್ವದಲ್ಲಿ ನೆಹರು ವಂಚನೆಯ ಮೂಲಕ ಪಡೆದುಕೊಂಡಿರುವಂಥದ್ದಲ್ಲ ಎಂದು ಹೇಳಿದ್ದಾರೆ. ಸುಬ್ರಮಣಿನಯ್ ಸ್ವಾಮಿ ಅವರು ಸುಭಾಶ್ ಚಂದ್ರ ಬೋಸ್ ಅವರನ್ನು ಭಾರತದ ಮೊದಲ ಪ್ರಧಾನಿ ಎಂದು ಘೋಷಿಸುವ ಬೇಡಿಕೆಯನ್ನು ಇದೇ ಮೊದಲ ಬಾರಿಗೆ ಇಟ್ಟಿದ್ದಲ್ಲ. ಈ ಹಿಂದೆಯೂ ಅವರು ಇಂಥ ಬೇಡಿಕೆಯನ್ನು ಮಂಡಿಸಿದ್ದರು.
Since Modi is on a renaming spree he should declare Subhash Chandra Bose as the first Prime Minister of India 1943. It was a hard fought battle and not as of Nehru who got it through tigdam with British complicity.
— Subramanian Swamy (@Swamy39) September 5, 2023
ದೇಶಇಂಡಿಯಾ ಅಲ್ಲ ಭಾರತ! ವಿಶೇಷ ಅಧಿವೇಶನದಲ್ಲಿ ದೇಶ ಮರುನಾಮಕರಣಕ್ಕೆ ವಿಧೇಯಕ
ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ ದೇಶದ ಹೆಸರನ್ನು ʼಭಾರತʼ (Bharath) ಎಂದು ಮರುನಾಮಕರಣ ಮಾಡಲು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಹೊಸ ವಿಧೇಯಕವನ್ನು ತರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಈ ಮೂಲಕ ಪ್ರತಿಪಕ್ಷಗಳ ಒಕ್ಕೂಟ ʼINDIA bloc’ಗೆ ಟಕ್ಕರ್ ಕೊಡಲು ಮೋದಿ ಸರ್ಕಾರ ಮುಂದಾಗಿದೆ. ವಿಪಕ್ಷಗಳ ಒಕ್ಕೂಟ “I.N.D.I.A’ ಎಂದು ಹೆಸರಿಟ್ಟುಕೊಂಡ ಬಳಿಕ ಈ ಪದವನ್ನು ಬಳಸುವ ಸಂದರ್ಭಗಳಲ್ಲೆಲ್ಲಾ ಕೇಂದ್ರ ಸರ್ಕಾರ “ಭಾರತʼ ಎಂಬ ಪದವನ್ನು ಬಳಸುತ್ತಿದೆ.
ಈ ಸುದ್ದಿಯನ್ನೂ ಓದಿ: Virender Sehwag: ‘ಇದು ಟೀಮ್ ಇಂಡಿಯಾ ಅಲ್ಲ’; ವಿಶ್ವಕಪ್ ತಂಡ ಪ್ರಕಟದ ಬೆನ್ನಲ್ಲೇ ಅಚ್ಚರಿಯ ಟ್ವೀಟ್ ಮಾಡಿದ ಸೆಹವಾಗ್
ಇತ್ತೀಚೆಗೆ ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 9ರ G20 ಔತಣಕೂಟಕ್ಕೆ ಪ್ರತಿಪಕ್ಷಗಳಿಗೆ ಆಹ್ವಾನ ಹೋಗಿದ್ದು, ಅದರಲ್ಲಿ president of India’ ಬದಲಿಗೆ president of Bharatʼ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದ ವಿರುದ್ಧ ಟೀಕೆ ಆರಂಭಿಸಿದೆ.
“ಸುದ್ದಿ ನಿಜವಾಗಿದೆ. ರಾಷ್ಟ್ರಪತಿ ಭವನವು ಸೆಪ್ಟೆಂಬರ್ 9ರಂದು ಸಾಮಾನ್ಯವಾಗಿರುತ್ತಿದ್ದ ʼPresident of India’ ಬದಲಿಗೆ president of Bharatʼ ಎಂದು G20 ಔತಣಕೂಟಕ್ಕೆ ಆಹ್ವಾನವನ್ನು ಕಳುಹಿಸಿದೆʼʼ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಈಗ ಸಂವಿಧಾನದ 1ನೇ ವಿಧಿಯಲ್ಲಿ ಹೀಗೆ ಓದಬಹುದು: ʼಭಾರತ, ಇಂಡಿಯಾ ಎದು ಕರೆಯಲ್ಪಡುತ್ತಿತ್ತು, ರಾಜ್ಯಗಳ ಒಕ್ಕೂಟವಾಗಿರುತ್ತದೆ’. ಈ ‘ಯುನಿಯನ್ ಆಫ್ ಸ್ಟೇಟ್ಸ್’ ಕೂಡ ಆಕ್ರಮಣಕ್ಕೆ ಒಳಗಾಗಲಿದೆ” ಎಂದು ಅವರು ಟೀಕಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.