ಹೈದರಾಬಾದ್: ತರಕಾರಿ ಬೆಲೆಗಳು ಹೆಚ್ಚಾಗಿದ್ದು ಸಸ್ಯಾಹಾರಿಗಳನ್ನು ಚಿಂತೆಗೆ ಈಡು ಮಾಡಿತ್ತು. ಈಗ ಮಾಂಸಾಹಾರಿಗಳೂ ಸಹ ಬೆಲೆಯೇರಿಕೆ ಬಿಸಿ ತಟ್ಟಿದೆ. ಏಕೆಂದರೆ ಒಂದು ಕೆ.ಜಿ. ಚಿಕನ್ ಬೆಲೆ ₹300 ಆಗಿದೆ. ಇದು ಸದ್ಯ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮಾತ್ರ ಆಗಿದ್ದು, ಇದರ ಪ್ರಭಾವ ನೆರೆಯ ಕರ್ನಾಟಕದಲ್ಲಿಯೂ ಆಗುವ ಎಲ್ಲಾ ಸಾಧ್ಯತೆಗಳಿವೆ.
ಹೈದರಾಬಾದ್ ಮತ್ತು ತೆಲಂಗಾಣದಲ್ಲಿ ಕೋಳಿ ಅಂಗಡಿಗಳಲ್ಲಿ ಕಿಲೋ ಸ್ಕಿನ್ ಲೆಸ್ ಚಿಕನ್ ₹300 ವರೆಗೆ ಮಾರಾಟವಾಗುತ್ತದೆ. ಸ್ಕಿನ್ ಇರುವ ಚಿಕನ್ ₹280 ಆಗಿದೆ. ಇದರ ಬೆಲೆ ಕೇಳಿ ದಂಗಾಗಬಾರದು ಎನ್ನುವ ಕಾರಣಕ್ಕೆ ಕೆಲವು ಗ್ರಾಹಕರು 1 ಕೆಜಿ ಕೋಳಿಗೆ 4 ಮೊಟ್ಟೆಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
ಇದನ್ನೂ ಓದಿ | ಜನಸಾಮಾನ್ಯರಿಗೆ ʻಗ್ಯಾಸ್ʼ ಟ್ರಬಲ್: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ₹ 250 ಏರಿಕೆ
ಕೊರೊನಾದಿಂದಾಗಿ ಹಲವಾರು ಮದುವೆಗಳು ಮುಂದೂಡಿಕೆ ಆಗಿದ್ದವು. ಜತೆಗೆ ಹಲವು ಸಮಾರಂಭಗಳನ್ನೂ ಮುಂದೂಡಲಾಗಿತ್ತು. ಇದೀಗ ಕಾರ್ಯಕ್ರಮಗಳೆಲ್ಲವೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿಕನ್‌ಗೆ ಬೇಡಿಕೆ ಹೆಚ್ಚಾಗಿದೆ. ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವುದು ಚಿಕನ್ ಸೆಂಟರ್‌ಗಳ ಮಾಲೀಕರ ಅಭಿಪ್ರಾಯ. ಈ ಬಾರಿ ಬಿಸಿಲಿನ ಧಗೆಯು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಕೋಳಿ ಉತ್ಪಾದನೆ ಕಡಿಮೆಯಾಗಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ.
ಇವೆಲ್ಲವುಗಳ ಹೊರತಾಗಿ ಇನ್ನೊಂದು ವಾದವಿದೆ. ಅದೇನೆಂದರೆ, ಕೋಳಿ ಫಾರಂಗಳು ರೈತರ ಕೈಯಿಂದ ಬಹುರಾಷ್ಟ್ರೀಯ ಕಂಪನಿಗಳ ಕೈ ಸೇರಿದ್ದರಿಂದ ಪ್ರತಿ ಬೇಸಿಗೆಯಲ್ಲಿ ಕೋಳಿ ಬೆಲೆ ಏರಿಕೆಯಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳು ಉದ್ದೇಶಪೂರ್ವಕವಾಗಿ ಬೇಸಿಗೆಯಲ್ಲಿ ಬೆಲೆ ಏರಿಸುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ.
ಇದನ್ನೂ ಓದಿ: ಹೋಟೆಲ್‌ನಲ್ಲಿ ಕಳ್ಳತನಕ್ಕೆ ಬಂದು ಚಿಕನ್ ಹುಡುಕಾಡಿದ, ಅದೂ ಸಿಗದೆ ವಾಪಸಾದ !