Site icon Vistara News

Robert Vadra: ಸೋನಿಯಾ ಅಳಿಯ ವಾದ್ರಾಗೆ ಎದುರಾಯ್ತು ಸಂಕಟ! ಇ.ಡಿ ಚಾರ್ಜ್‌ಶೀಟ್‌ನಲ್ಲಿ ಏನಿದೆ?

Robert vadra London property from proceeds of crime Says ED

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Congress Leader Sonia Gandhi) ಅವರ ಅಳಿಯ, ಪ್ರಿಯಾಂಕಾ ಗಾಂಧಿ (Priyanka Gandhi) ಅವರ ಪತಿ ರಾಬರ್ಟ್ ವಾದ್ರಾಗೆ (Robert Vadra) ಸಂಕಟ ಎದುರಾಗಿದೆ. ಮಧ್ಯವರ್ತಿ ಸಂಜಯ್ ಭಂಡಾರಿ (Sanjay Bhandari) ಶಾಮೀಲಾಗಿರುವ ಹವಾಲಾ ಹಗರಣಕ್ಕೆ ಸಂಬಂಧಿಸಿದ ಲಂಡನ್ ಆಸ್ತಿಯನ್ನು ರಾಬರ್ಟ್ ವಾದ್ರಾ ಅವರು ನವೀಕರಿಸಿ ಮತ್ತು ಅದರಲ್ಲಿ ವಾಸಿಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯವು (Enforcement Directorate) ಆರೋಪಿಸಿದೆ. ಈ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ವಾದ್ರಾ ಅವರು ವಿರುದ್ಧ ಆರೋಪ ಮಾಡಲಾಗಿದೆ. ಅಪರಾಧ ಆದಾಯದಿಂದಲೇ(proceeds of crime) ರಾಬರ್ಟ್ ವಾದ್ರಾ ಆಸ್ತಿಯನ್ನು ನವೀಕರಿಸಿದ್ದಾರೆಂದು ಇ.ಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

ಸಾಕಷ್ಟು ಅಕ್ರಮ ವ್ಯವಹಾರ ಮಾಡಿರುವ ಸಂಜಯ್ ಭಂಡಾರಿ 2016ರಲ್ಲ ದೇಶ ತೊರೆದು ಬ್ರಿಟನ್‌ಗೆ ಪಲಾಯನ ಮಾಡಿದ್ದ. ಜಾರಿ ನಿರ್ದೇಶನಾಲಯ ಮತ್ತ ಕೇಂದ್ರ ತನಿಖಾ ದಳ ಸಿಬಿಐ ಮನವಿಯನ್ನು ಪುರಸ್ಕರಿಸಿರುವ ಬ್ರಿಟನ್ ಸರ್ಕಾರವು ಈ ಮುಂದಿನ ತಿಂಗಳು ಸಂಜಯ್ ಭಂಡಾರಿಯನ್ನು ಭಾರತಕ್ಕೆ ಹಸ್ತಾಂತರಿಸಲಿದೆ.

ಯುಎಇ ಮೂಲದ ಎನ್‌ಆರ್‌ಐ ಉದ್ಯಮಿ ಸಿ ಸಿ ಅಥವಾ ಚೆರುವತ್ತೂರು ಚಾಕುಟ್ಟಿ ಥಂಪಿ ಮತ್ತು ಇಂಗ್ಲೆಂಡ್ ಪ್ರಜೆ ಸುಮಿತ್ ಚಡ್ಡಾ ಅವರ ವಿರುದ್ಧ ಹೊಸ ಆರೋಪಪಟ್ಟಿ ಸಲ್ಲಿಸಿರುವುದಾಗಿ ಇಡಿ ಹೇಳಿಕೆಯಲ್ಲಿ ತಿಳಿಸಿದೆ. ಇಬ್ಬರ ವಿರುದ್ಧವೂ ಹಣಕಾಸಿನ ಅವ್ಯವಹಾರದ ಆರೋಪಗಳಿವೆ.

ರಾಬರ್ಟ್ ವಾದ್ರಾ ಅವರು ಲಂಡನ್‌ನ 12 ಬ್ರಿಯಾನ್‌ಸ್ಟನ್ ಸ್ಕ್ವೇರ್‌ನಲ್ಲಿರುವ ಆಸ್ತಿಗೆ ಸಂಬಂಧಿಸಿ ಇತರ ಆಸ್ತಿಗಳ ಜೊತೆಗೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ “ಅಪರಾಧದ ಆದಾಯ”ವನ್ನು ಬಳಸಿಕೊಂಡಿದ್ದಾರೆ. 2020ರ ಜನವರಿಯಲ್ಲಿ ಬಂಧಿಸಲಾಗಿದ್ದ ಮತ್ತು ವಾದ್ರಾ ಅವರ ನಿಕಟ ಸಹಚರ ಎಂದು ಹೇಳಲಾದ ತಂಪಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಇ. ಡಿ ಹೇಳಿದೆ.

ಇ.ಡಿ ಹೇಳಿಕೆಯ ಪ್ರಕಾರ, ಸುಮಿತ್ ಚಡ್ಡಾ ಮೂಲಕವೇ ವಾದ್ರಾ ಅವರು ಲಂಡನ್ ಆಸ್ತಿಯ ನವೀಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ವಾದ್ರಾ ಮತ್ತು ಥಂಪಿ ಇಬ್ಬರೂ ತಮ್ಮ ಹಣದ ವ್ಯವಹಾರದ ಜತೆಗೆ ದೆಹಲಿಯ ಬಳಿ ಗಮನಾರ್ಹವಾದ ಭೂಸ್ವಾಧೀನದಲ್ಲಿ ಭಾಗಿಯಾಗಿದ್ದಾರೆಂದು ಹೇಳಿಕೊಂಡಿದ್ದಾರೆ ಎಂದು ಇ.ಡಿ ಹೇಳಿದೆ.

ಈ ಸುದ್ದಿಯನ್ನೂ ಓದಿ: Robert Vadra | ನ್ಯಾಯಾಲಯಕ್ಕೆ ಭೇಷರತ್‌ ಕ್ಷಮೆಯಾಚಿಸಿದ ರಾಬರ್ಟ್‌ ವಾದ್ರಾ, ಕಾರಣ ಏನು?

Exit mobile version