ಕಾರ್ಗಿಲ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎಂದಿನಂತೆ ಸೈನಿಕರ ಜತೆ ದೀಪಾವಳಿ ಆಚರಿಸಲು ಸೋಮವಾರ ರಣರಂಗ ಭೂಮಿ ಕಾರ್ಗಿಲ್‌ಗೆ ತೆರಳಿದ್ದಾಗ ವಿಶೇಷ ಸಮಾಗಮವೊಂದು ನಡೆದಿದೆ. ನರೇಂದ್ರ ಮೋದಿ ಅವರು ಗುಜರಾತ್ ಪ್ರಧಾನಿ ಆಗಿದ್ದಾಗ ಅಂದರೆ, 21 ವರ್ಷದ ಹಿಂದೆ ಅಂದರೆ, 2001ರಲ್ಲಿ ಸೈನಿಕ ಶಾಲೆಯಲ್ಲಿ ಭೇಟಿಯಾಗಿದ್ದ ಬಾಲಕ ಈಗ ಸೈನಿಕನಾಗಿದ್ದು, ಸೋಮವಾರ ಕಾರ್ಗಿಲ್‌ನಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಇಂತಹ ವಿಶೇಷ ಸಂದರ್ಭದ ಖುಷಿ ತಾಳದ ಯೋಧ ಮೇಜರ್ ಅಮಿತ್, 21 ವರ್ಷದ ಹಿಂದೆ ತಾವು ಮೋದಿ ಜತೆ ತೆಗೆಸಿಕೊಂಡಿದ್ದ ಫೋಟೊವನ್ನು ಮೋದಿ ಅವರಿಗೇ ನೀಡಿದ್ದಾರೆ.
ಹೌದು, ಅಮಿತ್ ಅವರು 21 ವರ್ಷದ ಹಿಂದೆ ಗುಜರಾತ್‌ನ ಬಾಲಚಡಿಯಲ್ಲಿರುವ ಸೈನಿಕ ಶಾಲೆಯಲ್ಲಿ ಓದುತ್ತಿದ್ದರು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ಸೈನಿಕ ಶಾಲೆಗೆ ಭೇಟಿ ನೀಡಿದ್ದರು. ಇದೇ ವೇಳೆ ಮೋದಿ ಅವರು ಬಾಲಕ ಅಮಿತ್‌ಗೆ ಪಾರಿತೋಷಕವೊಂದನ್ನು ನೀಡಿದ್ದರು. ಈ ಫೋಟೊವನ್ನು ಜೋಪಾನವಾಗಿಟ್ಟುಕೊಂಡಿದ್ದ ಅದೇ ಬಾಲಕ ಈಗ ಸೇನೆಯಲ್ಲಿ ಮೇಜರ್ ಆಗಿದ್ದಾರೆ. ಸೋಮವಾರ ಮೋದಿ ಅವರನ್ನು ಭೇಟಿಯಾಗುತ್ತಲೇ 2001ರ ಅಕ್ಟೋಬರ್‌ನಲ್ಲಿ ತೆಗೆಸಿಕೊಂಡ ಫೋಟೊವನ್ನು ಮೋದಿ ಅವರಿಗೆ ನೀಡಿದ್ದಾರೆ.
“ಮೋದಿ ಅವರು ದೀಪಾವಳಿ ಹಿನ್ನೆಲೆಯಲ್ಲಿ ಕಾರ್ಗಿಲ್‌ಗೆ ಆಗಮಿಸುತ್ತಾರೆ, ಇಲ್ಲಿಯೇ ದೀಪಾವಳಿ ಆಚರಿಸುತ್ತಾರೆ ಎಂಬುದನ್ನು ತಿಳಿದು ಮೇಜರ್ ಅಮಿತ್ ಅವರಿಗೆ ಸಂತಸವಾಯಿತು. 21 ವರ್ಷದ ಬಳಿಕ ಮೋದಿ ಅವರನ್ನು ಭೇಟಿಯಾಗಿದ್ದು ಅಮಿತ್ ಅವರಿಗೆ ಇನ್ನಿಲ್ಲದ ಖುಷಿ ತಂದಿದೆ. ಇದು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು” ಎಂದು ಯೋಧರೊಬ್ಬರು ತಿಳಿಸಿದ್ದಾರೆ. ಮೋದಿ ಅವರಿಗೆ 21 ವರ್ಷದ ಹಿಂದಿನ ಫೋಟೊ ನೀಡುತ್ತಿರುವ ಫೋಟೊವೇ ಈಗ ವೈರಲ್ ಆಗಿದೆ.
ಇದನ್ನೂ ಓದಿ | PM in Kargil | ಸೈನಿಕರ ಜತೆ ಮೋದಿ ದೀಪಾವಳಿ ಆಚರಣೆ, ಭಯೋತ್ಪಾದನೆಗೆ ಅಂತ್ಯ ಹಾಡಿದ ಕಾರ್ಗಿಲ್ ಎಂದ ಪಿಎಂ