Site icon Vistara News

RSS Meeting: ಸ್ವಾಭಿಮಾನದ ಆಧಾರದ ಮೇಲೆ ದೇಶದ ಪುನರುತ್ಥಾನ, ಆರೆಸ್ಸೆಸ್‌ ವಾರ್ಷಿಕ ಸಭೆಯಲ್ಲಿ ನಿರ್ಣಯ

Resurgence of the country on the basis of Selfhood, resolution of RSS in ABPS

RSS Meeting

ಚಂಡೀಗಢ: ದೇಶವನ್ನು ಸ್ವಾಭಿಮಾನದ ಆಧಾರದ ಮೇಲೆ ಪುನರುತ್ಥಾನಗೊಳಿಸುವ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ ನಿರ್ಣಯ ಕೈಗೊಂಡಿದೆ. ಹರಿಯಾಣದ ಪಾಣಿಪತ್‌ ಜಿಲ್ಲೆ ಸಮಾಲ್ಕದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ (ABPS) ಸಭೆಯಲ್ಲಿ (RSS Meeting) ನಿರ್ಣಯ ಕೈಗೊಳ್ಳಲಾಗಿದೆ.

“ವಿದೇಶಿಯರ ಆಕ್ರಮಣದ ಸಮಯದಲ್ಲೂ ಭಾರತವು ಜಗತ್ತಿನ ಸ್ವಾಸ್ಥ್ಯದ ಕುರಿತು ಯೋಚನೆ ಮಾಡುತ್ತಿತ್ತು. ಭಾರತದ ಆರ್ಥಿಕ, ಸಾಮಾಜಿಕ ಸಾಂಸ್ಕೃತಿಕ ಹಾಗೂ ಧಾರ್ಮಿಕ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡಲಾಯಿತು. ಅದರೂ, ಭಾರತವು ತ್ರಿವಳಿ ‘ಸ್ವ’ ಎಂದರೆ ಸ್ವಧರ್ಮ, ಸ್ವದೇಶ ಹಾಗೂ ಸ್ವರಾಜ್ಯಕ್ಕಾಗಿ ಹೋರಾಟ ನಡೆಸಿತು. ಈಗಲೂ ‘ಸ್ವ’ ಎಂದರೆ ಸ್ವಾಭಿಮಾನ (Selfhood)ದ ಆಧಾರದ ಮೇಲೆ ದೇಶ ನಿರ್ಮಿಸುವ ಅವಶ್ಯಕತೆ ಇದೆ” ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ.

“ಭಾರತವು ಈಗ ಸರ್ವ ಕ್ಷೇತ್ರಗಳಲ್ಲಿ ಏಳಿಗೆ ಹೊಂದುತ್ತಿದೆ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿ ಹಾಗೂ ಧಾರ್ಮಿಕ ನೆಲೆಗಟ್ಟಿನಲ್ಲಿ ಪುನರುತ್ಥಾನಗೊಳ್ಳುತ್ತಿದೆ. ಸನಾತನ ಕಾಲದಿಂದಲೂ ಭಾರತವು ವಸುದೈವ ಕುಟುಂಬಕಂ ಎಂಬ ತತ್ವದಂತೆ ನಡೆದುಕೊಂಡಿದೆ. ಈಗಲೂ ಜಾಗತಿಕ ಹಿತವನ್ನೇ ಬಯಸುತ್ತಿದೆ. ಭವಿಷ್ಯತ್ತಿನಲ್ಲೂ ಇದೇ ರೀತಿ ದೇಶ ಮುನ್ನಡೆಯಲಿದೆ” ಎಂದು ಹೇಳಿದರು. ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿ ಸಂಘದ ಹಲವು ಮುಖಂಡರು ಉಪಸ್ಥಿತರಿದ್ದರು. ಮಾರ್ಚ್‌ 14ರಂದು ಸಭೆ ಮುಗಿಯಲಿದೆ.

ಇದನ್ನೂ ಓದಿ: Garbha Sanskar: ಗರ್ಭದಲ್ಲಿರುವ ಶಿಶುವಿಗೇ ಭಗವದ್ಗೀತೆ, ರಾಮಾಯಣ ಶಿಕ್ಷಣ; ಆರೆಸ್ಸೆಸ್ ಅಂಗಸಂಸ್ಥೆಯಿಂದ ಅಭಿಯಾನ

Exit mobile version