ಅಗರ್ತಲ: ಪ್ರತಿಪಕ್ಷಗಳನ್ನು ಟೀಕಿಸುವ ಭರದಲ್ಲಿ ತ್ರಿಪುರ ಕಾನೂನು ಸಚಿವ ರತನ್ ಲಾಲ್ ನಾಥ್ ವಿವಾದ ಸೃಷ್ಟಿಸಿದ್ದಾರೆ. “ಪ್ರಜಾಪ್ರಭುತ್ವದ ಕುರಿತು ಮಾತನಾಡುವ ಮೊದಲು ಗೋಮೂತ್ರದಿಂದ (Cow Urine Row) ಬಾಯಿ ತೊಳೆದುಕೊಳ್ಳಿ” ಎಂದು ಸಚಿವ ಪ್ರತಿಪಕ್ಷಗಳ ನಾಯಕರಿಗೆ ಹೇಳಿದ್ದು, ಪ್ರತಿಪಕ್ಷಗಳ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ.
ಕೆಲವೇ ತಿಂಗಳುಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸಿಪಿಎಂ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ತೀರ್ಮಾನಿಸಿದ್ದಕ್ಕೆ ಪ್ರತಿಕ್ರಿಯಿಸಿದ ರತನ್ ಲಾಲ್ ನಾಥ್, “ತ್ರಿಪುರದಲ್ಲಿ ಕಾಂಗ್ರೆಸ್ ಹಾಗೂ ಸಿಪಿಎಂ ಆಡಳಿತದಲ್ಲಿದ್ದಾಗ ಹಿಂಸಾಚಾರ ಹಾಗೂ ಗಲಭೆಗಳೇ ನಡೆದಿವೆ. ಎರಡೂ ಪಕ್ಷಗಳ ನಾಯಕರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಮೊದಲು ಗೋಮೂತ್ರದಿಂದ ಬಾಯಿ ತೊಳೆದುಕೊಳ್ಳಬೇಕು” ಎಂದಿದ್ದಾರೆ.
ಕಾಂಗ್ರೆಸ್ ಹಾಗೂ ಸಿಪಿಎಂ ಬಿಜೆಪಿ ವಿರುದ್ಧ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿದ್ದವು. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯಲು ಪ್ರತಿಪಕ್ಷಗಳು ಒಗ್ಗೂಡಬೇಕು ಎಂದು ಪಕ್ಷಗಳ ನಾಯಕರು ಹೇಳಿದ್ದರು. ಇದಕ್ಕೂ ರತನ್ ಲಾಲ್ ನಾಥ್ ತಿರುಗೇಟು ನೀಡಿದ್ದಾರೆ. ಈಗ ರತನ್ ಲಾಲ್ ನಾಥ್ ಹೇಳಿಕೆಯನ್ನು ಕಾಂಗ್ರೆಸ್ ಹಾಗೂ ಸಿಪಿಎಂ ಖಂಡಿಸಿವೆ. ಸಾರ್ವಜನಿಕ ವಲಯದಲ್ಲೂ ಟೀಕೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ | ಗೋ ಸಂಪತ್ತು | ಪ್ರಪಂಚಕ್ಕೆ ಭಾರತ ನೀಡಿದ ದಿವ್ಯ ಔಷಧ ಪಂಚಗವ್ಯ