Site icon Vistara News

India Bloc: ಇಂಡಿಯಾ ಕೂಟದಲ್ಲಿ ಬಿರುಕು! ಕಾಂಗ್ರೆಸ್-ಆಪ್ ಮಧ್ಯೆ ‘ಛತ್ತೀಸ್‌ಗಢ ಶಾಲೆ’ಗಳ ಸಮರ!

Pawan Khera and Arvind Kejriwal

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ 32 ಪಕ್ಷಗಳ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವನ್ನು ಎದುರಿಸಲು 26 ಪ್ರತಿಪಕ್ಷಗಳು ಒಟ್ಟಾಗಿ ಇಂಡಿಯಾ ಕೂಟವನ್ನು (India Bloc) ರಚಿಸಿಕೊಂಡಿವೆ. ಆದರೆ, ಕೂಟದ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್ ಪಕ್ಷ (Congress party) ಮತ್ತು ಆಮ್‌ ಆದ್ಮಿ ಪಾರ್ಟಿ (Aam Aadmi Party – AAP) ನಡುವಿನ ವಾಕ್ಸಮರ ತಾರಕಕ್ಕೇರಿದೆ. ಈ ಮೂಲಕ ಚುನಾವಣೆಯ ಮೊದಲೇ ಇಂಡಿಯಾ ಕೂಟದಲ್ಲಿ ಬೃಹತ್ ಬಿರುಕು ಕಾಣಿಸಿಕೊಳ್ಳಲಾರಂಭಿಸಿದೆ. ಆಪ್‌ನ ವರಿಷ್ಠ ನೇತಾರರೂ ಆಗಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಕಾಂಗ್ರೆಸ್ ಆಡಳಿತ ಇರುವ ಛತ್ತೀಸ್‌ಗಢ ರಾಜ್ಯದ ಶಾಲೆಗಳ ದುಸ್ಥಿತಿ ಕುರಿತು ಟೀಕೆ ಮಾಡಿರುವುದು, ಕಾಂಗ್ರೆಸ್ ಪಕ್ಷದ ನಾಯಕರನ್ನು ಕೆರಳಿಸಿದೆ. ಇದರೊಂದಿಗೆ ಉಭಯ ಪಕ್ಷಗಳ ನಡುವಿನ ಆರ್ಭಟ ಮುಂದುವರಿದಿದೆ. ಈ ವರ್ಷಾಂತ್ಯಕ್ಕೆ ಛತ್ತೀಸ್‌ಗಢ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?

ಛತ್ತೀಸ್‌ಗಢದ ಸರ್ಕಾರಿ ಶಾಲೆಗಳು ಭಯಾನಕ ಸ್ಥಿತಿಯಲ್ಲಿವೆ ಎಂದು ನಾನು ವರದಿಯನ್ನು ಓದುತ್ತಿದ್ದೆ. ಅವರು ಅನೇಕ ಶಾಲೆಗಳನ್ನು ಮುಚ್ಚಿದ್ದಾರೆ. 10 ತರಗತಿಗಳಿದ್ದ ಶಾಲೆಗಳಿವೆ. ಆದರೆ ಶಿಕ್ಷಕರು ಮಾತ್ರ ಅಲ್ಲಿದ್ದಾರೆ, ವಿದ್ಯಾರ್ಥಿಗಳಿಲ್ಲ. ಅನೇಕ ಶಿಕ್ಷಕರಿಗೆ ಸಂಬಳವೂ ಸಿಗುತ್ತಿಲ್ಲ ಕೇಜ್ರಿವಾಲ್ ಅವರು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಟೀಕಿಸಿದ್ದರು.

ದಿಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ನೋಡಿ ಅಥವಾ ದೆಹಲಿಯಲ್ಲಿರುವ ನಿಮ್ಮ ಸಂಬಂಧಿಕರನ್ನು ಕೇಳಿ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಹಣ ವೆಚ್ಚ ಮಾಡಿ, ಸುಧಾರಣೆ ಮಾಡುತ್ತಿರುವ ಸರ್ಕಾರವು ಅಲ್ಲಿದೆ. ನಾವು ರಾಜಕಾರಣಿಗಳಲ್ಲ, ನಾವು ನಿಮ್ಮಂತೆಯೇ ಕೇವಲ ಸಾಮಾನ್ಯ ಜನರು ಎಂದು ಕೇಜ್ರಿವಾಲ್ ಹೇಳಿದರು.

ಈ ಸುದ್ದಿಯನ್ನೂ ಓದಿ: I.N.D.I.A Alliance: ‘ಇಂಡಿಯಾ’ ಹೆಸರಿನ ಒಕ್ಕೂಟದ ವಿರುದ್ಧ ಅರ್ಜಿ; ಹೆಸರು ನಿಷೇಧಕ್ಕೆ ಸುಪ್ರೀಂ ನಕಾರ

ತಿರುಗೇಟು ನೀಡಿದ ಕಾಂಗ್ರೆಸ್

ಛತ್ತೀಸ್‌ಗಢ ಶಾಲೆಗಳ ಕುರಿತು ಅರವಿಂದ್ ಕೇಜ್ರಿವಾಲ್‌ ಮಾಡಿರುವ ಟೀಕೆಯ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಪವನ್ ಖೇರ ಅವರು, ರಾಯಪುರಕ್ಕೆ ಏಕೆ ಹೋಗಬೇಕು? ನಮ್ಮ ಛತ್ತೀಸ್‌ಗಢ ಸರ್ಕಾರದ ಕಾರ್ಯಕ್ಷಮತೆಯನ್ನು ಹಿಂದಿನ ರಮಣ್ ಸಿಂಗ್ ಸರ್ಕಾರದೊಂದಿಗೆ ಹೋಲಿಸಲಾಗುತ್ತದೆ. ನಾವು ನಿಮ್ಮ ಆಯ್ಕೆಯ ಕ್ಷೇತ್ರವನ್ನು ಆರಿಸಿಕೊಳ್ಳೋಣ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರದ ಕಾರ್ಯಕ್ಷಮತೆಯನ್ನು ಇಲ್ಲಿ ನಿಮ್ಮ ಸರ್ಕಾರದ ವಿರುದ್ಧ ಹೋಲಿಕೆ ಮಾಡೋಣ. ಚರ್ಚೆಗೆ ಸಿದ್ಧರಿದ್ದೀರಾ? ಎಂದು ಟ್ವೀಟ್ ಮಾಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version