Site icon Vistara News

Jagdeep Dhankhar | ನ್ಯಾಯಾಂಗವು ಲಕ್ಷ್ಮಣ ರೇಖೆ ಅರಿಯಲಿ, ಸುಪ್ರೀಂ ತೀರ್ಪು ಕುರಿತು ಉಪ ರಾಷ್ಟ್ರಪತಿ ಅಸಮಾಧಾನ ಏಕೆ?

Jagdeep Dhanka

ನವದೆಹಲಿ: ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಭಾಷಣ ಮಾಡಿದ ಜಗದೀಪ್‌ ಧನಕರ್‌ (Jagdeep Dhankhar) ಅವರು ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) ವಿಧೇಯಕವನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರ ಬಗ್ಗೆ ಧನಕರ್‌ ಆಕ್ಷೇಪ ವ್ಯಕ್ತಪಡಿಸಿದ್ದು, “ಪ್ರಜಾಪ್ರಭುತ್ವದ ಮೂರು ಅಂಗಗಳು ತಮಗಿರುವ ಇತಿಮಿತಿಯನ್ನು, ಲಕ್ಷ್ಮಣ ರೇಖೆಯನ್ನು ಗೌರವಿಸಬೇಕು” ಎಂದಿದ್ದಾರೆ.

“ಎನ್‌ಜೆಎಸಿ ವಿಧೇಯಕಕ್ಕೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸರ್ವಸಮ್ಮತಿಯಿಂದ ಅಂಗೀಕಾರ ದೊರೆತಿತ್ತು. ಆದರೆ, ಈ ವಿಧೇಯಕವನ್ನು ಅಮಾನ್ಯಗೊಳಿಸುವ ಮೂಲಕ ಸುಪ್ರೀಂ ಕೋರ್ಟ್‌, ಸಂಸದೀಯ ಪ್ರಜಾಪ್ರಭುತ್ವವು ರಾಜಿ ಆಗುವಂತೆ ಮಾಡಿತು. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ಇಂತಹ ತೀರ್ಪು ಪ್ರಕಟವಾಗಿರಲಿಲ್ಲ” ಎಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಬದಲು ಎನ್‌ಜೆಎಸಿಯನ್ನು ಜಾರಿಗೆ ತರಲು ಮಂಡಿಸಿದ ವಿಧೇಯಕಕ್ಕೆ 2014ರಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ದೊರೆತಿತ್ತು. ಆದರೆ, ಸರ್ವೋಚ್ಚ ನ್ಯಾಯಾಲಯವು 2015ರಲ್ಲಿ ವಿಧೇಯಕವನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿತ್ತು. ಇದೇ ತೀರ್ಪಿನ ಬಗ್ಗೆ ಧನಕರ್‌ ಅವರು ವಾರದಲ್ಲಿಯೇ ಎರಡು ಬಾರಿ ಟೀಕಿಸಿದ್ದಾರೆ.

ಇದನ್ನೂ ಓದಿ | FIFA World Cup | ವಿಶ್ವ ಕಪ್​ ಉದ್ಘಾಟನೆಗೆ ಸಾಕ್ಷಿಯಾಗಲಿದ್ದಾರೆ ಉಪರಾಷ್ಟ್ರಪತಿ ಜಗದೀಪ್ ಧನಕರ್

Exit mobile version